ರಬಕವಿ-ಬನಹಟ್ಟಿ: ʼವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಚಿತ್ರ ರಾಜ್ಯಾದ್ಯಂತ ಶುಕ್ರವಾರ ತೆರೆ ಕಾಣಲಿದೆ. “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಚಿತ್ರವನ್ನು ಶುಕ್ರ ಫಿಲಂಸ್(ಸೋಮಣ್ಣ)ನವರ ಹಂಚಿಕೆಯಲ್ಲಿ ಅಮರ ಜ್ಯೋತಿ ಫಿಕ್ಚರ್ ಸಂಸ್ಥೆಯಿಂದ ನಿರ್ಮಾಣಗೊಂಡಿದೆ.
ವೈಭವೀಕರಣಗಳಿಗೆ ವಿಭಿನ್ನವಾಗಿ ನೈಜತೆ ಹಾಗೂ ಆಧ್ಯಾತ್ಮದ ಬುತ್ತಿಯನ್ನು ಹೊತ್ತು ಕನ್ನಡಿಗರ ಮನೆ-ಮನ ಗೆಲ್ಲುವಲ್ಲಿ ಶುಕ್ರವಾರ ತೆರೆ ಕಾಣಲಿದೆ.
ಕಳೆದ ವಾರ ಅಲ್ಲಮಪ್ರಭು ಟ್ರೇಲರ್ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಿಂದ ಏಕಕಾಲಕ್ಕೆ ಬಿಡುಗಡೆಗೊಳಿಸಲಾಗಿತ್ತು. ಬೆಂಗಳೂರು, ಬಾಗಲಕೋಟೆ ಹಾಗೂ ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಆಗಿರುವುದು ವಿಶೇಷ.
ಈ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ವರ್ಷ ಅಭ್ಯಸಿಸಿ ಕಥೆ-ಸಂಭಾಷಣೆ-ನಿರ್ಮಾಣ ಮಾಡುತ್ತಿರುವ ಮಾಧವಾನಂದ ಶೇಗುಣಸಿಯವರಿಗೆ ಮಹಾವೀರ ಪ್ರಭು ಅವರು ನಿರ್ಮಾಣಕ್ಕೆ ಜತೆಯಾಗಿದ್ದಾರೆ.
ಚಿತ್ರದ ತಾರಾಬಳಗದಲ್ಲಿ ಸಚಿನ್ ಸುವರ್ಣ, ನಿನಾಸಂ ಅಶ್ವಥ್. ರಮೇಶ ಪಂಡಿತ್, ಗಣೇಶರಾವ್ ಕೇಸರ್ಕರ್, ನಾರಾಯಣ ಸ್ವಾಮಿ, ವಿಕ್ರಂ ಸೂರಿ, ರಘು ಭಟ್, ಯತೀರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಸಂದೇಶ ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಶಿವಮೊಗ್ಗ ರಾಮಣ್ಣ, ಅವಿನಾಶ ಪಾಟೀಲ, ರಮಣಾಚಾರ್ಯ, ರಾಧಾ ಕೃಷ್ಣ ರಾವ್, ರಾಜ್ ಉದಯ್, ಸಂಭ್ರಮ ಶ್ರೀ, ಅಮೃತಾ, ವರ್ಷಿಣಿ ಹಾಗು ಇನ್ನಿತರರು ಇದ್ದಾರೆ.
ಖ್ಯಾತ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವಿ ಶರಣ್ ಗದ್ವಾಲ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಕಥೆ-ಚಿತ್ರಕಥೆ-ಪರಿಕಲ್ಪನೆ ಮಾಧವಾನಂದ, ಛಾಯಾಗ್ರಹಣ ಆರ್. ಗಿರಿ ಹಾಗು ರವಿಶಂಕರ್, ಮಾಧವಾನಂದ ಸೇರಿ ಸಂಭಾಷಣೆ ಬರೆದಿದ್ದಾರೆ. ಸಂಗೀತ-ಕುಮಾರ ಈಶ್ವರ, ಸಂಕಲನ-ಬಿ. ಎಸ್. ಕೆಂಪರಾಜು, ಪ್ರಸಾದನ-ರಮೇಶ ಬಾಬು, ವಸ್ತ್ರಾಲಂಕಾರ ಬೆಳ್ಳು ಚುಕ್ಕಿ ವೀರೇಂದ್ರ, ಪ್ರಚಾರ ಕಲೆ-ಮಸ್ತಾನ್, ಪತ್ರಿಕಾ ಸಂಪರ್ಕ-ಎಂ.ಜಿ. ಲಿಂಗರಾಜ್, ಸ್ಥಿರ ಚಿತ್ರಣ-ಪ್ರೇಮ್‌ರಾಜ್ ನೀಡಿದ್ದಾರೆ. ರಾಜ್ಯಾದ್ಯಂತ ಅನೇಕ ಮಠಾಧಿಧೀಶರು ಅಲ್ಲಲ್ಲಿ ಚಿತ್ರ ಮಂದಿರಗಳಲ್ಲಿ ಮೊದಲ ಚಿತ್ರ ಪ್ರದರ್ಶನಕ್ಕೆ ಹಾಜರಾಗುವ ಮೂಲಕ ಚಲನಚಿತ್ರ ವೀಕ್ಷಣೆ ಮಾಡಲಿದ್ದಾರೆ.