Advertisement

Andra Pradesh Election: ಬಿಜೆಪಿಯಿಂದ ಕಾದು ನೋಡೋ ತಂತ್ರ

11:37 PM Sep 20, 2023 | Team Udayavani |

ಮುಂದಿನ ವರ್ಷದ ಆಂಧ್ರಪ್ರದೇಶ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಜತೆ ಮೈತ್ರಿ ಮಾಡಿ ಕೊಳ್ಳುವುದಾಗಿ ಕಳೆದ ವಾರವಷ್ಟೇ ಜನ ಸೇನಾ ಪಾರ್ಟಿ(ಜೆಎಸ್‌ಪಿ) ನಾಯಕ ಪವನ್‌ ಕಲ್ಯಾಣ್‌ ಘೋಷಿಸಿದ್ದಾರೆ. ಅಲ್ಲದೇ, ನಾವು ಟಿಡಿಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಬೆಳವಣಿ ಗೆಗಳ ಬಗ್ಗೆ ತುಟಿ ಬಿಚ್ಚಿಲ್ಲ.

Advertisement

ಟಿಡಿಪಿ- ಜೆಎಸ್‌ಪಿ ಮೈತ್ರಿಯೊಂದಿಗೆ ಬಿಜೆಪಿಯೂ ಸೇರಿಕೊಳ್ಳಲಿದೆ ಎನ್ನುವ ನಂಬಿಕೆಯಲ್ಲಿ ಪವನ್‌ ಕಲ್ಯಾಣ್‌ ಇದ್ದಾರೆ. ಆದರೆ, ಬಿಜೆಪಿ ಯಾವುದೇ ನಿರ್ಧಾರಕ್ಕೆ ಬರದಂಥ ಸ್ಥಿತಿಗೆ ತಲುಪಿದೆ. ಆಂಧ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲ. ಬಿಜೆಪಿ ಕೇಂದ್ರ ನಾಯಕತ್ವವು ಟಿಡಿಪಿ ವಿಶ್ವಾಸಾರ್ಹ ಮಿತ್ರಪಕ್ಷವಲ್ಲ ಎಂಬುದನ್ನು ಅರಿತಿದೆ. ಆದರೆ ಟಿಡಿಪಿ ಜತೆ ಮೈತ್ರಿ ಮಾಡಿಕೊ ಳ್ಳದಿದ್ದರೆ ಯಾವುದೇ ಸೀಟು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಜಗನ್‌ ವಿಶ್ವಾಸಾರ್ಹ ವ್ಯಕ್ತಿಯಾ ದರೂ ಅವರು ಎನ್‌ಡಿಎಗೆ ಸೇರಲ್ಲ. ಲೋಕಸಭೆ ಚುನಾವಣೆ ಬಳಿಕ ವೈಎಸ್ಸಾರ್‌ ಕಾಂಗ್ರೆಸ್‌ನ ಅಗತ್ಯ ಬಂದರೂ ಬರಬಹುದು. ಹೀಗಾಗಿ ಸ್ಪಷ್ಟ ನಿರ್ಧಾರಕ್ಕೆ ಬರಲು ಬಿಜೆಪಿಗೆ ಸಾಧ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next