Advertisement

ವಾಟ್ಸಾಪ್‌ ಕತೆ : ಜೋಗುಳ

07:02 PM Sep 28, 2019 | mahesh |

ಮಗನ ವರಾತಕ್ಕೆ ನಾವು ಗಂಡ-ಹೆಂಡತಿ ಅಮೆರಿಕಕ್ಕೆ ಹೋಗಿದ್ದೆವು. ಆತ ಇರುವುದು ಸರೋವರಗಳ ನಾಡೆಂದೇ ಪ್ರಸಿದ್ಧಿ ಪಡೆದ ಮಿನಿಸೋಟಾ ರಾಜ್ಯದ ಮಿನಿಯಾಪಾಲೀಸ್‌ ಎಂಬಲ್ಲಿ. ಹನ್ನೊಂದು ಸಾವಿರ ಸರೋವರಗಳು ಅಲ್ಲಿವೆ.

Advertisement

ಮೂವತ್ತು ಮೈಲು ದೂರದಲ್ಲಿ ಹಿಂದೂ ದೇವಾಲಯ ಒಂದಿತ್ತು. ಅದಕ್ಕೆ ಸ್ವಂತ ಕಟ್ಟಡವಿರದೆ ಬಾಡಿಗೆ ಇಮಾರತಿನಲ್ಲಿತ್ತು. ಮಂದಿರದಲ್ಲಿ ಪ್ರತಿ ಗುರುವಾರ ಶಿರಡಿಯ ಸಾಯಿಬಾಬಾರ ಪೂಜೆ ಇರುತ್ತದೆ. ಅಲ್ಲಿ ಭಾರತದ ಎಲ್ಲ ಭಾಗಗಳ ಜನರು ಬರುತ್ತಿದ್ದರೂ ತೆಲುಗನಾಡಿನವರೇ ಹೆಚ್ಚು. ಅತಿ ಅಲ್ಪಸಂಖ್ಯಾತರೆಂದರೆ ಕನ್ನಡಿಗರು. ಬಾಬಾರ ಪೂಜಾವಿಧಿವಿಧಾನಗಳು ಶಿರಡಿಯಲ್ಲಿ ನಡೆಯುವಂತೆಯೇ ಇದ್ದು, ಭಜನೆಯು ಮರಾಠಿ ಭಾಷೆಯಲ್ಲಿ ಇರುತ್ತದೆ. ಬಹುತೇಕ ಭಕ್ತರು ಬರು ವಾಗ ಬಾಬಾರ ನೈವೇದ್ಯಕ್ಕೆ ಏನಾದರೂ ತರುತ್ತಾರೆ. ನೈವೇದ್ಯ ಸಮ ರ್ಪಣೆಯ ನಂತರ ಬಾಬಾರನ್ನು ಮಲ ಗಿಸಿ, ಜೋಗುಳ ಹಾಡಿ, ತಿನಿಸನ್ನು ಪ್ರಸಾದ ರೂಪದಲ್ಲಿ ನೆಲಮಹಡಿಯಲ್ಲಿ ಕುಳಿತು ತಿಂದು ಹೋಗುವುದು ವಾಡಿಕೆ.

ಒಂದು ಗುರುವಾರ ಭಕ್ತರ ಸಂಖ್ಯೆಯೂ ತುಸು ಹೆಚ್ಚಿತ್ತು. ಮಾತು-ಹರಟೆ ಎನ್ನುತ್ತ ನೆಲ ಮಹಡಿಯಲ್ಲಿ ಗದ್ದಲ ನಡೆದಿತ್ತು. “”ಅಕ್ಕಪಕ್ಕದಲ್ಲಿ ಈ ದೇಶದ ಪ್ರಜೆಗಳು ವಾಸವಾಗಿದ್ದಾರೆ, ರಾತ್ರಿವೇಳೆ ಅವರು ಶಾಂತತೆ ಬಯಸುತ್ತಾರೆ. ಈಗಾಗಲೇ ದೂರು ಬಂದಿದೆ. ದಯಮಾಡಿ ಸದ್ದು ಮಾಡಬೇಡಿ’ ಎಂದು ಸ್ವಯಂಸೇವಕರೊಬ್ಬರು ವಿನಂತಿಸಿದರೂ ಯಾರೂ ಕಿವಿಗೊಡದೆ ಸದ್ದು ಮುಂದುವರಿದಿತ್ತು.

ಕೂಡಲೇ ಇನ್ನೋರ್ವ ಸ್ವಯಂಸೇವಕರು ಜನರ ಮಧ್ಯೆ ನಿಂತು, “”ಅಲ್ಲಾ, ಈಗಷ್ಟೇ ಜೋಗುಳ ಹಾಡಿ ಬಾಬಾರನ್ನು ಮಲಗಿಸಿ ಬಂದಿರಿ, ನಿಮ್ಮ ಈ ಗದ್ದಲಕ್ಕೆ ಅವರಿಗೆ ಎಚ್ಚರವಾಗದೆ? ಇದ್ಯಾವ ಸಭ್ಯತೆ?” ಎಂದರು.
ಈಗ ಎಲ್ಲರೂ ಮೌನವಾದರು.

