Advertisement

ವಾಡಿಯಲ್ಲಿ ವ್ಯಾಪಾರ ಸಂಪೂರ್ಣ ಸ್ತಬ್ಧ

05:49 PM Jul 06, 2020 | Naveen |

ವಾಡಿ: ರಾಜ್ಯ ಸರಕಾರ ಕರೆ ನೀಡಿದ್ದ ರವಿವಾರದ ಲಾಕ್‌ಡೌನ್‌ ಆದೇಶಕ್ಕೆ ನಗರ ವ್ಯಾಪ್ತಿಯಲ್ಲಿ ಶೇ.50 ರಷ್ಟು ಜನ ಸಹಕಾರ ದೊರೆತಿದೆ. ಮಾರುಕಟ್ಟೆ ಪ್ರದೇಶ ಮತ್ತು ದಿನಸಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌ ಆಗಿದ್ದರೆ, ಬೀದಿಗಳಲ್ಲಿ ಎಂದಿನಂತೆ ಬೈಕ್‌ಗಳ ಓಡಾಟ ಸಾಮಾನ್ಯವಾಗಿತ್ತು.

Advertisement

ಪರ್ಸಿ ಕಲ್ಲು, ಸಿಮೆಂಟ್‌ ಸಾಗಣಿಕೆ ವಾಹನಗಳ ಸಂಚಾರದ ಜತೆಗೆ ಬೈಕ್‌ ಮತ್ತು ಕಾರುಗಳ ಓಡಾಟಕ್ಕೇನು ಕಡಿವಾಣ ಬೀಳಲಿಲ್ಲ. ಪಟ್ಟಣದ ಪ್ರತಿಯೊಂದು ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ವಾಹನಗಳ ಓಡಾಟ ಸರಾಗವಾಗಿತ್ತು. ಹೋಟೆಲ್‌, ಕಿರಾಣಿ, ಮದ್ಯ ದಂಗಡಿ, ತರಕಾರಿ ಸೇರಿದಂತೆ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದರಿಂದ ಪೌರಕಾರ್ಮಿಕರು ಬೀದಿಗಳಿಗೆ ಸ್ಯಾನಿಟೈಸರ್‌ ಸಿಂಪರಣೆ ಮಾಡಲು ಮುಂದಾಗಿದ್ದರು. ಆರೋಗ್ಯ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next