Advertisement

ನಾಮದಾರ, ಚೌಕಿದಾರರಿಗೆ ಓಟ್‌ ಹಾಕಾವ ಕಾವಲುಗಾರ

11:22 PM Apr 27, 2019 | mahesh |

ಪ್ರಧಾನಿ ಮೋದಿ, ತಮ್ಮ ಅವಧಿ ಮುಗಿದ್ರಾಗ ದೇಶದಾಗ ತಮ್ಮ ಸಲುವಾಗಿಯಾದ್ರೂ ಓಟ್‌ ಹಾಕಾರ ಸಂಖ್ಯೆ ಜಾಸ್ತಿ ಮಾಡಿಸೇನಿ ಅಂತ ಹೆಮ್ಮೆಯಿಂದ ಹೇಳೂವಂತಾ ಪರಿಸ್ಥಿತಿ ಇಲ್ಲ.

Advertisement

ಸಾಲಿ ಸೂಟಿ ಅಂತೇಳಿ ಯಜಮಾನಿ ಅಕ್ಕನ ಮಗಳು ಮನಿಗಿ ಬಂದಾಳು. ನಾವು ಧನೇ ಧಮ್‌ ಎಲೆಕ್ಷನ್‌ ಮುಗಿಸಿ ಎಲ್ಲಿ ಯಾರು ಗೆಲ್ತಾರು, ಯಾರು ಸೋಲ್ತಾರು ಅಂತ ಲೆಕ್ಕಾ ಹಾಕೋಂತ ಕುಂತೇವಿ. ಯಜಮಾನಿ¤ ಎಲೆಕ್ಷನ್‌ ಗದ್ಲಾ ಮುಗಿದ ಕೂಡ್ಲೆ ಎಲ್ಲೆರ ಹೊರಗಡೆ ಟೂರ್‌ ಹೋಗೊ ಪ್ಲಾನ್‌ ಹಾಕೊಂಡು, ಯಾವೂರಿಗಿ ಹೋಗಬೇಕು. ಯಾವಾಗ ಹೋಗಬೇಕು. ಎಲ್ಲೆಲ್ಲೆ ಹೋಗಬೇಕು ಅಂತ ಎಲೆಕ್ಷನ್‌ ಮುಗಿದ ಮಾರನೇ ದಿನಾ ಕ್ಯಾಂಡಿಡೇಟ್‌ಗೊàಳು ಯಾವ್‌ ಊರಾಗ್‌ ಎಷ್ಟು ಓಟು ಬಿದ್ದಾವ. ಎಲ್ಲೆಲ್ಲಿ ಯಾರ್ಯಾರು ಒಳ ಹೊಡತಾ ಕೊಟ್ಟಾರ ಅಂತ ಕುಂತ ಪಟ್ಟಿ ಮಾಡಿದಂಗ ಟೂರ್‌ ಪ್ಲ್ರಾನ್‌ ರೆಡಿಯಾಗಿತ್ತು.

ಎಲೆಕ್ಷನ್‌ ಮುಗೀತು ಎಲ್ಲೆರ ಪ್ರವಾಸ ಹೋಗೂನು ನಡಿ ಅಂದ್ಲು ಯಜಮಾನಿ¤, ಅಕಿಗೆ ಅಕಿ ಲೆಕ್ಕಾಚಾರ, ನಮಗ ನಮ್ಮ ಲೆಕ್ಕಾಚಾರ. ಬ್ಯಾಸಿಗಿ ಯಾಕೋ ಭಾಳ್‌ ಕಾಸ್ಟಿ ಅಕ್ಕೇತಿ ಅಂತೇಳಿ. ಟೂರಿನ ಟೆಂಡರ್‌ ತಪ್ಪಿಸಿಕೊಳ್ಳಾಕ ಮೋದಿ ಎಲೆಕ್ಷನ್‌ ಮುಗಿಮಟಾ ಎಲ್ಲಿ ಹೋಗುವಂಗಿಲ್ಲ ಅಂತ ಪತ್ನಿಯ ಪ್ರವಾಸದ ಪ್ಯಾಕೇಜ್‌ನಿಂದ ತಪ್ಪಿಸಿಕೊಳ್ಳಾಕ ಪ್ರಧಾನಿ ರಕ್ಷಣೆಗೆ ತೊಗೊಂಡೆ.

