Advertisement

ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ತಳಿರು ತೋರಣ ಮೆರಗು

12:11 PM Apr 11, 2019 | pallavi |
ಧಾರವಾಡ: ತಾಲೂಕಿನ ಅಮ್ಮಿನಭಾವಿ ಗ್ರಾಪಂನಲ್ಲಿ ತೆಂಗು, ಮಾವಿನ ತಳಿರು ತೋರಣಗಳು, ಬಲೂನಗಳು,
ಝಗಮಗಿಸುವ ದೀಪಗಳು ಹೀಗೆ ವೈವಿಧ್ಯಮಯ ಅಲಂಕಾರದಿಂದ ಸಿಂಗರಿಸಲ್ಪಟ್ಟಿತ್ತು.
ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ಸ್ಥಳೀಯ ಗ್ರಾಪಂ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಷ್ಟೇ ಸಂಭ್ರಮದಿಂದ ಭಾಗವಹಿಸಿದ್ದರು.
ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿರುವ ಜಿಪಂ ಕಾರ್ಯ ನಿರ್ವಹಣಾಧಿಕಾರಿ ಡಾ|ಬಿ.ಸಿ. ಸತೀಶ್‌ ಕೃಷಿ ವಿವಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬೃಹತ್‌ ಸ್ವೀಪ್‌ ಕೇಕ್‌ಗಳನ್ನು ಕತ್ತರಿಸಿ, ಸಸಿಗೆ ನೀರೆರೆದು ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಏ.23 ರಂದು ನಾನು ಖಂಡಿತ ಮತದಾನ ಮಾಡುತ್ತೇನೆ. ನೀವೂ ಮತದಾನ ಮಾಡಿ ಎಂದು ಪರದೆಯ ಮೇಲೆ ಬರೆದು ಸಹಿ ಹಾಕುವ ಮೂಲಕ ಗ್ರಾಮಸ್ಥರನ್ನು ಸಹಿ ಸಂಗ್ರಹಣಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.
ಕೇಕ್‌ ಕತ್ತರಿಸಿದ ಗ್ರಾಮಸ್ಥರು: ಅಮ್ಮಿನಭಾವಿಯ ಹಿರಿಯ ಮತದಾರರಾದ 86 ವರ್ಷದ ಅಂದಾನಪ್ಪ ಯಡಹಳ್ಳಿ, 76 ವರ್ಷದ ಕಲ್ಲಪ್ಪ, 78 ವರ್ಷದ ಶಾಂತಮ್ಮ ಹಾಗೂ ಹೊಸದಾಗಿ ಮತದಾನಕ್ಕೆ ಅರ್ಹತೆ ಪಡೆದಿರುವ ಯುವಮತದಾರರಾದ ಜ್ಯೋತಿ ಮೊರಬದ, ಆಂಜನೇಯ ಅವರಿಂದ ಸ್ವೀಪ್‌ ಕೇಕ್‌ ಕತ್ತರಿಸಿ ಸಿಹಿ ಹಂಚಿ, ಇವಿಎಂ ವಿವಿಪ್ಯಾಟ್‌ಗಳ ಬಳಕೆ, ಅಣಕು ಮತದಾನ  ಡಿಸಲಾಯಿತು.
ಬಿಂದಿಗೆಗಳ ಮೇಲೆ ವರ್ಣರಂಜಿತವಾಗಿ ಲೋಕಸಭಾ ಚುನಾವಣೆ-2019 ಎಂದು ಬರೆದು ಬಲೂನುಗಳನ್ನು ವಿದ್ಯುತ್‌
ಬಲ್ಬ್ಗಳ ಮಾದರಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಿ ಚುನಾವಣಾ ಆಯೋಗದ ಸಂದೇಶ ಸಾರಲಾಯಿತು.
ಶಿಕ್ಷಕರಾದ ಎಫ್‌.ಬಿ. ಕಣವಿ, ಜಾನಪದ ವಿದ್ವಾಂಸ ಡಾ|ರಾಮು ಮೂಲಗಿ, ದೇವರಾಜ ಕಂಬಳಿ,ವೈ. ಎಫ್‌.ಹೊಸಮನಿ ಮತ್ತಿತರ ಕಲಾವಿದರನ್ನೊಳಗೊಂಡ ತಂಡವು ಜನಪದ ಶೈಲಿಯಲ್ಲಿ ಮತದಾರರ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿತು.
ಹೊನ್ನಾಪೂರದ ಪ್ರಭುದೇವ ಪ್ರೌಢಶಾಲೆಯ ಶಿಕ್ಷಕಿಯರ ತಂಡವು ಮಹಾಂತೇಶ ಹುಬ್ಬಳ್ಳಿ ಅವರು ರಚಿಸಿ, ಬಾಬಾಜಾನ ಮುಲ್ಲಾ ರಾಗ ಸಂಯೋಜಿಸಿದ್ದ ಚುನಾವಣಾ ಗೀತೆಗೆ ಲಯಬದ್ಧವಾಗಿ ಹೆಜ್ಜೆ ಹಾಕಿತು. ಶಿಕ್ಷಕ, ಕಲಾವಿದ ಮಹಾದೇವ ಸತ್ತಿಗೇರಿ ನಗೆಹನಿಗಳ ಮೂಲಕ ಗ್ರಾಮಸ್ಥರನ್ನು ಹಿಡಿದಿಟ್ಟರು.ಹಾಸ್ಯದ ಮೂಲಕವೇ ಮತದಾನ ಮಹತ್ವ ಸಾರುವ ಸಂದೇಶ ಹರಡಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್‌.ಎಸ್‌. ಕಾದ್ರೋಳ್ಳಿ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸ್ವೀಪ್‌ ರಾಜ್ಯಮಟ್ಟದ  ರಬೇತಿದಾರ ಕೆ.ಎಂ. ಶೇಖ್‌, ಜಿಲ್ಲಾಮಟ್ಟದ ತರಬೇತಿದಾರ ಜಿ.ಎನ್‌. ನಂದನ್‌, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್‌ ಸಿಂಗನಹಳ್ಳಿ, ತಹಶೀಲ್ದಾರ ಪ್ರಕಾಶ್‌ ಕುದರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next