Advertisement
ರಾಜ್ಯದಲ್ಲಿ ರೈತರ ಸಾಲಮನ್ನಾ, ಆಶ್ರಯಮನೆ ಸಾಲ ಮನ್ನಾ, ಶೆ„ಕ್ಷಣಿಕ ಸಾಲ ಮನ್ನಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಭೆ„ಠಕ್, ನಗರ ಹಾಗೂ ಗ್ರಾಮಾಂತರಗಳಿಗೆ 94ಸಿ ಮತ್ತು 94 ಸಿಸಿ ಮನೆ ನಿವೇಶನ ಹಂಚಿಕೆಗೆ ಮರುಚಾಲನೆಯೇ ಮೊದಲಾದ ಬಿಜೆಪಿಯ ರಾಜಕಾರಣಿಗಳು ಊಹಿಸಲು ಅಸಾಧ್ಯವಾದ ಕಾಂಗ್ರೆಸ್ ಪಕ್ಷದ ಅಗಾಧ ಸಾಧನೆಗಳನ್ನು ಇಲ್ಲಿನ ಕೆಲವು ಕೈಲಾಗದ ಮಂದಿ ತಮ್ಮದೇ ಸಾಧನೆ ಎಂದು ಬಿಂಬಿಸಲು ಹೊರಟಿರುವುದು ವಿಷಾದನೀಯ ಎಂದರು.
ಸಭೆಯಲ್ಲಿ ಕ್ಷೇತ್ರದ ಶಾಸಕರು, ಜಿ.ಪಂ.ಸದಸ್ಯರು, ತಾ.ಪ.ಸದಸ್ಯರೂ ಸೇರಿ ಬಿಜೆಪಿ ಜನಪ್ರತಿನಿಧಿಗಳು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ನೀತಿಯ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸಿರಿಯಣ್ಣ ಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ನಾಯಕ್, ಹಾಗೂ ಗ್ರಾ.ಪಂ. ಸದಸ್ಯರುಗಳಾದ ಚೇತನ್ ಶೆಟ್ಟಿ, ಜಗದೀಶ ಶೆಟ್ಟಿ ಅಜೆಕಾರು, ಸದಾಶಿವ ದೇವಾಡಿಗ ಉಪಸ್ಥಿತರಿದ್ದರು. ಹಿರ್ಗಾನ ಗ್ರಾ. ಪಂ. ಅಧ್ಯಕ್ಷ ಸಂತೋಷ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ವಾಸು ಶೆಟ್ಟಿ ವಂದಿಸಿದರು.