Advertisement

ವಾದ- ಪ್ರತಿವಾದ ಮುಗಿದಿದೆ, ಜಡ್ಜ್ ಮೆಂಟ್ ನಿರೀಕ್ಷೆ ಇದೆ: ಸಚಿವ ಯೋಗೇಶ್ವರ್

11:03 AM Jun 29, 2021 | Team Udayavani |

ಕಲಬುರಗಿ: ರಾಜ್ಯ ಬಿಜೆಪಿಯಲ್ಲಿನ ವಾದ- ಪ್ರತಿವಾದ ಮುಗಿದಿದೆ. ಈಗ ಜಡ್ಜ್ ಮೆಂಟ್ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

Advertisement

ಮಂಗಳವಾರ ವಿಜಯಪುರಕ್ಕೆ ತೆರಳಲೆಂದು ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್ ಮಾರ್ಗಸೂಚಿಯಂತೆ ನಮ್ಮ ಸುಪ್ರೀಂ (ಬಿಜೆಪಿ ಹೈಕಮಾಂಡ್) ನವರು ಮಾರ್ಗಸೂಚಿ ಕೊಡುತ್ತಾರೆ ಎನ್ನುವ ಆಶಾ ಭಾವನೆ ಇದೆ ಎಂದರು.

ನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ. ಜಡ್ಜ್ ಮೆಂಟ್ ಏನು ಬರುತ್ತೋ ಕಾಯೋಣ. ರಮೇಶ ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಲ್ಲಿ ಯಾವ ರೀತಿ ಗೊಂದಲಗಳಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನಾವೆಲ್ಲ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಪರೀಕ್ಷೆ ವಿಚಾರಕ್ಕೆ ಸುರೇಶ್ ಕುಮಾರ್- ಸುಧಾಕರ್ ಜಟಾಪಟಿ: ಗೊಂದಲ ಬೇಡವೆಂದ ಸಿಎಂ ಬಿಎಸ್ ವೈ

ಕಾಂಗ್ರೆಸ್ ನಲ್ಲಿ ಈಗಲೇ ಮುಂದಿನ ಸಿಎಂ ಚರ್ಚೆ ಶುರುವಾಗಿದೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಸಿಎಂ ಆಗುವ ಅವಕಾಶ ಕೊಡಲ್ಲ ಎಂದರು.

Advertisement

ಪಾಪ ಶಿವಕುಮಾರ್ ಸಿಎಂ ಆಗಬೇಕೆಂದು ‌ಬಹಳಷ್ಟು ಕನಸು ಕಾಣುತ್ತಿದ್ದಾರೆ. ಆದರೆ, ಅವರಿಗೆ ಶಾಸಕರ ಬೆಂಬಲ ಇದ್ದಂಗೆ ಕಾಣುವುದಿಲ್ಲ. ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಆಗಬೇಕೆಂದು ಕಳೆದ ಸರ್ಕಾರದಲ್ಲೂ ಪ್ರಯತ್ನ ನಡೆದಿತ್ತು. 70 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪರ ಇತ್ತು‌. ಅವರಿಗೆ ಅನ್ಯಾಯ ಆಗಿದೆ. ಹೀಗಾಗಿ ಮತ್ತೆ ಆ ನಿಟ್ಟಿನಲ್ಲಿ ಧ್ವನಿ ಪ್ರಾರಂಭವಾಗಿದೆ. ಇನ್ನು ಎರಡು ವರ್ಷ ಇದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next