ಸುರೇಶ ಹೆಗಡೆ, ಹುಬ್ಬಳ್ಳಿ

Advertisement

ಗುಜರಿ
ನನ್ನ ಮನೆ ಕಡೆ ಹೋಗುವ ದಾರಿಯಲ್ಲೇ ಆ ವೃದ್ಧರ ಮನೆಯಿತ್ತು. ಸಾಯಂಕಾಲ ಮನೆಗೆ ಮರಳುವ ಹೊತ್ತಿಗೆ ಒಂದು ಕ್ಷಣ ಅತ್ತ ನೋಡಿ ಮುಗುಳ್ನಗೆ ಬೀರುತ್ತಿದ್ದೆ. ಆ ವೃದ್ಧರೂ ಕೈಬೀಸಿ ಮುಗುಳ್ನಗುತ್ತಿದ್ದರು. ಮಾತಿಲ್ಲದ ನಗುವಿನ ಬಾಂಧವ್ಯವದು.

ಕೆಲವು ದಿನಗಳ ಹಿಂದೆ ನಾನು ಅತ್ತ ಕಡೆ ನೋಡಿದರೆ ವೃದ್ಧರು ಇರಲಿಲ್ಲ. ಅವರು ಕುಳಿತುಕೊಳ್ಳುವ ಕುರ್ಚಿ ಹಾಗೇ ಇತ್ತು. ಮನೆಯಲ್ಲಿ ವಿಚಾರಿಸಿದೆ. ಅನಾರೋಗ್ಯ ಪೀಡಿತರಾದ ಅವರನ್ನು ಆಸ್ಪತ್ರೆಗೆ ಸೇರಿಸಿರುವುದು ಗೊತ್ತಾಯಿತು. ಮತ್ತೆ ಒಂದೆರಡು ದಿನದಲ್ಲಿ ಅವರು ತೀರಿ ಕೊಂಡ ರು.

ಅವರು ಇಲ್ಲವಾದರೂ ಆಚೆಯಿಂದ ಬರುವಾಗ ನನ್ನ ಕಣ್ಣು ಅತ್ತಲೇ ಹೋಗುತ್ತಿತ್ತು. ಅವರು ಕೂರುವ ಕುರ್ಚಿ ಅಲ್ಲೇ ಇತ್ತು. ಒಂದು ಸಾವಿನಿಂದ ಒಂದು ಕುರ್ಚಿ ಅನಾಥವಾಗಿತ್ತು. ಕೆಲವು ದಿನಗಳ ನಂತರ ಅತ್ತ ನೋಡಿದರೆ ಕುರ್ಚಿ ಅಲ್ಲಿಂದ ಮಾಯವಾಗಿತ್ತು. ಮನೆಯಲ್ಲಿ ವಿಚಾರಿಸಿದೆ. ಕುರ್ಚಿ ಗುಜರಿ ವ್ಯಾಪಾರಿಯ ಗೋಣಿ ಸೇರಿತ್ತು. ಎಲ್ಲ ನೆನಪು, ಸಂಬಂಧಗಳು ಹೀಗೆಯೇ- ಒಂದು ದಿನ ಗುಜರಿಗೆ.

ಯು. ದಿವಾಕರ ರೈ

ಮಳೆ 
ಭಾನುವಾರದ ಮುಂಜಾನೆ ಬೇಗನೆ ಎದ್ದು, ಗೆಳೆಯರೊಂದಿಗೆ ಹೊರಗಡೆ ಪಿಕ್‌ನಿಕ್‌ ಹೋಗಬೇಕೆಂದು ನಿಶ್ಚಯಿಸಿದೆ. ಮನೆಯಿಂದ ಹೊರಬರುತ್ತಲೇ ಪಿರಿ ಪಿರಿ ಮಳೆ ಶುರುವಾಯಿತು. ಹಿಂಜರಿಯದೆ ಸ್ಕೂಟಿ ಏರಿ ಹೊರಟು ನಮ್ಮ ಪಿಕ್‌ನಿಕ್‌ ಸ್ಥಳಕ್ಕೆ ತಲುಪಿದೆ. ಗೆಳೆಯ-ಗೆಳತಿಯರು ಅಲ್ಲಿಗೆ ಆಗಲೇ ಬಂದು ಸೇರಿದ್ದರು. ಬಿಸಿ ಬಿಸಿ ಬೋಂಡ ಸವಿಯುತ್ತ ಕುಳಿತ್ತಿದ್ದೆವು. ಅಷ್ಟರಲ್ಲಿ ವೃದ್ಧೆಯೊಬ್ಬರು ಭಿಕ್ಷೆ ಬೇಡುತ್ತ ಅಲ್ಲಿಗೆ ಬಂದರು. ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿದ್ದರು. ನನ್ನಲ್ಲಿದ್ದ ಛತ್ರಿಯನ್ನು ಅವರಿಗೆ ಕೊಟ್ಟೆ. ತಿನ್ನಲು ಬಜ್ಜಿಯನ್ನು ನೀಡಿದೆ. ಅಜ್ಜಿ ನನ್ನನ್ನೇ ನೋಡಿದರು. ಅವರ ಕಂಗಳು ಮಂಜಾಗುತ್ತಿ ವು.

ಪಿಕ್‌ನಿಕ್‌ನಿಂದ ಮರಳಿ ಬಂದ ಮೇಲೆ, “ಏನು ತಂದಿರುವೆ?’ ಎಂದು ಮನೆಯಲ್ಲಿ ಕೇಳಿದರು.
“ಕೃತಾರ್ಥತೆ’ ಎಂದೆ.

ದಿತ್ಯಾ ಗೌಡ

Advertisement

Udayavani is now on Telegram. Click here to join our channel and stay updated with the latest news.

Next