Advertisement

ಭಾರತಕ್ಕೆ ವಿಯೆಟ್ನಾಂ ನೀಡಿದ್ದು ಸಹಾಯವಲ್ಲ, ಒಗ್ಗಟ್ಟಿನ ಭಾವನೆ : ಫಾಮ್ ಸಾನ್ ಚೌ

05:17 PM Jun 02, 2021 | Team Udayavani |

ನವ ದೆಹಲಿ : ನಮ್ಮ ದೇಶದಲ್ಲಿ ಭಾರತದ ಕೋವಾಕ್ಸಿನ್ ಲಸಿಕೆಯನ್ನು ನೀಡಲು  ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಭಾರತದಲ್ಲಿ ವಿಯೆಟ್ನಾಂ ನ ರಾಯಭಾರಿ ಫಾಮ್ ಸಾನ್ ಚೌ ಹೇಳಿದ್ದಾರೆ.

Advertisement

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ ಫಾಮ್ ಸಾನ್ ಚೌ, ” ನಮ್ಮ ದೇಶದಲ್ಲಿ ತುರ್ತು ಬಳಕೆಗಾಗಿ ಕೋವಾಕ್ಸಿನ್ ನನ್ನು ಬಳಸಲಿ ಇನ್ನೂ ಡಬ್ಲ್ಯು ಎಚ್‌ ಒ ಅನುಮೋದಿಸಿಲ್ಲ, ನಾವು ಡಬ್ಲ್ಯು ಎಚ್‌ ಒ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ: ಶೆಟ್ಟರ್‌

ಕೊವಾಕ್ಸಿನ್ ಭಾರತದ ಲಸಿಕೆ, ಭಾರತ್ ಬಯೋಟೆಕ್ ತನ್ನ ಅರ್ಜಿಯನ್ನು ಡಬ್ಲ್ಯು ಎಚ್‌ ಒ ಫಾರ್ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್ (ಇಯುಎಲ್) ಗೆ ಏಪ್ರಿಲ್ 19 ರಂದು ಸಲ್ಲಿಸಿದ್ದು, ಪೂರ್ವ ಸಲ್ಲಿಕೆ ಸಭೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.

ಚೌ, ಸ್ವತಃ ದೆಹಲಿಯ ಡಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಾಕ್ಸಿನ್ ಲಸಿಕೆಯನ್ನು ಪಡೆದಿದುಕೊಂಡಿದ್ದರು.

Advertisement

ಇನ್ನು, ದೇಶದಲ್ಲಿ ಕೋವಿಡ್ ಸೊಂಕಿನ ಎರಡನೇ ಅಲೆಯ ನಡುವೆ ವಿಯೆಟ್ನಾಂ ಭಾರತಕ್ಕೆ ಸಹಾಯ ಹಸ್ತವನ್ನು ಚಾಚಿದೆ. ಮೊದಲ ಹಂತದ ಸಹಾಯದಲ್ಲಿ 109 ವೆಂಟಿಲೇಟರ್‌ ಗಳು ಮತ್ತು 50 ಆಮ್ಲಜನಕ ಸಿಲಿಂಡರ್‌ ಗಳನ್ನು ಒಳಗೊಂಡಿತ್ತು. ಎರಡನೇ ಹಂತದಲ್ಲಿ 100 ವೆಂಟಿಲೇಟರ್‌ ಗಳು, 275 ಸಾಂದ್ರಕಗಳು, 1300 ಆಮ್ಲಜನಕ ಸಿಲಿಂಡರ್‌ಗಳು ಮತ್ತು 50,000 ಮಾಸ್ಕ್ ಗಳು ಇದ್ದವು.

ರಾಷ್ಟ್ರೀಯ ಸುದ್ದಿ ಸಂಸ್ಥೆ ವಿಯೋನ್(WION) ನೊಂದಿಗೆ ಮಾತನಾಡಿದ ಅವರು,  ವಿಯೆಟ್ನಾಂ ಭಾರತಕ್ಕೆ ಒದಗಿಸಿದ ಸಹಾಯ ಹೆಚ್ಚಿನದ್ದು  ಜನರಿಂದ, ವೈಯಕ್ತಿಕ ಆಸಕ್ತಿಯಿಂದ ಮತ್ತು ಸಂಸ್ಥೆಗಳಿಂದ. ರಾಜ್ಯ ಸಂಸ್ಥೆಗಳಿಂದಲ್ಲ. ಆದ್ದರಿಂದ, ಭಾರತೀಯರಿಗೆ ಒದಗಿಸಲು ರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ಸಂಗ್ರಹಿಸುವ ದೊಡ್ಡ ಅಭಿಯಾನವಿದೆ. ಮಕ್ಕಳಿಂದ ವೃದ್ಧರವರೆಗೆ, ಎಲ್ಲರೂ ಭಾರತವನ್ನು ಬೆಂಬಲಿಸುವ ಸಲುವಾಗಿ ಸಣ್ಣಪುಟ್ಟ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ, ಈ ಕಷ್ಟದ ಕ್ಷಣದಲ್ಲಿ ವಿಯೆಟ್ನಾಂ ಭಾರತೀಯರಿಗೆ ನೀಡುತ್ತಿರುವುದು ಸಹಾಯ ಎನ್ನುವುದಕ್ಕಿಂತ ಹೆಚ್ಚು ಒಗ್ಗಟ್ಟು, ಭಾವನೆ ಮತ್ತು ಪ್ರೀತಿ ಇದು ಎಂದಿದ್ದಾರೆ.

