Advertisement

Congressನಲ್ಲಿ ಸವದಿಗೆ ಯಾವ ಸ್ಥಿತಿ ಬರುತ್ತೆ ಕಾದು ನೋಡಿ: ಕಟೀಲು

11:36 PM Apr 15, 2023 | Team Udayavani |

ಬೆಂಗಳೂರು : ಟಿಕೆಟ್‌ ಸಿಗದ ಕಾರಣಕ್ಕೆ ಆಕ್ರೋಶ ಸಹಜ. ಅದನ್ನು ಸರಿದೂಗಿಸುವ ಶಕ್ತಿ ನಮಗಿದೆ. ಪಕ್ಷ ಬಿಟ್ಟ ಲಕ್ಷ್ಮಣ ಸವದಿ ಯಾವ ಸ್ಥಿತಿಗೆ ತಲುಪುತ್ತಾರೆ ಎಂದು ಕಾದುನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟಿದ್ದಾರೆ.

Advertisement

ಪಕ್ಷದಲ್ಲಿ ಸವದಿಯವರಿಗೆ ಎಲ್ಲ ಅವಕಾಶ ನೀಡಲಾಗಿತ್ತು. ಅಧಿಕಾರದ ವಿಚಾರಕ್ಕೆ ಬಂದಾಗ ಅತೀ ಹೆಚ್ಚು ಅವಕಾಶ ಪಡೆದವರೇ ಸವದಿ. ಭವಿಷ್ಯದಲ್ಲಿ ಕಾಂಗ್ರೆಸ್‌ನಲ್ಲಿ ಅವರು ಯಾವ ಸ್ಥಿತಿ ತಲುಪುತ್ತಾರೆಂಬುದನ್ನು ಕಾದು ನೋಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣ ಅಖಾಡದ ಬಿಸಿ ಏರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿ¨ªಾರೆ. ಕಾಂಗ್ರೆಸ್‌ ಡಿಸೆಂಬರ್‌ ತಿಂಗಳಲ್ಲೇ ಅಭ್ಯರ್ಥಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಕಷ್ಟದಿಂದ ಇವತ್ತು ಕೆಲವು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್‌ ಪಕ್ಷದ್ದು 2 ಬಾರಿ ಗಜಪ್ರಸವ ಆಗಿದೆ. ಆದರೆ ಬಿಜೆಪಿಯಲ್ಲಿ 10 ದಿನಗಳ ಪ್ರಕ್ರಿಯೆಯಲ್ಲಿ 212 ಅಭ್ಯರ್ಥಿಗಳ ಘೋಷಣೆ ಆಗಿದೆ. ಮತಗಟ್ಟೆ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರ ವರೆಗೆ ಅಭಿಪ್ರಾಯ ಸಂಗ್ರಹದ ಮೂಲಕ ಅಭ್ಯರ್ಥಿಗಳನ್ನು ಪ್ರಕಟಿಸಿದ್ದೇವೆ ಎಂದು ತಿಳಿಸಿದರು.
ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. 12 ಉಳಿಕೆ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಜೆಡಿಎಸ್‌ ಕುಟುಂಬ ರಾಜಕಾರಣಕ್ಕೆ ಸೀಮಿತ. ಒಂದು ಮನೆಯ ಒಳಗಿನವರು ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕ ಆಗಿದ್ದಾರೆ. ಅಂಥ ರಾಜಕೀಯ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಚುನಾವಣ ನಿರ್ವಹಣ ಸಮಿತಿ ಸಂಚಾಲಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಗೂಬೆಗೆ ಹೋಲಿಸಿ ಸವದಿ ತಿರುಗೇಟು
ಬೆಳಗಾವಿ: ಲಕ್ಷ್ಮಣ ಸವದಿ ಹಾಗೂ ಅವರ ಬದ್ಧ ರಾಜಕೀಯ ವೈರಿ ರಮೇಶ ಜಾರಕಿಹೊಳಿ ನಡುವೆ ಟೀಕಾಪ್ರಹಾರ ಪರಾಕಾಷ್ಠೆ ಮುಟ್ಟಿದೆ. ರಮೇಶ ಅವರನ್ನು ಸವದಿ ಗೂಬೆಗೆ ಹೋಲಿಸಿದ್ದಾರೆ.

ಆಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ ಮಾತನಾಡುತ್ತ ಸವದಿ ಅವರನ್ನು ಕುರಿತು “ಒಂದು ಪೀಡೆ ಹೋಯಿತು’ ಎಂದು ಟೀಕಿಸಿದ್ದರು. ಶನಿವಾರ ಬೆಳಗಾವಿಯಲ್ಲಿ ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸವದಿ, ರಮೇಶ ಅವರ ದೃಷ್ಟಿಯಲ್ಲಿ ನಾನು ಪೀಡೆ ಇರಬಹುದು. ಆದರೆ ಗೂಬೆ ಹೊಕ್ಕ ಮನೆ ಯಾವಾಗಲೂ ಹಾಳಾಗುತ್ತದೆ. ಅಂತಹ ಮನೆಯಿಂದ ಬಂದಿರುವ ಗೂಬೆ ಈ ಮನೆ ಹಾಳು ಮಾಡಿ ವಾಪಸ್‌ ಹೋಗುತ್ತದೆ. ಹಾಗಾಗಿ ಈ ಮನೆಯಲ್ಲಿ ಇರಬಾರದೆಂದು ತೀರ್ಮಾನಿಸಿ ಹೊರಬಂದಿದ್ದೇನೆ ಎಂದು ತಿರುಗೇಟು ನೀಡಿದರು.

Advertisement

ನಾನು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ವಾತಾವರಣ ನಿರ್ಮಿಸಿದ್ದು ಬಿಜೆಪಿ ಪಕ್ಷದವರೇ. ಉಪಚುನಾವಣೆಯಲ್ಲಿ ಮಹೇಶ ಕುಮಠಳ್ಳಿ ಗೆಲ್ಲಿಸಿದರೆ, ಮುಂದಿನ ಅವಧಿಯವರೆಗೆ ಉಪಮುಖ್ಯಮಂತ್ರಿ ಮಾಡುವುದಾಗಿ “ಆಪರೇಷನ್‌ ಕಮಲ’ದ ವೇಳೆ ವರಿಷ‌uರು ತಿಳಿಸಿದ್ದರು. ನಾನೇನೂ ಡಿಸಿಎಂ ಅಥವಾ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ಅವರೇ ಕೊಟ್ಟರು. ಅನಂತರ ಈ ಸ್ಥಾನದಿಂದ ತೆಗೆಯುವ ವೇಳೆಯೂ ಕೇಳಲಿಲ್ಲ. ನಾನೇನೂ ಭ್ರಷ್ಟಾಚಾರ ಮತ್ತು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನಾ ಎಂದು ಪ್ರಶ್ನಿಸಿದರು.

ಲಕ್ಷ್ಮಣ ಸವದಿ ದುಡುಕಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರಕ್ರಿಯೆ ನೀಡಿದ ಅವರು, ನಾನು ದುಡುಕಿಲ್ಲ. ಮುಖ್ಯಮಂತ್ರಿಗಳ ಮೇಲೆ ಗೌರವವಿದೆ. ನಿಜವಾಗಿ ದುಡುಕಿದ್ದು ನೀವು ಎಂದರು. ಬಿ.ಎಸ್‌. ಯಡಿಯೂರಪ್ಪ ಬಹಳ ದೊಡ್ಡ ನಾಯಕರು. ನಮ್ಮ ತಂದೆ ಸಮಾನರು. ಒಂದು ಪಕ್ಷ ಬಿಟ್ಟು, ಇನ್ನೊಂದು ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಕ್ಕಿಲ್ಲ ಎಂದು ತಿವಿದರು.

Advertisement

Udayavani is now on Telegram. Click here to join our channel and stay updated with the latest news.

Next