Advertisement

ಭಾರತ-ಆಸ್ಟ್ರೇಲಿಯ ನಡುವೆ ಫೈನಲ್‌: ಲಕ್ಷ್ಮಣ್‌ ಭವಿಷ್ಯ

11:14 AM Jun 30, 2019 | keerthan |

ಲಂಡನ್‌: ಇಲ್ಲಿಯವರೆಗೆ ವಿಶ್ವಕಪ್‌ ಸೆಮಿಫೈನಲ್‌ಗೇರುವ ತಂಡಗಳು
ಯಾವುವು ಎಂಬ ಕುತೂಹಲವಿತ್ತು. ಈಗ ಅದು ಬಹುತೇಕ ಖಾತ್ರಿಯಾಗಿದೆ. ಆದ್ದರಿಂದ ಫೈನಲ್‌ಗೇರುವ ತಂಡ ಯಾವುವು ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಭಾರತ ಕ್ರಿಕೆಟ್‌ ಮಾಜಿ ದಂತಕಥೆ ವಿವಿಎಸ್‌ ಲಕ್ಷ್ಮಣ್‌ ಉತ್ತರಿಸಿದ್ದಾರೆ.

Advertisement

ಅವರು ಈ ಕೂಟವೂ 2003ರ ಪುನರಾವರ್ತನೆಯಾಗಲಿದೆ. ಅಂದರೆ ಇಲ್ಲೂ ಕೂಡ ಭಾರತ- ಆಸ್ಟ್ರೇಲಿಯವೇ ಫೈನಲ್‌ ನಲ್ಲಿ ಎದುರಾಗಲಿವೆ ಎಂದಿದ್ದಾರೆ. ಕೂಟಕ್ಕೂ ಮುನ್ನ ದುರ್ಬಲವೆನಿಸಿಕೊಂಡಿದ್ದ ಆಸ್ಟ್ರೇಲಿಯ, ಕೂಟ ಸಮೀಪಿಸುತ್ತಿದ್ದಂತೆ; ಭಾರತದ ವಿರುದ್ಧ ಗೆದ್ದು ಪ್ರಬಲವಾಗಿತ್ತು. ಇದೀಗ ವಿಶ್ವಕಪ್‌ನಲ್ಲೂ ಅತ್ಯುತ್ತಮ ಆಟವಾಡಿ ಸೆಮಿಫೈನಲ್‌ಗೇರುವ ಎಲ್ಲ ಲಕ್ಷಣಗಳನ್ನೂ ತೋರಿದೆ. ಅದರ ಪ್ರಸ್ತುತ ಲಯ ನೋಡಿದರೆ ಫೈನಲ್‌ಗೇರುವುದು ಕಷ್ಟವೇ ಅಲ್ಲ. ಇನ್ನು ಭಾರತ ಫೈನಲ್‌ಗೇರುವುದನ್ನು ತಡೆಯಲು ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next