ಇದನ್ನೂ ಓದಿ : ಆಧಾರ್, ಪಾನ್ ಲಿಂಕ್ ಮಾಡಿಕೊಳ್ಳಿ : ಗ್ರಾಹಕರಿಗೆ ಎಸ್ ಬಿ ಐ ಮನವಿ

ವಿಯೆಟ್ನಾಂ ಇತ್ತೀಚೆಗೆ ಯುಕೆ (ಆಲ್ಫಾ) ಮತ್ತು ಭಾರತ (ಡೆಲ್ಟಾ) ದಲ್ಲಿ ಕಂಡುಬಂದ ಹೊಸ ರೂಪಾಂತರಿ ಸೋಂಕನ್ನು ವರದಿ ಮಾಡಿದೆ. ಸಾಂಕ್ರಾಮಿಕ ರೋಗವನ್ನು ವಿಯೆಟ್ನಾಂ ಹೇಗೆ ಎದುರಿಸುತ್ತಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಫಾಮ್ ಸಾನ್ ಚೌ , ವಿಯೆಟ್ನಾಂ ನಾಲ್ಕನೇ ಅಲೆಯನ್ನು ಎದುರಿಸುತ್ತಿದೆ. ಈಗ ಸೋಂಕುಗಳ ಒಟ್ಟು ಸಂಖ್ಯೆ ದ್ವಿಗುಣಗೊಂಡಿದೆ. ಈ ರೂಪಾಂತರಿ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ನಾವು ಇನ್ನೂ ಅದರ ಮೂಲಗಳನ್ನು ವಿಶ್ಲೇಷಿಸುತ್ತಿದ್ದೇವೆ ಮತ್ತು ಆರೋಗ್ಯ ಅಧಿಕಾರಿಗಳ ಅಂತಿಮ ಪ್ರಮಾಣೀಕರಣಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿಯೆಟ್ನಾಂನ ವಿಚಾರಕ್ಕೆ  ಸಂಬಂಧಪಟ್ಟಂತೆ ವಿಶೇಷವಾಗಿ ಲಸಿಕೆಗಳ ಬಗ್ಗೆ ಯಾವ ರೀತಿಯ ಜಾಗತಿಕ ಸಹಕಾರ ನಡೆಯುತ್ತಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏಷ್ಯಾದ ಇತರ ದೇಶಗಳಂತೆ ವಿಯೆಟ್ನಾಂಗೆ ಲಸಿಕೆಗಳು ಅಗತ್ಯ ತುರ್ತಾಗಿದೆ. ಫೈಜರ್ ನೊಂದಿಗೆ  ಮಾಡರ್ನಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅಸ್ಟ್ರಾಜೆನೆಕಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ವಿಯೆಟ್ನಾಂಗೆ ಕೋವಾಕ್ಸಿನ್ ಖರೀದಿಸುವ ಅವಕಾಶವೂ ಇದೆ, ಆದರೆ ಇದನ್ನು ತುರ್ತು ಬಳಕೆಗಾಗಿ ಡಬ್ಲ್ಯುಎಚ್‌ಒ ಇನ್ನೂ ಅನುಮೋದಿಸಿಲ್ಲ. ನಾವು ಡಬ್ಲ್ಯು ಎಚ್‌ ಒ ನ ಅನುಮೋದನೆಗಾಗಿ ಕಾಯುತ್ತಿದ್ದೇವೆ. ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮನೆಯ ಹಿರಿಜೀವಗಳನ್ನು ಕಿತ್ತುಕೊಂಡ ಕ್ರೂರಿ : ಕೋವಿಡ್ ಗೆ ಸಹೋದರರು ಬಲಿ

Advertisement

Udayavani is now on Telegram. Click here to join our channel and stay updated with the latest news.

Next