Advertisement
ಈ ಕುರಿತು ಶನಿವಾರ ವಾಡಿ ಪೊಲೀಸ್ ಠಾಣೆಯಲ್ಲಿ ಜಾತ್ರಾಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಸಹಭಾಗಿತ್ವದಲ್ಲಿ ಶಾಂತಿ ಸಭೆ ನಡೆಸಿದ ಪಿಎಸ್ ಐ ವಿಜಯಕುಮಾರ ಭಾವಗಿ, ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ನ ರೂಪಾಂತರಿ ಒ ಮಿಕ್ರಾನ್ ಚೈನ್ ಬ್ರೇಕ್ ಮಾಡಲು ಸರಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪರಿಣಾಮ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಯಾವೂದೇ ಜಾತ್ರೆ, ಸಭೆ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಆದ್ದರಿಂದ ತರ್ಕಸಪೇಟೆ ಗ್ರಾಮದ ದರ್ಗಾ ಜಾತ್ರೆ ನಡೆಸುವಂತಿಲ್ಲ. ಅಲ್ಲದೆ ಈ ಎರಡು ದಿನಗಳಲ್ಲಿ ಭಕ್ತರು ದರ್ಗಾ ಪ್ರವೇಶ ಮಾಡಬಾರದು. ಮನೆಯಲ್ಲೇ ದೇವರಿಗೆ ಪೂಜಿಸುವ ಮೂಲಕ ಭಕ್ತಿ ಸಮರ್ಪಿಸಬೇಕು ಎಂದು ಸೂಚಿಸಿದ್ದಾರೆ.
Advertisement
ವಾಡಿ: ತರ್ಕಸಪೇಟೆ ದರ್ಗಾ ಜಾತ್ರೆ ರದ್ದು;ಶಾಂತಿ ಸಭೆ
04:24 PM Jan 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.