ಹೋದಲ್ಲೆಲ್ಲಾ ನಾನ ಎಲ್ಲಾರಿಗೂ ಚೌಕಿದಾರ್‌ ಅಂತ ಮೋದಿ ಸಾಹೇಬ್ರು ಹೇಳಾಕತ್ತಿದ್ರಿಂದ ದೇಶದ ಕಾವಲುಗಾರ ಅನ್ನಾರು ನಮ್ಮ ರಕ್ಷಣೆಗೂ ಬರ್ತಾರು ಅಂತ ಯಜಮಾನಿ¤ ಮುಂದ ಧೈರ್ಯಾಮಾಡಿ ಹೇಳಿದ್ನಿ. ಅವರಿಗೇನು ಮನ್ಯಾಗ ಹೆಂಡ್ತಿ ಇದ್ದಿದ್ರ ಗೊತ್ತಕ್ಕಿತ್ತು ಊರೂರು ತಿರುಗ್ಯಾಡೂದು. ನಮ್ಮ ಓಟು ಹಾಕೂದು ಮುಗದೈತೆಲ್ಲಾ. ನಾವೇನು ಬೆಂಗಳೂರು ಮಂದಿಯಂಗ ಓಟು ಹಾಕೂ ದಿನಾನ ಪ್ರವಾಸಕ್ಕ ಹೋಗೂನು ಅನ್ನಾಕತ್ತಿಲ್ಲ ಅಂತ ವಾದಾ ಮಾಡಿದ್ಲು.

ಅಕಿ ಮಾತು ಕೇಳಿ ಯಾರ್‌ ಮ್ಯಾಲ ಅಕಿಗಿ ಸಿಟೈತಿ ಅಂತ ಗೊತ್ತಾಗ್ಲಿಲ್ಲಾ. ಪ್ರಧಾನಿ ಮೋದಿ ಸಾಹೇಬ್ರು ಇಡೀ ಜಗತ್ತು ಸುತ್ತಿ, ಬ್ಯಾರೇದಾರ ಫ್ಯಾಮಿಲಿ ಬಗ್ಗೆ ಬೇಕಾದಂಗ ಮಾತ್ಯಾಡ್ತಾರು ತಮ್ಮ ಸ್ವಂತ ಫ್ಯಾಮಿಲಿ ಬಗ್ಗೆ ಒಂದ್‌ ಮಾತು ಮಾತಾಡುದಿಲ್ಲ ಅಂತ ಮೋದಿ ಮ್ಯಾಲ್‌ ಸಿಟ್ಟೋ, ಏನ್‌ ಓಟ್‌ ಹಾಕ್ರಿ ಅಂತೇಳಿ ಎಲೆಕ್ಷನ್‌ ಕಮಿಷನ್ನೂ, ಸರ್ಕಾರ, ಎಲೆಕ್ಷನ್‌ ನಿಂತಾರು, ಎಲ್ಲಾರೂ ಸಣ್‌ ಹುಡುಗೂರಿಗೆ ಶಟಗೊಂಡಾಗ ಹಾಲ್‌ ಕುಡಸಾಕ್‌ ರಮಿಸಿ ಹೇಳಿದಂಗ ಓಟ್‌ ಹಾಕ್ರಿ ಅಂತ ಬೆಂಗಳೂರಿನ ಮಂದಿಗೆ ಹೇಳಿದ್ರೂ, ಏನ್‌ ಕೊಟ್ರೂ ಹಾಲ್‌ ಕುಡ್ಯುದಿಲ್ಲಾ ಅಂತ ಹಠಾ ಮಾಡೋ ಕಿಡಗೇಡಿ ಹುಡುಗೂರಂಗ, ಬೆಂಗಳೂರಿನ ಮಂದಿ ತಮ್ಮ ಹಠಾ ಬಿಡದ ಓಟು ಹಾಕೂದು ತಪ್ಪಿಸಿಕೊಂಡು, ಈ ನಾಡಿನ ಸತ್‌ ಪ್ರಜೆಗೋಳು ಅನ್ನೋದನ್ನ ಖಾತ್ರಿ ಮಾಡ್ಸಿದ್ರು.

Advertisement

ಪ್ರತಿ ಎಲೆಕ್ಷನ್‌ ಬಂದಾಗ ಓಟ್‌ ಹಾಕಲಾರ್‌ ಮ್ಯಾಲ್‌ ಏನರ ಕ್ರಮ ಕೈಗೊಬೇಕು ಅಂತ ಬಿಸಲಾಗ ನಿಂತು ಓಟ್‌ ಹಾಕಿ ಬಂದ ಮಂದಿ ಬಾಯಿ ಬಡಕೊಳ್ಳುದು ಮಾತ್ರ ತಪ್ಪವಾಲು. ಮೊದ್ಲು ಗೆಳಾರ ಜೋಡಿ ಅಷ್ಟ ಮಾತಾಡಿ ಸಿಟ್ಟು ಕಡಿಮಿ ಮಾಡ್ಕೊತಿದ್ರು, ಈಗ ಗೋಬಲ್ಸ್‌ನ ಸಂಬಂಧಿ ಸೋಸಿಯಲ್‌ ಮೀಡಿಯಾ ಬಂದಿರೋದ್ರಿಂದ ಅದರಾಗ ತಮ್ಮ ಸಿಟ್ಟು ಪೋಸ್ಟ್‌ ಮಾಡಿ ಸಮಾಧಾನ ಮಾಡ್ಕೊಳ್ಳಾಕತ್ತಾರು. ಆದರ, ಆಡಳಿತ ಮಾಡಾರು ಮಾತ್ರ ಕಾನೂನು ಬದಲಾಯಿಸಬೇಕು ಅಂತ ಎಂದೂ ಯೋಚನೆ ಮಾಡೂದಿಲ್ಲ ಅವರು. ಓಟು ಕಡಿಮಿ ಆಗಿದ್ರಾಗ ಗೆಲ್ಲೂ ಚಾನ್ಸ್‌ ಜಾಸ್ತಿ ಇರತೈತಿ ಅನ್ನೋ ಲೆಕ್ಕಾಚಾರ ಹಾಕ್ಕೊಂ ಡಿರ್ತಾರು ಅಂತ ಕಾಣತೈತಿ. ಅದ್ಕ ಪ್ರತಿ ಸಾರಿ ಎಲೆಕ್ಷನ್‌ ಬಂದಾಗೂ° ಎಲೆಕ್ಷನ್‌ ಸಿಸ್ಟಮ್‌ ಬದ್ಲಾಗಬೇಕು ಅಂತ ಅಸಹಾಯಕ ಪ್ರಜಾಪ್ರಭುತ್ವದ ಭವ್ಯ ಭಾರತದ ಪ್ರಜೆಗೋಳು ಟಿವಿ ಟಿಆರ್‌ಪಿ ಹೆಚ್ಚಸಾಕ ಬಾಯಿ ಬಡ್ಕೊಳ್ಳೂದು ಮಾತ್ರ ತಪ್ಪವಾಲು¤.

ಐದು ವರ್ಷದಾಗ ಜಗತ್ತ ಹೊಳ್ಳಿ ನೋಡುವಂಗ ಅಧಿಕಾರ ನಡಿಸೇನಿ ಅಂತ ಹೇಳ್ಳೋ ಪ್ರಧಾನಿ ನರೇಂದ್ರ ಮೋದಿ, ತಮ್ಮ ಅವಧಿ ಮುಗಿದ್ರಾಗ ದೇಶದಾಗ ತಮ್ಮ ಸಲುವಾಗಿಯಾದ್ರೂ ಓಟ್‌ ಹಾಕಾರ ಸಂಖ್ಯೆ ಜಾಸ್ತಿ ಮಾಡಿಸೇನಿ ಅಂತ ಹೆಮ್ಮೆಯಿಂದ ಹೇಳೂವಂತಾ ಪರಿಸ್ಥಿತಿ ಇಲ್ಲಾ. ಬ್ಯಾರೇದಾರು ಬ್ಯಾಡ, ಕಾಂಗ್ರೆಸ್‌ ಲೀಡರ್‌ಗೊಳ ಪೋಗ್ರಾಮಿಗೆ ಹೋಗಿ ಮೋದಿ, ಮೋದಿ ಅಂತ ಕೂಗೋ ಮೋದಿಯ ಕುಡ್ಡು ಭಕ್ತರಾದ್ರೂ ದೇಶದಾಗ ಹತ್ತು ಪರ್ಸೆಂಟ್‌ ಓಟು ಜಾಸ್ತಿ ಹಾಕಿಸು ಕೆಲಸಾ ಮಾಡಿದ್ರ, ಚೌಕಿದಾರನ ಸಲುವಾಗಿ ದೇಶ ಜಾಗೃತವಾಗಿ ಪ್ರಜಾಪ್ರಭುತ್ವ ಗಟ್ಟಿಗೊಳಸಾಕ ಜನಾ ಓಟ್‌ ಹಾಕಾಕತ್ತಾರು ಅಂತ ಅಂದ್ಕೊಬೌದಿತ್ತು. ಇಲ್ಲಾಂದ್ರ ಮೋದಿ ಸಾಹೇಬ್ರು ಹೇಳ್ಳೋ ನಾಮ್‌ದಾರ್‌ ಕುಟುಂಬದ ವಿರುದ್ಧ ಆದ್ರೂ ಫ್ಯಾಮಿಲಿ ಪೊಲಿಟಿಕ್ಸ್‌ ವಿರೋಧಿ ಸಾಕಾದ್ರೂ ಓಟ್‌ ಹಾಕಿದ್ರೂ, ಪ್ರಜಾಪ್ರಭುತ್ವದ ಬೇರುಗೋಳು ಗಟ್ಟಿಗೊಳ್ಳಾಕತ್ತಾವು ಅಂತ ಅಂದ್ಕೊಬೌದಿತ್ತು.

