Advertisement
ವೃದ್ಧೆ ವ್ಯಾಪಾರಿಯೊಬ್ಬಳು ತರಕಾರಿ ಗಂಟು ಮೂಟೆಯೊಂದಿಗೆ ಓಡಿ ಹೋಗಲು ಪ್ರಯತ್ನಿಸಿ ಕುಸಿದು ಬಿದ್ದ ಪ್ರಸಂಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಮಾರುಕಟ್ಟೆಗೆ ಬೀಗ ಬಿದ್ದಿದ್ದು, ತರಕಾರಿ ವ್ಯಾಪಾರಿಗಳು ಬಡಾವಣೆಗಳಿಗೆ ಹೋಗಿ ವ್ಯಾಪಾರ ಮಾಡುವಂತೆ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಸೂಚಿಸಿದ್ದಾರೆ. ಬೆಳಗ್ಗೆ ತರಕಾರಿ-ಹಣ್ಣುಗಳನ್ನು ಕೈಬಂಡಿಯೊಳಗೆ ಸಂಗ್ರಹ ಮಾಡುತ್ತಿರುವಾಗಲೇ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದರು. ತೂಕ ಮಾಡಿ ಕೊಡುವವರೆಗೂ ವ್ಯಾಪಾರಿ ಸ್ಥಳದಲ್ಲಿ ನಿಲ್ಲಬೇಕಾಗುತ್ತದೆ. ಇದೇ ಪ್ರಸಂಗ ಹುಡುಕಿಕೊಂಡು ಬಂದ ಪೊಲೀಸರು, ಬೆತ್ತ ಬೀಸಲು ಶುರು ಮಾಡಿದರು. ಆಗ ಗ್ರಾಹಕರು ಮತ್ತು ವ್ಯಾಪಾರಿಗಳು ಲಾಠಿ ಏಟು ತಿನ್ನಬೇಕಾಯಿತು.
Advertisement
ಸಂತೆಗೆ ತಂದ ಟೊಮ್ಯಾಟೋ ಬೀದಿ ಪಾಲು
04:22 PM Apr 10, 2020 | Naveen |