Advertisement

ವಿಟಿಯು ಪರೀಕ್ಷೆ ಮುಂದೂಡಿಕೆ

05:25 AM Jul 28, 2017 | Team Udayavani |

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಜು.28ರಂದು ನಡೆಯಬೇಕಿದ್ದ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಆ.1ರಂದು ನಿಗದಿಪಡಿಸಲಾಗಿದೆ.

Advertisement

ಆದರೆ, ಪ್ರಾಯೋಗಿಕ ಪರೀಕ್ಷೆಗಳು ಕಲಬುರಗಿ ಹಾಗೂ ಬೀದರ್‌ ಹೊರತುಪಡಿಸಿ ಉಳಿದ ಜಿಲ್ಲೆಗಳ ಆಯಾ ಕಾಲೇಜ್‌ಗಳಲ್ಲಿ ಪೂರ್ವ ನಿಗದಿಯಂತೆ ಜು.28ರಂದೇ ನಡೆಯಲಿವೆ. ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳ
ಕಾಲೇಜುಗಳಲ್ಲಿ ಜು.31ರಂದು ನಡೆಸಲಾಗುವುದೆಂದು ವಿಟಿಯು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next