ನೀನು ನನ್ನನ್ನು ಬಿಟ್ಟು ಹೋಗಿ ಮೂರು ವರ್ಷ ಆಗ್ತಾ ಬಂತು. ಹುಟ್ಟು ಹಬ್ಬಕ್ಕೆ ವಿಶ್ ಮಾಡಿಲ್ಲ ಅನ್ನೋದನ್ನೇ ನೆಪವಾಗಿಸಿ, ಬಿಟ್ಟು ಹೋಗಿದ್ದು ಸರೀನಾ ಹೇಳು? ಓದೋದಕ್ಕೆ ಅಂತ ಬೇರೆ ಊರಿಗೆ ಹೋಗಿದ್ದೇ ನಾನು ಮಾಡಿದ ದೊಡ್ಡ ತಪ್ಪು ಅಂತನ್ನಿಸುತ್ತಿದೆ ಈಗ. ನಾನು ಓದಿನಲ್ಲಿ ಬ್ಯುಸಿ ಆಗೋದೆ ನಿಜ. ಹಾಗಂತ, ನಿನ್ನ ಬಗ್ಗೆ ಕಾಳಜಿ ಇಲ್ಲ, ನಿನ್ನ ಬಗ್ಗೆ ನಾನು ಯೋಚನೆ ಮಾಡ್ಲೆ ಇಲ್ಲ ಅಂತ ಅಲ್ಲ. ಓದು, ಅಸೈನ್‌ಮೆಂಟ್, ಕ್ಲಾಸ್‌ಗಳ ಒತ್ತಡದಿಂದ ನಿನ್ನ ಬಗ್ಗೆ ಜಾಸ್ತಿ ವಿಚಾರಿಸಿಕೊಳ್ಳೋಕೆ ಆಗ್ತಾ ಇರಲಿಲ್ಲ.
Advertisement
ನನ್ನ ಹುಟ್ಟಿದ ಹಬ್ಬದಂದು ನೀನು ಹನ್ನೆರಡು ಗಂಟೆಗೇ ಕಾಲ್ ಮಾಡಿದ್ದೆ. ಆದರೆ, ನಾನು ನಿನ್ನ ಹುಟ್ಟುಹಬ್ಬವನ್ನು ಮರೆತುಬಿಟ್ಟೆ. ಅದು ತಪ್ಪು, ನಿನಗೆ ತುಂಬಾ ಬೇಜಾರಾಗಿರುತ್ತೆ ನಿಜ. ಏನು ಮಾಡ್ಲಿ? ನನ್ನ ಮರೆವಿನ ಬಗ್ಗೆ ನಿನಗೇ ಗೊತ್ತಲ್ವಾ? ನೀನಾಗೇ ಫೋನ್ ಮಾಡಿ ನೆನಪು ಮಾಡಬಹುದಿತ್ತು. “ಯಾಕೋ ವಿಷ್ ಮಾಡಿಲ್ಲ?’ ಅಂತ ಬೈದು ಕೇಳಬಹುದಿತ್ತು. ಆದ್ರೆ, ನೀನು ನನ್ನ ಹತ್ರ ಮಾತಾಡೋದನ್ನೇ ಬಿಟ್ಟು ಬಿಟ್ಟೆ. ನಾನು ಎಷ್ಟೋ ಸರಿ ಮಾತನಾಡಿಸೋ ಪ್ರಯತ್ನ ಮಾಡಿದೆ. ಆದರೆ, ನೀನು ತಿರುಗಿಯೂ ನೋಡಲಿಲ್ಲ.