ಕಾರವಾರ, ಎ. 4: ಬಿಜೆಪಿ ಮುಖಂಡ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಿದ್ದು, ಇನ್ನು ಮುಂದೆ ಸಚಿವ ಸಂಪುಟದಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಆಗುವ ಬದಲಾವಣೆ ಕುರಿತು ಎಲ್ಲರೂ ಕಾದು ನೋಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಪುತ್ತೂರು: ರಾಜ ಕಾಲುವೆ ಗಬ್ಬೆದ್ದರೂ ತ್ಯಾಜ್ಯಮುಕ್ತ ನಗರ ರ್‍ಯಾಂಕಿಂಗ್ ಕನಸು !
ಅಂಕೋಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಬಂದು ಹೋಗಿದ್ದರಿಂದ ಕಾಂಗ್ರೆಸ್‌ನವರ ಎದೆ ಬಡಿತ ಹೆಚ್ಚಾಗಿದೆ. ಅಮಿತ್ ಶಾ ಅವರು ರಾಷ್ಟ್ರದ್ರೋಹಿಗಳ ವಿರುದ್ಧ ಬಾಂಬ್ ತೆಗೆದುಕೊಂಡೇ ಬಂದಿದ್ದರು. ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್ ಸರ್ವನಾಶವಾಗಿದೆ.
ರಾಜ್ಯಕ್ಕೆ ಬಂದರೂ ಅದೇ ಗತಿ. ಅವರು ಮುಂದೆ ರಾಜ್ಯ ಪ್ರವಾಸಕ್ಕೆ ಬರುತ್ತಾರೆಂದರೆ ಅವರು ಹೋಗಿ ಬರುವ ಖರ್ಚುವೆಚ್ಚವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದರು.
ಸಿದ್ದು-ಡಿಕೆಶಿ-ಎಎಚ್‌ಡಿಕೆಗೆ ತಾಕತ್ತಿಲ್ಲ
ಸಿದ್ದರಾಮಯ್ಯ, ಡಿಕೆಶಿ ಹಾಗೂ ಕುಮಾರಸ್ವಾಮಿಗೆ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುವ ತಾಕತ್ತಿಲ್ಲ. ತಾಕತ್ತಿದ್ದರೂ ಅವರ ಓಟು ಕಳೆದುಕೊಳ್ಳಲು ಇವರು ತಯಾರಿಲ್ಲ. ಹೀಗಾಗಿ ಎಲ್ಲ ವಿಚಾರದಲ್ಲೂ ಅವರ ಪರ ನಿಲ್ಲುತ್ತಾರೆ. ರಾಜಕೀಯ ಕಾರಣಕ್ಕೆ, ಹಿಂದೂಗಳ ಮತ ಪಡೆಯಲು ಬಿಜೆಪಿಯವರು ಗಲಾಟೆ ಎಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ.