Advertisement
ಈ ಕ್ಷೇತ್ರಗಳಲ್ಲಿ ಒಟ್ಟು 2.67 ಕೋಟಿ ಮತದಾರರು 241 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಈ ಪೈಕಿ ಪಕ್ಷೇತರರೇ 133 ಮಂದಿ ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. 30,164 ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 2.11 ಲಕ್ಷ ಸಿಬ್ಬಂದಿ ಮತದಾನ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
Related Articles
Advertisement
ಒಟ್ಟು ಕ್ಷೇತ್ರಗಳು: 14ಸಾಮಾನ್ಯ ಕ್ಷೇತ್ರಗಳು: 11
ಮೀಸಲು ಕ್ಷೇತ್ರಗಳು: 03
ಒಟ್ಟು ಅಭ್ಯರ್ಥಿಗಳು: 241
ಪುರುಷರು: 224
ಮಹಿಳೆಯರು: 17 ಒಟ್ಟು ಮತದಾರರು: 2.76 ಕೋಟಿ
ಪುರುಷರು: 1.35 ಕೋಟಿ
ಮಹಿಳೆಯರು: 1.32 ಕೋಟಿ
ಇತರರು: 2,817 ಯುವ ಮತದಾರರು: 12.37 ಲಕ್ಷ
ಮೊದಲ ಬಾರಿ ಓಟ್ ಹಾಕುವವರು: 4.68 ಲಕ್ಷ ಒಟ್ಟು ಮತಗಟ್ಟೆಗಳು: 30,164
ಸಮಸ್ಯಾತ್ಮಕ ಮತಗಟ್ಟೆ: 6,012
ಮಾದರಿ ಮತಗಟ್ಟೆ: 486
ಮತದಾನದ ಸಮಯ: ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ಒಟ್ಟು ಇವಿಎಂ ಬಳಕೆ
ಬ್ಯಾಲೆಟ್ ಯೂನಿಟ್: 52,112
ಕಂಟ್ರೋಲ್ ಯೂನಿಟ್: 36,196
ವಿವಿಪ್ಯಾಟ್: 37,705 ಅತಿ ಹೆಚ್ಚು ಅಭ್ಯರ್ಥಿಗಳು
ಬೆಂಗಳೂರು ಉತ್ತರ: 31 ಅತಿ ಕಡಿಮೆ ಅಭ್ಯರ್ಥಿಗಳು
ಹಾಸನ: 06 ಅತಿ ಹೆಚ್ಚು ಮತದಾರರು
ಬೆಂಗಳೂರು ಉತ್ತರ: 28.48 ಲಕ್ಷ ಅತಿ ಕಡಿಮೆ ಮತದಾರರು
ಉಡುಪಿ-ಚಿಕ್ಕಮಗಳೂರು: 15.13 ಲಕ್ಷ ಅತಿ ಹೆಚ್ಚು ಮೊದಲ ಬಾರಿ ಮತದಾರರು
ಚಿತ್ರದುರ್ಗ: 41,713 ಅತಿ ಕಡಿಮೆ ಮೊದಲ ಬಾರಿ ಮತದಾರರು
ಬೆಂಗಳೂರು ಕೇಂದ್ರ: 24,284 ಅತಿ ಹೆಚ್ಚು ಯುವ ಮತದಾರರು
ಚಿತ್ರದುರ್ಗ: 1.08 ಲಕ್ಷ ಅತಿ ಕಡಿಮೆ ಯುವ ಮತದಾರರು
ಬೆಂಗಳೂರು ದಕ್ಷಿಣ: 65,662 ಅತಿ ಹೆಚ್ಚು ಮತಗಟ್ಟೆ
ಬೆಂಗಳೂರು ಗ್ರಾಮಾಂತರ-2,672
ಅತಿ ಕಡಿಮೆ ಮತಗಟ್ಟೆ-
ಉಡುಪಿ-ಚಿಕ್ಕಮಗಳೂರು: 1,837 ಎಡಗೈ ತೋರು ಬೆರಳಿಗೆ ಶಾಯಿ: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಕ್ಕು ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಚುನಾವಣಾ ಶಾಯಿ ಹಾಕಲಾಗುವುದು. 486 ವಿಶೇಷ ಮತಗಟ್ಟೆಗಳು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ 393 ಸಖೀ, ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ 32 ಸಾಂಪ್ರದಾಯಿಕ ಹಾಗೂ ಸಂಪೂರ್ಣವಾಗಿ ದಿವ್ಯಾಂಗರು ನಿರ್ವಹಿಸುವ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಹಾಗೂ ಬಿಬಿಎಂಪಿ ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ತಲಾ 36 ಸಖೀ ಮತಗಟ್ಟೆಗಳಿವೆ. ಚಾಮರಾಜನಗರ ಮತ್ತು ಮೈಸೂರಿನಲ್ಲಿ ಅತಿ ಹೆಚ್ಚು ತಲಾ 9 ಸಾಂಪ್ರದಾಯಿಕ ಮತಗಟ್ಟೆಗಳು, ದಿವ್ಯಾಂಗರು ನಿರ್ವಹಿಸುವ ಮತಗಟ್ಟೆಗಳು ಅತಿ ಹೆಚ್ಚು ಮಂಡ್ಯದಲ್ಲಿ 16 ಮತ್ತು ಮೈಸೂರಿನಲ್ಲಿ 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 6 ಸಾವಿರ ಸಮಸ್ಯಾತ್ಮಕ ಮತಗಟ್ಟೆಗಳು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 30,164 ಮತಗಟ್ಟೆಗಳ ಪೈಕಿ 6,012 ಮತಗಟ್ಟೆಗಳನ್ನು ಸಮಸ್ಯಾತ್ಮಕ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದರಲ್ಲಿ 990 ಮತಗಟ್ಟೆಗಳಲ್ಲಿ ಹೆಚ್ಚುವರಿ ಕೇಂದ್ರ ಶಸಸ್ತ್ರ ಮೀಸಲು ಪಡೆ ನಿಯೋಜಿಸಲಾಗುತ್ತಿದೆ. 2,038 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗುತ್ತದೆ. ಮತದಾನದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲ್ಗೊಳ್ಳಿ. ಸ್ವ ವಿವೇಕದಿಂದ, ಮುಕ್ತವಾಗಿ, ನಿರ್ಭೀತರಾಗಿ, ಯಾವುದೇ ಒತ್ತಡ ಅಥವಾ ಆಮಿಷಕ್ಕೊಳಗಾಗದೇ ಮತ ಚಲಾಯಿಸಿ ನೈತಿಕ ಚುನಾವಣೆಯ ಆಶಯವನ್ನು ಸಾಕಾರಗೊಳಿಸಿ.
-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