Advertisement

ವೇಟಿಂಗ್‌ ಲಿಸ್ಟ್‌ನ ಪ್ರಯಾಣಿಕರಿಗೆ ಸಿಹಿಸುದ್ದಿ

12:31 AM Sep 09, 2020 | mahesh |

ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಇಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿ­ಕರು ಓಡಾಡುವ ಮಾರ್ಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆಯೋ, ಅಂಥ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುತ್ತದೆ. ಈ ವ್ಯವಸ್ಥೆಯನ್ನು “ಕ್ಲೋನ್‌ ಟ್ರೈನ್‌’ ಎಂದು ಕರೆಯಲಾಗುತ್ತದೆ.

Advertisement

ಮುಂದಿನ 15 ದಿನಗಳಲ್ಲೇ ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವೈ.ಕೆ.ಯಾದವ್‌ ತಿಳಿಸಿದ್ದಾರೆ. ನಿಗದಿತ ರೈಲುಗಳಿಗೆ ಬೇಡಿಕೆ ಇರುವಲ್ಲಿ ಹೆಚ್ಚುವರಿಯಾಗಿ ರೈಲು ಓಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತೆ ಮಾಡಲಾಗುತ್ತದೆ. ಆದರೆ, ಈ ರೈಲುಗಳಿಗೆ ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಇರುವುದಿಲ್ಲ. ನಿಗದಿತ ರೈಲಿನ ಸಂಚಾರ ಆರಂಭವಾಗುವ ಮುನ್ನವೇ ಕ್ಲೋನ್‌ ರೈಲುಗಳು ಸಂಚರಿಸಲಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಿ­ರಲಿದೆ ಎಂದು ಅವರು ಹೇಳಿದ್ದಾರೆ.

ಕ್ಲೋನ್‌ ರೈಲು ವ್ಯವಸ್ಥೆಯಲ್ಲಿ ಒಂದೇ ಹೆಸರಲ್ಲಿ ಮತ್ತೂಂದು ರೈಲನ್ನು ಹೆಚ್ಚುವರಿ­ಯಾಗಿ ಓಡಿಸಲಾಗುತ್ತದೆ. ಉದಾ­ಹರಣೆಗೆ, 12423/12424  ಹೊಸದಿಲ್ಲಿ – ದಿಬ್ರೂಗಢ ರಾಜಧಾನಿ ಎಕ್ಸ್‌ಪ್ರೆಸ್‌ ನಲ್ಲಿ ಇರುವ ಎಲ್ಲಾ ಸೀಟ್‌ಗಳು ಕಾಯ್ದಿರಿಸಿದ್ದರೆ, ರೈಲ್ವೇ ಇಲಾಖೆಯು ಅದೇ ಹೆಸರಿನ ಮತ್ತೂಂದು ರೈಲನ್ನು ಓಡಿಸುತ್ತದೆ. ಆದರೆ ಇಂಥ ವ್ಯವಸ್ಥೆ­ಯನ್ನು ಶುರು ಮಾಡಲು ಹೆಚ್ಚುವರಿ ರೈಲುಗಳ ಅಗತ್ಯತೆಯೂ ಸರಕಾರಕ್ಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next