ಬ್ರಹ್ಮಾವರ: ಪ್ರಕೃತಿಯಲ್ಲಿ ಮಣ್ಣಿಗೆ ಬಿದ್ದ ಬೀಜ ಸಹಜವಾಗಿ ಮೊಳಕೆಯೊಡೆಯುತ್ತದೆ. ಮೊಳಕೆಯೊಡೆದ ಬೀಜವನ್ನು ನೀರೆರೆದು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೂರ್ತಿದೇರಾಜೆ ವಿಟ್ಲ ಹೇಳಿದರು.
ಬ್ರಹ್ಮಾವರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ “ರೆಕ್ಕೆ ಕಟ್ಟೋಣ ಬಾ’ ಬೇಸಗೆ ಶಿಬಿರದ ಸಮಾರೋಪದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಹುಟ್ಟುವಾಗ ಮಗುವಿಗೆ ಸಹಜವಾಗಿ ರೆಕ್ಕೆ ಇರುತ್ತದೆ, ಆದರೆ ನಾವದನ್ನು ಕತ್ತರಿಸುತ್ತೇವೆ. ಮಕ್ಕಳನ್ನು ಮಕ್ಕಳಾಗಿ ಬೆಳೆಯಲು ಬಿಟ್ಟರೆ ಮತ್ತೆ ರೆಕ್ಕೆ ಕಟ್ಟಬೇಕಾ ಗಿಲ್ಲ. ಬೆಳೆಯುತ್ತಾ ಅವರಿಗೆ ಸ್ವತ್ಛಂದವಾಗಿ ಹಾರಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಇನ್ನೋರ್ವ ಅತಿಥಿ ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತ ಉಪನ್ಯಾಸಕಿ ಸುಧಾ ಹೆಗಡೆ ಮಾತನಾಡಿ, ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್ ಕೊಟ್ಟು ಅವುಗಳ ಲೋಕದಲ್ಲಿ ಬಂಧಿಸುತ್ತಿದ್ದೇವೆ. ಅವರಿಗೆ ಸಮಸ್ಯೆ ಎದುರಿಸುವುದು, ಸಾಮಾಜಿಕವಾಗಿ ಬೆರೆಯುವುದು ತಿಳಿದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಈ ಶಿಬಿರ ಮಕ್ಕಳಲ್ಲಿ ಮುಕ್ತವಾಗಿ ಕಲಿಯುವ ಅವಕಾಶ ಕಲ್ಪಿಸಿದೆ ಎಂದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀವನ್ ವಿಕ್ಟರ್ ಲೂವಿಸ್ ಅವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಈ ಶಿಬಿರ ಮುಕ್ತ ವೇದಿಕೆ ಕಲ್ಪಿಸಿದೆ ಎಂದರು. ಶಾಲಾಡಳಿತ ಮಂಡಳಿಯ ಸದಸ್ಯೆ ಲವೀನಾ ಲೂವಿಸ್ ಶಿಬಿರದ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದರು. ಅತಿಥಿ, ತರಬೇತಿದಾರರನ್ನು ಗೌರವಿಸಲಾಯಿತು. ಪ್ರಾಂಶುಪಾಲೆ ಅಭಿಲಾಷಾ ಎಸ್. ಸ್ವಾಗತಿಸಿ, ಶಿಕ್ಷಕಿ ಪಿ. ಸುಶೀಲಾ ವಂದಿಸಿದರು. ವಿದ್ಯಾರ್ಥಿನಿ ದೀûಾ ನಿರೂಪಿಸಿದರು.
ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ “ಕುವೆಂಪು ರಂಗಾನನ’ ನಡೆಯಿತು. ಮಕ್ಕಳ ಸಂಗೀತ ಮತ್ತು ಕಲಾ ಪ್ರದರ್ಶನವೂ ಜರಗಿತು.