Advertisement

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

08:07 AM May 07, 2024 | Suhan S |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭಾ ಚುನಾವಣೆಗೆ ಮತ ಯಂತ್ರದ ತಾಂತ್ರಿಕ ದೋಷದಿಂದ ನಗರದ ಮತಗಟ್ಟೆಯೊಂದರಲ್ಲಿ ಇನ್ನು ಆರಂಭವಾಗಿಲ್ಲ.

Advertisement

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 4 ರಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಮತದಾನಕ್ಕೆ ನಡೆಯದೇ ತೊಡಕಾಗಿದೆ. ಬಿಸಿಲಿನ ಭಯದಿಂದ ಬೆಳಿಗ್ಗೆಯೇ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿರುವ ಮತದಾರರು ಸಾಲಗಟ್ಟಿ ನಿಂತಿದ್ದಾರೆ.

ಅಧಿಕಾರಿಗಳು ದೋಷಿತ ಮತಯಂತ್ರ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next