Advertisement

ಆಗಸದಿಂದ ಇಳಿದು ಬಂದ ಮತದಾನ ಸಂದೇಶ

12:34 PM Apr 14, 2019 | pallavi |
ಧಾರವಾಡ: ಕರ್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸದಿಂದ ಇಳಿದು ಬಂದ ಮತದಾನ ಸಂದೇಶದ ಕರಪತ್ರಗಳು ಜನರಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದವು.
ಜಿಲ್ಲಾ ಸ್ವೀಪ್‌ ಸಮಿತಿಯು ಮತದಾರರ ಜಾಗೃತಿಗಾಗಿ ಏರ್ಪಡಿಸಿದ್ದ ಪ್ಯಾರಾಗ್ಲೆಡಿಂಗ್‌ ಕಾರ್ಯಕ್ರಮ ಶನಿವಾರ ಬೆಳಗ್ಗೆ ಕೆಸಿಡಿ ಆವರಣದಿಂದ ಆರಂಭವಾಯಿತು.
ಬೆಂಗಳೂರಿನ ಏವಿಯೇಷನ್‌ ಮತ್ತು ಸ್ಪೋರ್ಟ್‌ ಎಂಟರ್‌ಪ್ರೈಸಸ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಅವರು ಬಾನಂಗಳಕ್ಕೆ ಹಾರಿ ಮತದಾರರ ಜಾಗೃತಿ ಸಂದೇಶ ಹರಡಿದರು. ಪ್ಯಾರಾಗ್ಲೈಡಿಂಗ್‌ ಬೃಹತ್‌ ಪರದೆ ಮೇಲಕ್ಕೆ ಹಾರುತ್ತಲೇ ಸಂಪೂರ್ಣವಾಗಿ ಬಿಚ್ಚಿಕೊಂಡಿತು.
ಅದರ ಹಿನ್ನೆಲೆಯಲ್ಲಿ ಕಟ್ಟಲಾಗಿದ್ದ ಮತದಾರರ ಜಾಗೃತಿ ಸಂದೇಶ ಅನಾವರಣಗೊಂಡು ಮೈದಾನದಲ್ಲಿ
ಬೆಳಗಿನ ವಾಯುವಿಹಾರಕ್ಕೆ ನೆರೆದಿದ್ದ ಜನರನ್ನು ಆಕರ್ಷಿಸಿತು.
ಪ್ಯಾರಾಗ್ಲೈಡಿಂಗ್‌ ವಾಯು ವಾಹನವು ಕೆಲಗೇರಿ, ಸಂಪಿಗೆ ನಗರ, ಶ್ರೀನಗರ, ಸಪ್ತಾಪುರ ಸುತ್ತಮುತ್ತಲಿನ ಪರಿಸರದಲ್ಲಿ ಹಾರಾಡಿತು.  ವಾಯುವಿಹಾರಕ್ಕೆ ಬಂದಿದ್ದ ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಸಂತಸದಿಂದ ಪ್ಯಾರಾಗ್ಲೈಡಿಂಗ್‌ ವಾಹನದೊಂದಿಗೆ ಸೆಲ್ಫಿ ತೆಗೆದುಕೊಂಡರು.
ಡಿಡಿಪಿಐ ಗಜಾನನ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ.ಹುಡೇದಮನಿ, ನಿವೃತ್ತ ಡಿಸಿಎಫ್‌ ಶಂಕರ್‌ ಸಾಧನಿ, ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಶ್ವನಾಥ, ಸ್ವೀಪ್‌ ಸಮಿತಿಯ ಕೆ.ಎಂ. ಶೇಖ್‌, ಜಿ.ಎನ್‌. ನಂದನ ಇದ್ದರು.
ಮತಜಾಗೃತಿ ಮೂಡಿಸಿದ ಪ್ಯಾರಾಗ್ಲೈಡಿಂಗ್‌
ಹುಬ್ಬಳ್ಳಿ: ಜಿಲ್ಲಾ ಸ್ವೀಪ್‌ ಸಮಿತಿ, ತಾಲೂಕಾಡಳಿತ,  ಗಳೂರು ಏವಿಯೇಷನ್‌ ಮತ್ತು ಸೋರ್ಟ್‌ ಎಂಟರ್‌ಪ್ರೈಸಸ್‌ ಆಶ್ರಯದಲ್ಲಿ ಶನಿವಾರ ಬಿವಿಬಿ ಮೈದಾನದಲ್ಲಿ ಪ್ಯಾರಾಗ್ಲೈಡಿಂಗ್‌ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಪೈಲಟ್‌ ಸಿದ್ದಾರ್ಥ ಪ್ಯಾರಾಗ್ಲೆ„ಡಿಂಗ್‌ ವಾಹನ ಮೈದಾನದಿಂದ ಆಗಸಕ್ಕೆ ಏರಿಸಿ ವಿದ್ಯಾನಗರ, ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಸುತ್ತಮುತ್ತ ಸುಮಾರು 20 ರಿಂದ 25 ನಿಮಿಷ ಹಾರಾಟ ನಡೆಸುವ ಮೂಲಕ ಮತದಾನ ಮಹತ್ವ ಸಾರಿದರು. ಪ್ಯಾರಾಗ್ಲೆ„ಡಿಂಗ್‌ ವಾಹನಕ್ಕೆ ಮತದಾನ ಜಾಗೃತಿ ಬ್ಯಾನರ್‌ ಕಟ್ಟಲಾಗಿತ್ತು.
ಮೈದಾನದಲ್ಲಿ ಕಾನೂನು ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಅಂತರ್‌ ಕಾಲೇಜು ಕ್ರಿಕೆಟ್‌ ಪಂದ್ಯಾವಳಿಗೆ ಆಗಮಿಸಿದ್ದ ಕ್ರೀಡಾಪಟುಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತದಾನ ಕುರಿತು ಜಾಗೃತಿ ಮೂಡಿಸಿದರು.
ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಜಿಲ್ಲಾ ಸ್ವೀಪ್‌ ಸಮಿತಿ ಅಧಿಕಾರಿಗಳು, ಪ್ಯಾರಾ ಮೋಟರ್‌ಗ್ಲೈಡಿಂಗ್‌ನ ಕುಮಾರಸ್ವಾಮಿ, ಸುನೀಲ, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next