Advertisement

ವಿವಿಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಿ

11:13 AM Oct 13, 2021 | Team Udayavani |

ಬೆಂಗಳೂರು: ಆವಿಷ್ಕಾರ, ಸಂಶೋಧನೆಗಳಿಂದಲೇ ಪ್ರಗತಿ ಸಾಧ್ಯವಾಗಿದ್ದು, ಪ್ರತಿ ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಮಂಗಳವಾರ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಫಿಸಿಟಾಲ್‌ ಸೆಂಟರ್‌ ಆಫ್ ಅಕಾಡೆಮಿಕ್ಸ್‌ಗೆ ಚಾಲನೆ ನೀಡಿ ಮಾತನಾಡಿ, ಖಾಸಗಿ ವೈದ್ಯಕೀಯ ಕಾಲೇಜುಗಳು ಬಹಳಷ್ಟಿವೆ. ಆದರೆ ಚಿಕಿತ್ಸೆ, ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.

Advertisement

ಕೋವಿಡ್‌ ಲಸಿಕೆಯನ್ನು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಆವಿಷ್ಕಾರ ಮಾಡಿದೆ. ಅದೇ ರೀತಿ ನಮ್ಮಲ್ಲೂ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಆದ್ಯತೆ ನೀಡಬೇಕು. ಹಾಗೆಯೇ ಯುವಜನರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳ ಬೇಕು. ಅನೇಕ ಯುವಜನರು ವೈದ್ಯರಾಗಬೇಕೆಂದು ಮುಂದೆ ಬರುತ್ತಾರೆ. ಆದರೆ ಎಷ್ಟು ಜನರು ಸಂಶೋಧಕರಾಗಲು ಮುಂದೆ ಬರುತ್ತಾರೆ ಎಂದು ಚಿಂತನೆ ನಡೆಸಬೇಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿ ರಾಜ್ಯದಲ್ಲಿ ಏಮ್ಸ… ನಿರ್ಮಿಸಲು ಕ್ರಮ ವಹಿಸಿದೆ. ಪ್ರತಿ ಜಿÇÉೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ರಾಜ್ಯದ ನಾಲ್ಕು ಕಡೆಗಳಲ್ಲಿ ಮೆಡಿಕಲ್‌ ಕಾಲೇಜುಗಳು ಶೀಘ್ರ ಆರಂಭವಾಗಿದೆ. ಇತ್ತೀಚೆಗೆ ಅಟಲ್‌ ಬಿಹಾರಿ ವಾಜಪೇಯಿ ಮೆಡಿಕಲ್‌ ಕಾಲೇಜು ಆರಂಭಿಸಲಾಗಿದೆ ಎಂದು ಸುಧಾಕರ್‌ ತಿಳಿಸಿದರು. ಪ್ರತಿ ಜಿಲ್ಲೆಗಳಲ್ಲಿ ಹೃದಯ ಸಂಬಂಧಿ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ.

ಇದನ್ನೂ ಓದಿ:- ಶಿವಮೊಗ್ಗ ಸೇರಿದಂತೆ 3 ರಾಜ್ಯಗಳ 20ಕ್ಕೂ ಹೆಚ್ಚು ಕಡೆ NIA ದಾಳಿ

ಜಯದೇವ ಆಸ್ಪತ್ರೆ ಯಾವುದೇ ಕಾರ್ಪೊರೇಟ್‌ ಸಂಸ್ಥೆಗೆ ಕಡಿಮೆ ಇಲ್ಲದಂತೆ ಬೆಳೆದಿದೆ. ಈ ಆಸ್ಪತ್ರೆಯಲ್ಲಿ ಸದಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಅದೇ ರೀತಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಏಕೆ ಬೆಳೆಯುವುದಿಲ್ಲ ಎಂದು ಚಿಂತಿಸಬೇಕಿದೆ. ಪ್ರತಿ ವೈದ್ಯರು, ಆಡಳಿತ ಮಂಡಳಿ ಇದನ್ನು ಮಾದರಿಯಾಗಿಸಿ ಬದ್ಧತೆ, ಜವಾಬ್ದಾರಿ ವಹಿಸಿಕೊಂಡು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಇತರರು ಇದ್ದರು.

Advertisement

ವೈದ್ಯಕೀಯ ಸಾಧನ ರಫ್ತು ಸಾಮರ್ಥ್ಯ ಭಾರತಕ್ಕಿದೆ-

 ಬೆಂಗಳೂರು: ಮೇಕ್‌ ಇನ್‌ ಇಂಡಿಯಾದಿಂದಾಗಿ ಹೊರದೇಶಗಳಿಗೂ ವೈದ್ಯಕೀಯ ಸಾಧನಗಳನ್ನು ರಫ್ತು ಮಾಡುವ ಸಾಮರ್ಥ್ಯ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಮಂಗಳವಾರ ಐಐಟಿಪಿಎಲ್‌ನ ನೂತನ ಕ್ಯಾತ್‌ ಲ್ಯಾಬ್‌ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್‌ ಆರಂಭದಲ್ಲಿ ವೈದ್ಯಕೀಯ ಸಾಧನಗಳ ಕೊರತೆ ಇತ್ತು. ಹೆಚ್ಚಿನ ವೈದ್ಯಕೀಯ ಉಪಕರಣಗಳಿಗಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ. ಪಿಪಿಇ ಕಿಟ್‌ಗೂ ಚೀನಾವನ್ನು ಅವಲಂಬಿಸಬೇಕಾಗಿತ್ತು.

ನಂತರ ಪ್ರಧಾನಿ ಮೋದಿಯವರ ಪ್ರಯತ್ನದಿಂದ ಅನೇಕ ದೇಶೀಯ ಕಂಪನಿಗಳು ಮಾಸ್ಕ…, ಪಿಪಿಇ ಕಿಟ್‌ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವಂತಾಯಿತು. ಇದರಿಂದ ನವಭಾರತ ನಿರ್ಮಾಣ ಸಾಧ್ಯವಾಗಿದೆ ಎಂದರು. ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ‘ಮೇಕ್‌ ಇನ್‌ ಇಂಡಿಯಾ’ ಕರೆ ನೀಡಿದ್ದಾರೆ.

ಉತ್ಪಾದನಾ ವಲಯದಲ್ಲಿ ಎಫ್ ಡಿ ಐ ಹೂಡಿಕೆ 2014 ಕ್ಕಿಂತ ಮುನ್ನ 20 ಬಿಲಿಯನ್‌ ಡಾಲರ್‌ ಇತ್ತು. ಈಗ ಮೂರು ಪಟ್ಟು ಹೆಚ್ಚಿದ್ದು, 68 ಬಿಲಿಯನ್‌ ಡಾಲರ್‌ ಹೂಡಿಕೆ ಬಂದಿದೆ. ಇನ್ನು ಐಐಟಿಪಿಎಲ್‌ ಕಂಪನಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ ಎಂದು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next