Advertisement

ಅರಣ್ಯ ಇಲಾಖೆಯಿಂದ ವೃಕ್ಷಾ ಬಂಧನ ಕಾರ್ಯಕ್ರಮ

12:16 PM Aug 04, 2020 | Suhan S |

ಧಾರವಾಡ: ಸಸ್ಯ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಲು ಧಾರವಾಡ ಅರಣ್ಯ ವಿಭಾಗದ ವತಿಯಿಂದ “ವೃಕ್ಷಾ ಬಂಧನ’ ಎಂಬ ವಿನೂತನ ಕಾರ್ಯಕ್ರಮ ಆಚರಿಸಲಾಗುತ್ತಿದೆ.

Advertisement

ಪ್ರತಿವರ್ಷ ವಿಶ್ವ ಪರಿಸರ ದಿನ ಸಂದರ್ಭದಲ್ಲಿ ಸಹಸ್ರಾರು ಸಸಿ ನೆಡಲಾಗುತ್ತದೆ. ನಂತರದ ದಿನಗಳಲ್ಲಿ ಅವುಗಳ ರಕ್ಷಣೆ, ಪೋಷಣೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಧಾರವಾಡ ಅರಣ್ಯ ವಿಭಾಗದ ಅಧಿಕಾರಿಗಳು ಟ್ವಿಟರ್‌, ಫೇಸ್‌ಬುಕ್‌, ಇನ್ಸ್ಟಾ ಗ್ರಾಂ , ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕ ರಕ್ಷಾ ಬಂಧನ ದಿನದಂದು ವೃಕ್ಷಾ ಬಂಧನ ಆಚರಿಸಲು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಅನೇಕರು ಇಂದು ಹಲವೆಡೆ ವೃಕ್ಷಾ ಬಂಧನ ಆಚರಿಸಿ ಸಹಮತ ವ್ಯಕ್ತಪಡಿಸಿದ್ದಾರೆ.

ಕಳೆದ ಜೂ.5ರಂದು ವಿಶ್ವ ಪರಿಸರ ದಿನ ಸಂದರ್ಭದಲ್ಲಿ ಸಸಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಸಿ ನೆಡುವುದಷ್ಟೇ ಅಲ್ಲ ಅದರ ರಕ್ಷಣೆ, ಪೋಷಣೆ ಅದಕ್ಕಿಂತ ಮುಖ್ಯ ಎಂಬುದನ್ನು ಪ್ರಚುರಪಡಿಸಲು ವೃûಾ ಬಂಧನ ಸಹಕಾರಿಯಾಗಿದೆ ಎಂದು ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ ಹೇಳಿದರು. ಸಾರ್ವಜನಿಕರಲ್ಲಿ ಗಿಡ ಮರಗಳೊಂದಿಗೆ ,ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ವೃಕ್ಷಾ ಬಂಧನ ಒಂದು ವಿನೂತನ ಮಾರ್ಗವೆನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next