ಬಿಜೆಪಿಂದ ಎಲೆಕ್ಷನ್‌ ನಿಂತ್‌ ಅಭ್ಯರ್ಥಿಗೋಳು ನಮ್ಮ ಮುಖಾ ನೋಡಬ್ಯಾಡ್ರಿ ಮೋದಿ ಮುಖಾ ನೋಡಿ ಮತಾ ಹಾಕ್ತಿ ಅಂತ ನಾಚಿಕಯಿಲ್ಲದ ಬೀದಿ ಬೀದ್ಯಾಗ ಕೈ ಮುಕ್ಕೊಂಡು ತಿರುಗ್ಯಾಡಿದ್ರು, ಹದಿನೈದು ಲಕ್ಷ ಜನರ ಪ್ರತಿನಿಧಿ ಆಗಾರಿಗೆ ತಮ್ಮ ಸ್ವಂತ ಮುಖಕ್ಕ ಒಂದು ಓಟು ಹಾಕಿಸಿಕೊಳ್ಳು ತಾಕತ್‌ ಇಲ್ಲಾಂದ್ರ ಎಲೆಕ್ಷನ್ನರ ಯಾಕ್‌ ನಿಲ್ಲಬೇಕು ? ಐದು ವರ್ಷದಾಗ ದೇಶ ಬದಲಾಗೇತಿ ಅಂತ ಹೇಳಿಕೊಳ್ಳಾಕತ್ತಿದ್ರೂ, ಒಂದು ಪರ್ಸೆಂಟ್‌ ಓಟ್‌ ಜಾಸ್ತಿ ಹಾಕಸುವಷ್ಟು ಜನರ ಮನಸ್ಸು ಪರಿವರ್ತನೆ ಮಾಡಾಕ್‌ ಆಗಿಲ್ಲ ಅಂದ್ರ, ದೇಶ ದಾಗ ಏನಾರು ಬದಲಾವಣೆ ಆಗೇತಿ ಅಂತ ಜನರಿಗೆ ಅನಸಿಲ್ಲಾ ಅಂತ ಕಾಣತೈತಿ. ಎಲ್ಲಿ ಮಟಾ ಅಭ್ಯರ್ಥಿ ಯೋಗ್ಯತೆ ನೋಡಿ ಜನರು ಓಟು ಹಾಕೋ ದಿಲ್ಲೋ. ಅಲ್ಲಿ ಮಟಾ ಓಟಿನ್‌ ಪರ್ಸಂ ಟೇಜ್‌ ಜಾಸ್ತಿ ಆಗುದಿಲ್ಲ. ದೇಶ ಬದಲಾವಣೆ ಆಗುದಿಲ್ಲ ಅನಸೆôತಿ.

