Advertisement

ವಿಪಿಎಂ ಕನ್ನಡ ಶಾಲೆಯ ಸ್ನೇಹ ಸಮ್ಮಿಲನ ಕಾರ್ಯಕ್ರಮ

01:29 PM Sep 09, 2019 | Suhan S |

ಮುಂಬಯಿ, ಸೆ. 8: ಕನ್ನಡ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ ಮುಂಬಯಿ ಆಯೋಜಕತ್ವದಲ್ಲಿ ಮುಲುಂಡ್‌ ವಿಪಿಎಂ ಕನ್ನಡ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕರ ಸ್ನೇಹ ಸಮ್ಮಿಲನವು ಮುಲುಂಡ್‌ ವಿಪಿಎಂ ಕನ್ನಡ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕಾರ್ಯಕ್ರಮದಲ್ಲಿ ಹೆಚ್ಚಿನ ನಿವೃತ್ತ ಶಿಕ್ಷಕರು ಹಾಗೂ 1978ರಿಂದ 2016 ರ ವರೆಗಿನ 400ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎಲ್ಲಾ ಉಪಸ್ಥಿತ ಶಿಕ್ಷಕರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿದ್ದು, ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಹಳೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು, ನಿವೃತ್ತ ಶಿಕ್ಷಕರು ದೀಪ ಪ್ರಜ್ವಲನೆಗೈದರು. ಸ್ವಾಗತದ ಬಳಿಕ ಹಳೆ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ ಪ್ರದರ್ಶನ ನಡೆಯಿತು. ಹುಲಿ ವೇಷ ನೃತ್ಯ, ಯಕ್ಷಗಾನ ನೃತ್ಯ, ಭರತನಾಟ್ಯ, ಬಿಟ್ ಬಾಕ್ಸಿಂಗ್‌ ಮೊದಲಾದವುಗಳು ಪ್ರದರ್ಶನಗೊಂಡವು. ನಿವೃತ್ತ ಶಿಕ್ಷಕರನ್ನು ಶ್ರೀಫಲ, ಶಾಲು, ಸ್ಮರಣಿಕೆ ಹಾಗೂ ಸಸಿಗಳನ್ನಿತ್ತು ಗೌರವಿಸಲಾಯಿತು.

ಅದೇ ರೀತಿ ಯೋಗ ತರಬೇತಿ ಶಿಕ್ಷಕಿ, ಇಂಗ್ಲಿಷ್‌ ಸ್ಪೀಕಿಂಗ್‌ ಹಾಗೂ ವ್ಯಕ್ತಿತ್ವ ವಿಕಾಸ ತಂಡ, ಘೋಡ್‌ಬಂದರ್‌ ರೋಡ್‌ನ‌ ಶ್ರೀ ಅಯ್ಯಪ್ಪ ಸ್ವಾಮಿ ಕ್ರೀಡಾ ಹಾಗೂ ಸಾಂಸ್ಕೃತಿಕ ಮಂಡಳಿಯ ಸದಸ್ಯರು, ಸುಮಧುರ ಗೀತೆಯನ್ನು ಪ್ರದರ್ಶಿಸಿದ ಶಾಲೆಯ ಪ್ರಾಥಮಿಕ ವಿಭಾಗದ ಮಕ್ಕಳನ್ನು, ಅಲ್ಲದೆ ಹಳೆವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವರದಿ ವರ್ಷದಲ್ಲಿ ನಿಧನರಾದ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಿಕ್ಷಕರೆಲ್ಲರೂ ಹಿತವಚನಗಳನ್ನು ನೀಡಿ, ಸಂಘದ ಮುಂದಿನ ಕಾರ್ಯಗಳಿಗಾಗಿ ಶುಭ ಹಾರೈಸಿದರು. ನೆರೆದ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಸ್ನೇಹಿತರ ಜತೆ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಸಂಘದ ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿಯವರು ಮಾತನಾಡಿ, ತಮ್ಮ ಹಿಂದಿನ ದಿನಗಳನ್ನು ನೆನಪಿಸುತ್ತಾ, ಕನ್ನಡ ಮಕ್ಕಳ ಏಳ್ಗೆಗಾಗಿ ನಾವೆಲ್ಲಾ ಒಟ್ಟಾಗಬೇಕು ಎಂದು ಎಲ್ಲರಲ್ಲೂ ಕಳಕಳಿಯಿಂದ ಕೇಳಿಕೊಂಡರು. ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಸುವರ್ಣ ಅವರ ಅವಿರತ ಪರಿಶ್ರಮ ಅಲ್ಲದೇ, ಸಂಘದ ಅಧ್ಯಕ್ಷರಾದ ಕರುಣಾಕರ್‌ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್‌ ಶಹಾಪೂರ್‌ ಇವರೆಲ್ಲರ ಸೂಕ್ತ ಸಲಹೆ, ಪ್ರಯತ್ನಗಳಿಂದ ಸಂಘದ ಇತರ ಎಲ್ಲಾ ಕಾರ್ಯಕರ್ತರ ಶ್ರಮ ಹಾಗೂ ನೆರೆದ ಎಲ್ಲ ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದಾಗಿಯೇ ಈ ಕಾರ್ಯಕ್ರಮ ಯಶಸ್ಸನ್ನು ಕಂಡಿತು. ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ, ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳು ಎಂದು ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next