ನವದೆಹಲಿ: ದೇಶದ ಮೂರು ಲೋಕಸಭಾ ಹಾಗೂ 30 ವಿಧಾನಸಭಾ ಉಪಚುನಾವಣೆಯ ಮತದಾನ ಶನಿವಾರ (ಅಕ್ಟೋಬರ್ 30) ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡಿದೆ. ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆಯುತ್ತಿದೆ.
ಇದನ್ನೂ ಓದಿ:ನಟ ‘ಪುನೀತ್’ಗೆ ಹೃದಯಘಾತ ಹೀಗೆ ಆಗಿರಬಹುದು- ಡಾ.ಅಂಜನಪ್ಪ ವಿಶ್ಲೇಷಣೆ
ಅದೇ ರೀತಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕೂಡಾ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ. ಆಂಧ್ರಪ್ರದೇಶದ ಒಂದು ಕ್ಷೇತ್ರ, ಅಸ್ಸಾಂನ ಐದು, ಬಿಹಾರದ ಎರಡು, ಹರ್ಯಾಣದ ಒಂದು, ಹಿಮಾಚಲ ಪ್ರದೇಶದ ಮೂರು, ಕರ್ನಾಟಕದ ಎರಡು, ಮಧ್ಯಪ್ರದೇಶದ ಮೂರು, ಮಹಾರಾಷ್ಟ್ರದ ಒಂದು, ಮೇಘಾಲಯದ ಮೂರು, ಮಿಜೋರಾಂನ ಒಂದು, ನಾಗಲ್ಯಾಂಡ್ ನ ಒಂದು, ರಾಜಸ್ಥಾನದ ಎರಡು, ತೆಲಂಗಾಣದ ಒಂದು ಹಾಗೂ ಪಶ್ಚಿಮಬಂಗಾಳದ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದ್ದು, ನವೆಂಬರ್ 2ರಂದು ಉಪಚುನಾವಣೆಯ ಫಲಿತಾಂಶ ಬಹಿರಂಗವಾಗಲಿದೆ. ಕರ್ನಾಟಕದ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನವಾಣೆಯ ಮತದಾನ ಮಂದಗತಿಯಲ್ಲಿ ಸಾಗಿದೆ.
ಬಿಹಾರದ ಉಪಚುನಾವಣೆಯಲ್ಲಿ 5.85 ಲಕ್ಷ ಅರ್ಹ ಮತದಾರರಿದ್ದು, ಮತದಾನ ಆರಂಭಗೊಂಡಿದೆ. ಪಶ್ಚಿಮಬಂಗಾಳ ಸೇರಿದಂತೆ ದೇಶದ 30 ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾರರು ಮತದಾನ ಮಾಡುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.