ಬನಹಟ್ಟಿ: ಭಾರತದ ಸಂವಿಧಾನ ಜಗತ್ತಿನಲ್ಲಿ ಶ್ರೇಷ್ಠವಾದ ಸಂವಿಧಾನವಾಗಿದೆ. ನಮ್ಮ ಸಂವಿಧಾನ ನಮಗೆ ವಾಕ್ ಸ್ವಾತಂತ್ರ್ಯ ಮತ್ತು ಮತದಾನದಂತಹ ಎರಡು ಮಹತ್ವದ ಕೊಡುಗೆ ನೀಡಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಶನಿವಾರ ರಬಕವಿಯ ಎಂ.ವಿ.ಪಟ್ಟಣ ಮೈದಾನದಲ್ಲಿ ರಬಕವಿ ಬನಹಟ್ಟಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನ ಶ್ರೇಷ್ಠವಾದುದು. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶಕ್ಕೆ ಭದ್ರತೆ ನೀಡುವಂತಹ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗೆ ಮತ್ತು ಪಕ್ಷಕ್ಕೆ ಮತದಾನ ಮಾಡಬೇಕು. ಎಲ್ಲರೂ ಸಂವಿಧಾನದ ಆಶೋತ್ತರಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ರಬಕವಿ-ಬನಹಟ್ಟಿ ತಾಲ್ಲೂಕಿನ ನೂತನ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಧ್ವಜಾರೋಹಣ ನೆರವೇರಿಸಿ ಪೊಲೀಸ್, ಗೃಹ ರಕ್ಷಕ ಹಾಗೂ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ದೇಶಕ್ಕಾಗಿ ಕೀರ್ತಿ ತರುವ ಕೆಲಸದಲ್ಲಿ ತೊಡಗಿರಿ ಎಂದರು.
ಧ್ವಜಾರೋಹಣದಲ್ಲಿ ಸಿಪಿಐ ಅಶೋಕ ಸದಲಗಿ, ತೇರದಾಳ ಪಿಎಸ್‌ಐ ಕೆ. ಟಿ. ಶೋಭಾ, ಪೌರಾಯುಕ್ತ ಆರ್. ಎಂ. ಕೊಡುಗೆ, ತೇರದಾಳ ಉಪತಹಶೀಲ್ದಾರ್ ಎಸ್. ಬಿ. ಕಾಂಬಳೆ, ಭೀಮಶಿ ಮಗದುಮ್ಮ, ಬಸವರಾಜ ತೆಗ್ಗಿ, ನಗರಸಭೆ ಸದಸ್ಯರಾದ ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಪ್ರಭಾಕರ ಮೋಳೆದ, ವಿಶ್ವನಾಥ ಸವದಿ, ವೆಂಕಟೇಶ ನಿಂಗಸಾನಿ, ನೀಲಕಂಠ ದಾತಾರ, ವಿಜಯ ನಾಶಿ, ಲಕ್ಕಪ್ಪ ಪಾಟೀಲ, ಯುನುಸ ಚೌಗಲಾ, ಪಧ್ಮಜೀತ ನಾಡಗೌಡ ಪಾಟೀಲ, ಮಹಾದೇವ ಕೋಟ್ಯಾಳ, ಸಂಗಪ್ಪ ಕುಂದಗೋಳ, ರಾಜಶೇಖರ ಸೋರಗಾಂವಿ ಅನೇಕರಿದ್ದರು.