Advertisement
ಸುರತ್ಕಲ್‍ನಲ್ಲಿ ಸೋಮವಾರ ನಡೆದ ರೋಡ್ ಶೋದಲ್ಲಿ ಅವರು ಮಾತನಾಡಿದರು. ನಾವು ನಮ್ಮ ಪ್ರಧಾನಿ ಸಾಧನೆಗಳನ್ನು, ಅಭಿವ್ಧೃ ಕೆಲಸಗಳನ್ನು ಹೇಳಿ ಮತಕೇಳುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ನಾನು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿಗಳನ್ನು ಜನತೆ ಗಮನಿಸಿದ್ದಾರೆ. ಕರಾವಳಿಯಲ್ಲಿ ರೈಲ್ವೆ ನಿಲ್ದಾಣ ಹಾಗೂ ಮಾರ್ಗ ಅಭಿವೃದ್ದಿಗಾಗಿ 1244 ಕೋ.ರೂ, ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ 7646 ಕೋ.ರೂ , ಬಂದರು ಹಾಗೂ ಮೀನುಗಾರಿಕಾ ಜಟ್ಟಿ ನಿರ್ಮಾಣಕ್ಕೆ 230 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ -ಅಮೃತ ಯೋಜನೆಯಲ್ಲಿ 161.ರೂ. ಅನುದಾನ ಬಂದಿದೆ. ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ ಹಾಗೂ ಅಭಿವೃದ್ದಿಗೆ 297 ಕೋ.ರೂ. ರಾಷ್ಟ್ರೀಯ ಹೆದ್ದಾರಿ – ಮಂಗಳೂರು ಉಪವಿಭಾಗಕ್ಕೆ 4367 ಕೋ.ರೂ. ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಸಂಸದರ ಅದರ್ಶ ಗ್ರಾಮ ಯೋಜನೆಯಡಿ ಸುಳ್ಯದ ಬಳ್ಪವನ್ನು ಸರ್ವಾಂಗೀಣ ಅಭಿವೃದ್ದಿಪಡಿಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಗಮನ ಸೆಳೆಯತಕ್ಕ ಮಟ್ಟಕ್ಕೆ ಅಭಿವ್ಧೃ ಯಾಗಿದೆ . ಕಳೆದ 5 ವರ್ಷಗಳಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಯಡಿ 17.50 ಕೋ.ರೂಯನ್ನು ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಬಳಸಿಕೊಳ್ಳಲಾಗಿದೆ. ಗ್ರಾಮೀಣ ನೀರು ಸರಬರಾಜು , ಪ್ರಧಾನ ಮಂತ್ರಿ ಸಡಕ್ ಯೋಜನೆ , ಪ್ರವಾಸೋದ್ಯಮ ಅಭಿವೃದ್ದಿ , ಆರೋಗ್ಯ ಇಲಾಖೆ , ಶಿಕ್ಷಣ ಇಲಾಖೆಗಳಿಗೂ ಕೇಂದ್ರ ಸರಕಾರದಿಂದ ಗರಿಷ್ಟ ಪ್ರಮಾಣದಲ್ಲಿ ಅನುದಾನವನ್ನು ತಂದುಕೊಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ನುಡಿದರು. ಪ್ಲಾಸ್ಟಿಕ್ ಪಾರ್ಕ್ , ಸ್ಮಾರ್ಟ್ ಪೋರ್ಟ್
ಈ ಬಾರಿ ಕರಾವಳಿಯ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಹೇಳಿದ ಅವರು, ಈ ಅವಯಲ್ಲಿ ಪ್ಲಾಸ್ಟಿಕ್ ಪಾರ್ಕ್ , ಕೋಕನೆಟ್ ಪಾರ್ಕ್ , ವಿಶೇಷ ಕೃಷಿ ವಲಯ , ಸ್ಮಾರ್ಟ್ ಪೋರ್ಟ್ , ಐಟಿ ಪಾರ್ಕ್ ಮುಂತಾದ ಯೋಜನೆಗಳನ್ನು ಕರಾವಳಿ ಭಾಗಕ್ಕೆ ತರಲು ಈಗಾಗಲೇ ಆರಂಭಿಕ ಪ್ರಕ್ರಿಯೆಗಳು ನಡೆದಿವೆ. ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ತ್ವಾತಿಕ ಒಪ್ಪಿಗೆ ದೊರೆತಿದ್ದು , 1000 ಕೋ.ರೂ. ಬಿಡುಗಡೆಯ ಭರವಸೆ ದೊರೆತಿದೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುತ್ತೇನೆ. ಈ ಮೂಲಕ ಕರಾವಳಿಯಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
Related Articles
Advertisement