Advertisement

ಪ್ರಜಾಪ್ರಭುತ್ವ ಸದೃಢತೆಗೆ ಮತದಾನ ಮುಖ್ಯ

04:55 PM Jan 26, 2021 | Team Udayavani |

ಕಮಲನಗರ: ಪ್ರಜಾಸತ್ತಾತ್ಮಕ ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನರ ಪಾಲ್ಗೊಳ್ಳುವಿಕೆ ಮುಖ್ಯ. ಆದ್ದರಿಂದ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ರಮೇಶ ಪೆದ್ದೆ ಹೇಳಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ, ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

ಸಮಾಜ ಚಿಂತಕ ನೀಲಕಂಠರಾವ್‌ ಕಾಂಬಳೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಮತದಾನವಾಗುತ್ತಿಲ್ಲ. ಇದನ್ನು ಹೆಚ್ಚಿಸಲು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಉಪ ತಹಶೀಲ್ದಾರ್‌ ಗೋಪಾಲಕೃಷ್ಣ, ಶಿರಸ್ತೇದಾರ್‌ ಅಶ್ವಿ‌ನಕುಮಾರ ಪಾಟೀಲ್‌, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಕಳಸೆ, ಅನಿಲಕುಮಾರ ಬಿರಾದಾರ, ಏಕನಾಥ ಗಾಯಕವಾಡ, ರಾಜಕುಮಾರ ವಡಗಾವೆ, ಸುಭಾಷ ಬಿರಾದಾರ, ಲಕ್ಷ್ಮೀಬಾಯಿ ಸಜ್ಜನಶೆಟ್ಟಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next