ಉದ್ಘಾಟನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಕರ ಪುಸ್ತಕದಲ್ಲಿ ಶುಭ ಕೋರಿ ಹಸ್ತಾಕ್ಷರ ನೀಡಿದರು.
Advertisement
ವೈಟಿಪಿಎಸ್ ಅನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಕೆಳಗೆ ಮತ್ತು ಮೇಲೆ ಕೆಂಪು ನೆಲಹಾಸು ಹಾಸುವ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು. ಬಳಿಕ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾ ಯಿತು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆರ್ ಟಿಪಿಎಸ್, ವೈಟಿಪಿಎಸ್‌ಗೆ ನೀರು ಸಂಗ್ರಹಿಸುವ ಉದ್ದೇಶದಿಂದ ನಿರ್ಮಿಸಿದ ಗುರ್ಜಾಪುರ ಬ್ಯಾರೇಜ್ ಲೋಕಾರ್ಪಣೆ ಮಾಡಿದರು. ಇಂಧನ ಸಚಿವ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತವಾರಿ ಸಚಿವ ತನ್ವೀರ್ ಸೇs…, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್, ಶಾಸಕ ತಿಪ್ಪರಾಜ್ ಹವಾಲ್ದಾರ್ ಇದ್ದರು. ರಾಯಚೂರು ಸಮೀಪದ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರವನ್ನು ಸಿಎಂ ಲೋಕಾರ್ಪಣೆಗೊಳಿಸಿದರು.