Advertisement

Jailer: 15 ಸೆಕೆಂಡ್‌ ಗಳಲ್ಲೇ ʼಜೈಲರ್‌ʼ‌ ಆಡಿಯೋ ಲಾಂಚ್ ಉಚಿತ ಪಾಸ್‌ ಸೋಲ್ಡ್‌ ಔಟ್

03:44 PM Jul 24, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್ ಅವರ ʼಜೈಲರ್‌ʼ ಸಿನಿಮಾದ ಹೈಪ್‌ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸಿನಿಮಾದ ಹಾಡುಗಳು ಸೂಪರ್‌ ಹಿಟ್ ಆಗಿವೆ. ಇನ್ನೇನಿದ್ದರೂ ಆಡಿಯೋ ಲಾಂಚ್‌ ಹಾಗೂ ಟ್ರೇಲರ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

Advertisement

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ʼಜೈಲರ್‌ʼ ಸಿನಿಮಾದ ʼಕಾವಾಲಾʼ ,ʼಹುಕುಂʼ ಎರಡು ಹಾಡುಗಳು ಸೌಂಡ್‌ ಮಾಡಿದೆ. ತಮನ್ನಾ ಹಾಗೂ ರಜಿನಿ ಅವರ ಸ್ಟೆಪ್‌ ಗಳನ್ನು ನೋಡಿ ಫ್ಯಾನ್ಸ್‌ಗಳು ಫಿದಾ ಆಗಿದ್ದಾರೆ. ಇತ್ತ ಸಿನಿಮಾದ ಟಿಕೆಟ್‌ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದೇ ಜು.28 ರಂದು ʼಜೈಲರ್‌ʼ ಸಿನಿಮಾ ತಂಡ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣನಲ್ಲಿ ಆಡಿಯೋ ಲಾಂಚ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದ್ಧೂರಿಯಾಗಿ ನಡೆಯಲಿರುವ ಆಡಿಯೋ ಲಾಂಚ್‌ ಗಾಗಿ ಸಾವಿರಾರು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಸನ್ ಪಿಕ್ಚರ್ಸ್ ಆಡಿಯೋ ಲಾಂಚ್‌ ನಲ್ಲಿ ಭಾಗಿಯಾಗಲು ಅಭಿಮಾನಿಗಳಿಗೆ 1000 ಉಚಿತ ಪಾಸ್‌ ಗಳನ್ನು ಘೋಷಿಸಿತ್ತು. ಆನ್ ಲೈನ್‌ ನಲ್ಲಿ ಟಿಕೆಟ್‌ ಘೋಷಣೆಯಾದ 15 ಸೆಕೆಂಡ್‌ ಗಳಲ್ಲಿ ಎಲ್ಲಾ ಟಿಕೆಟ್‌ ಗಳು ಖಾಲಿಯಾಗಿದೆ ಎಂದು ಸನ್ ಪಿಕ್ಚರ್ಸ್ ಟ್ವೀಟ್‌ ಮಾಡಿದೆ.

15 ಸೆಕೆಂಡುಗಳಲ್ಲಿ 500 ಜನರು ಉಚಿತ ಪಾಸ್‌ಗಳನ್ನು (ತಲಾ ಇಬ್ಬರು) ಪಡೆದುಕೊಂಡಿದ್ದಾರೆ ಎಂದು ಟ್ವೀಟ್‌ ಮಾಡಿದೆ.

Advertisement

‘ಜೈಲರ್’ ನಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ,ವಿನಾಯಕನ್ ಮುಂತಾದವರು ನಟಿಸಿದ್ದಾರೆ. ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್‌ 10 ರಂದು ಸಿನಿಮಾ ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ.‌

Advertisement

Udayavani is now on Telegram. Click here to join our channel and stay updated with the latest news.

Next