Advertisement

ಕ್ಯಾನ್ಸರ್‌ ಜಾಗೃತಿಗೆ ವಾಕಾಥಾನ್‌

12:06 PM Jul 23, 2018 | Team Udayavani |

ಬೆಂಗಳೂರು: ಕ್ಯಾನ್ಸರ್‌ ಜಾಗೃತಿಗಾಗಿ “ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ’ (ಅಕ್ಕ) ಭಾನುವಾರ ಕಬ್ಬನ್‌ಪಾರ್ಕ್‌ನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು. ಜಿಸಿಎಸ್‌ಆರ್‌ಟಿ ಸಂಸ್ಥೆ, ಸಂಜೆ ಸಮಯ ದಿನಪತ್ರಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಥಾಗೆ ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ಚಾಲನೆ ನೀಡಿದರು.

Advertisement

ಜಾಥಾದಿಂದ ಸಂಗ್ರಹವಾಗುವ ಮೊತ್ತದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಕ್ಯಾನ್ಸರ್‌ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ “ಮೊಬೈಲ್‌ ಮ್ಯಾಮೋಗ್ರಾಫಿ ಬಸ್‌’ ಖರೀದಿಸುವ ಉದ್ದೇಶ ಹೊಂದಲಾಗಿದೆ.

ಈ ವೇಳೆ ಮಾತನಾಡಿದ ಮೇಯರ್‌ ಸಂಪತ್‌ರಾಜ್‌, ಕ್ಯಾನ್ಸರ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಜಾಥಾಗಳು ಸಹಕಾರಿಯಾಗಲಿವೆ ಎಂದರು. ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಪಾಲಿಕೆ ಸದಸ್ಯ ವಾಜಿದ್‌, ಅಕ್ಕ ಸಂಸ್ಥೆ ಅಧ್ಯಕ್ಷ ಶಿವಮೂರ್ತಿ,

ಮಮತಾ ದೇವರಾಜ್‌, ಜೆ.ಎಚ್‌.ಅನಿಲಕುಮಾರ್‌, ಜಿಸಿಎಸ್‌ಆರ್‌ಟಿ ಸಂಸ್ಥೆಯ ಶುಭಾ ಸುನೀಲ್‌, ಚಿತ್ರ ನಟರಾದ ಅನಿರುದ್ಧ್, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್‌, ಸಂಯುಕ್ತ ಹೊರನಾಡು, ಶಮಿತಾ ಮಲಾ°ಡ್‌, ಪ್ರಥಮ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next