Advertisement
“ಮತಾಂತರ ವಿರೋಧಿ ಮಸೂದೆ’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಕಮ ಲ್ರುಖ್ ತಮ್ಮ ದಾಂಪ ತ್ಯದ ಬಿರುಕಿನ ಕಥೆ ಹೇಳಿಕೊಂಡಿದ್ದಾರೆ. “ಪಾರ್ಸಿ ಜನಾಂಗದ ನಾನು ವಾಜಿದ್ನನ್ನು 10 ವರ್ಷ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದೆ. ಆದರೆ ವಾಜಿದ್ನ ತಾಯಿ ಮತ್ತು ಕುಟುಂಬದ ಇತರೆ ಸದಸ್ಯರು ನನ್ನನ್ನು ತಮ್ಮ ಧರ್ಮಕ್ಕೆ ಮತಾಂತರಗೊಳ್ಳಲು ಭಾರೀ ಒತ್ತಡ ಹೇರಿದ್ದರು. ಈ ಕಿರುಕುಳ ತಾಳಲಾರದೆ ನಾನು ವಾಜಿದ್ ಜತೆಗಿನ ದಾಂಪತ್ಯ ಜೀವನದಿಂದ ಹೊರಬಂದಿದ್ದೆ’ ಎಂದು ತಿಳಿಸಿದ್ದಾರೆ. ಮತಾಂತರ ವಿರೋಧಿ ಮಸೂದೆ ಚರ್ಚೆಯ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಾಕಿಕೊಂಡಿರುವುದಾಗಿಯೂ ಕಮಲ್ರುಖ್ ಸ್ಪಷ್ಪಪಡಿಸಿದ್ದಾರೆ. “ವಾಜಿದ್ ಒಬ್ಬ ಅದ್ಭುತ ಟ್ಯಾಲೆಂಟ್ ಹೊಂದಿದ ವ್ಯಕ್ತಿ. ನಾನು, ನನ್ನ ಮಕ್ಕಳು ಅವನನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ದುಃಖ ತೋಡಿಕೊಂಡಿದ್ದಾರೆ. Advertisement
ಗಾಯಕ ವಾಜಿದ್ ಪತ್ನಿಗೂ ಮತಾಂತರ ಕಿರುಕುಳ!
07:34 AM Nov 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.