Advertisement

ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ವಿವಿ ಸ್ಥಾನಮಾನ

12:56 PM Feb 23, 2018 | |

ವಿಧಾನಸಭೆ: ಬೆಂಗಳೂರಿನ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವ ಬೆಂಗಳೂರು ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯ ವಿಧೇಯಕ-2018ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ.

Advertisement

ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ನೀಡುವ ಪದವಿಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ಮತ್ತು ಈ ಕೇಂದ್ರವನ್ನು ನ್ಯಾಷನಲ್‌ ಲಾ ಸ್ಕೂಲ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ವಿಧೇಯಕ ಮಂಡಿಸಲಾಗಿದ್ದು, ಇದಕ್ಕೆ ಸದನ ಬುಧವಾರ ಧ್ವನಿಮತದ ಅಂಗೀಕಾರ ನೀಡಿತು.

ಉನ್ನತ ಶಿಕ್ಷಣ ಸಚಿವ ಪರವಾಗಿ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಗುಣಮಟ್ಟದ ಅರ್ಥಶಾಸ್ತ್ರಜ್ಞರನ್ನು ತಯಾರಿಸಲು ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಮಾದರಿಯಲ್ಲಿ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯದ ಮಾನ್ಯತೆ ನೀಡುವ ಉದ್ದೇಶ ಈ ವಿಧೇಯಕದ್ದಾಗಿದೆ ಎಂದು ಹೇಳಿದರು.

“ಪ್ರಸ್ತುತ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ನಲ್ಲಿ 50 ವಿದ್ಯಾರ್ಥಿಗಳಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ತಲಾ ಶೇ.20ರಷ್ಟು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.40ರಷ್ಟು ಮೀಸಲಾತಿ ಇದೆ. ಅಖೀಲ ಭಾರತ ಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಈಗಾಗಲೇ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಕಾರ್ಯಚಟುವಟಿಕೆಗಳಿಗೆ 250 ಕೋಟಿ ರೂ. ಒದಗಿಸಲಾಗಿದೆ.

ಈ ಮಾದರಿಯ ಏಕೈಕ ಕಾಲೇಜು ಇದಾಗಿರುವ ಕಾರಣ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿದರೆ ಅಭ್ಯರ್ಥಿಗಳಿಗೆ ನೀಡುವ ಪದವಿಗಳಿಗೆ ಮಾನ್ಯತೆ ಸಿಗುತ್ತದೆ. ಉಳಿದಂತೆ ಕುಲಪತಿಗಳ ನೇಮಕ ಮತ್ತಿತರ ವಿಚಾರಗಳು ಇತರೆ ವಿಶ್ವವಿದ್ಯಾಲಗಳಿಗೆ ರುವ ಕಾನೂನು, ನಿಯಮಗಳೇ ಇದಕ್ಕೂ ಅನ್ವಯವಾಗಲಿವೆ,’ ಎಂದು ಮಾಹಿತಿ ನೀಡಿದರು.

Advertisement

ಅಭ್ಯುದಯ ವಿವಿ ವಿಧೇಯಕ: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌, ನಾರ್ತ್‌ ಎಕ್ಸ್‌ಟೆನÒನ್‌ ಸಂಸ್ಥೆ ವಿದ್ಯಾರ್ಥಿಗಳಿಗೆ ಉಚಿತ ವಸತಿಯುತ ಶಿಕ್ಷಣ ನೀಡಲು ಆರಂಭಿಸಲಿರುವ ಖಾಸಗಿ ವಿಶ್ವವಿದ್ಯಾಲಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ವಿಧೇಯಕ-2018ನ್ನು ಮಂಡಿಸಿದರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್‌, ನಾರ್ತ್‌ ಎಕ್ಸ್‌ಟೆನÒನ್‌ ಸಂಸ್ಥೆ ಶಿಕ್ಷಣ ಆಕಾಂಕ್ಷಿಗಳಿಗೆ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸಲು ಕಲಬುರಗಿ ಜಿಲ್ಲೆ ಕಮಲಾಪುರದ ನವನಿಹಾಲ್‌ ಗ್ರಾಮದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಖಾಸಗಿ ವಿವಿ ಸ್ಥಾಪಿಸಲು ಮುಂದಾಗಿದ್ದು, ಅದಕ್ಕೆ ಅವಕಾಶ ನೀಡಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಅವರು ವಿಧಾನಸಭೆಗೆ ಗುರುವಾರ ತಿಳಿಸಿದರು.

ಈ ವಿಶ್ವವಿದ್ಯಾಲಯವು ಕಲೆ, ಸಾಹಿತ್ಯ, ಭಾಷೆಗಳು, ಮಾನವಿಕಗಳು, ವಾಣಿಜ್ಯ, ಶಿಕ್ಷಣ, ತತ್ವಶಾಸ್ತ್ರ, ವಿಜ್ಞಾನ, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ, ವ್ಯವಸ್ಥಾಪನೆ, ಕಾನೂನು, ಸಂಗೀತ, ಜೀವನ, ಯೋಗ, ಆರೋಗ್ಯ ವಿಜ್ಞಾನ, ಶಾರೀರಿಕ ಮತ್ತು ಸಂಬಂಧಿಸಿದ ವಿಜ್ಞಾನ ಕೋರ್ಸ್‌ಗಳಲ್ಲಿ ಬೆಳಕು ಚೆಲ್ಲಲು ಪದವಿ, ಸ್ನಾತಕೋತ್ತರ, ಡಾಕ್ಟೊರಲ್‌ ಮತ್ತು ಪೋಸ್ಟ್‌ ಡಾಕ್ಟೊರಲ್‌ ಕೋರ್ಸ್‌ಗಳನ್ನು ನಡೆಸಲಿದೆ ಎಂದು ಹೇಳಿದರು. ಸದನ ಧ್ವನಿಮತದಿಂದ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next