ಈಗಿನ ರಾಜಕೀ ವ್ಯವಸ್ಥೆ ಬಗ್ಗೆ ಜನರಿಗೆ ಭ್ರಮ ನಿರಸನ ಆಗಿರೋದ್ರಿಂದ ಯಾರಿಗಿ ಓಟ್‌ ಹಾಕಿದ್ರ ಏನ್‌ ಪ್ರಯೋಜನ ಅನ್ನೋ ಮನಸ್ಥಿತಿ ಹೆಚ್ಚಾಗಾಕತ್ತೇತಿ ಅಂತ ಕಾಣತೈತಿ, ಅದ್ಕ ಬುದ್ಧಿವಂತರು ಅಂತ ಹೇಳಿಕೊಳ್ಳೋ ಜನರ ಎಲೆಕ್ಷೆನ್‌ ದಿನಾ ಓಟ್‌ ಹಾಕದ ಪ್ರವಾಸ ಮಾಡಾಕತ್ತಾರು ಅಂತ ಅನಸ್ತೆ„ತಿ. ಆದ್ರ, ಇಂವ ಬದಲಾವಣೆ ಮಾಡದಿದ್ರೂ, ಬ್ಯಾರೇದಾಂವರ ಬಂದು ಬದಲಾ ವಣೆ ಮಾಡ್ತಾನು ಅನ್ನೋ ನಂಬಿಕೆ ಇಟ್ಕೊಂಡಿರೋ ಜನರು ತಮ್ಮ ಒಂದು ಓಟಿನಿಂದ ಏನಾರು ಬದಲಾವಣೆ ಅಕ್ಕೇತಿ ಅನ್ನೋ ನಂಬಿಯೊಳಗ ಸುಡು ಬಿಸಲಾಗನೂ ಸರತಿ ಸಾಲಿನ್ಯಾಗ ನಿಂತು ಓಟ್‌ ಹಾಕಾಕತ್ತಾರು. ಅದ್ಕ ಚೌಕಿದಾರ, ನಾಮದಾರಕ್ಕಿಂತ ಇವರ ನಿಜವಾದ ಪ್ರಜಾಪ್ರಭುತ್ವದ ಕಾವಲುಗಾರರು ಅಂತ ಅನಸ್ತೆ„ತಿ.

ಪ್ರಧಾನಿ ಸಾಹೇಬ್ರು ಐದು ವರ್ಷ ಅಧಿಕಾರ ನಡೆಸಿ ಮನ್‌ ಕಿ ಬಾತ್‌ ಅಂತ ತಮಗ ತಿಳಿದಿದ್ದು ಹೇಳಿ, ಬೇಕಾದ್ರ ಕೇಳಿÅ, ಬ್ಯಾಡಾದ್ರ ಬಿಡ್ರಿ ಅಂತ ಭಾಷಣಾ ಮಾಡಿ, ಈಗ ಅಧಿಕಾರ ಮುಗ್ಯಾಕ ಬಂದಾಗ ಅಪರೂಪಕ್ಕ ಬ್ಯಾರೇದಾರ ಪ್ರಶ್ನೆಗೆ ಉತ್ತರಾ ಕೊಡೊ ಧೈರ್ಯಾ ಮಾಡಿದ್ದು ನೋಡಿ ಪ್ರಧಾನಿ ಏನಾರ ಹೊಸಾದು ಹೇಳ್ತಾರು ಅಂತೇಳಿ ಇಡಿ ದೇಶಾನ ಬಾಯಿ ಬಿಟ್ಕೊಂಡು ಕುಂತಿತ್ತು.

ಇಂಟರ್‌ನ್ಯಾಷನಲ್‌ ಕಿಲಾಡಿ ಅಕ್ಷಯ್‌ ಕುಮಾರ್‌, ಆರಂಭಕ್ಕ ಕೇಳಿದ್‌ ಪ್ರಶ್ನೆ ನೋಡೇ ಸಂದರ್ಶನದ ಮುಂದಿನ ಕತಿ ಏನಿರತೈತಿ ಅಂತ ಅರ್ಧಾ ತಿಳಿಯುವಂಗಿತ್ತು. ಐದು ವರ್ಷ ಅಧಿಕಾರ ನಡೆಸಿ, ಎಲೆಕ್ಷನ್‌ದಾಗ ಬಹಿರಂಗವಾಗಿ ತಮ್ಮ ಸಾಧನೆಯನ್ನೂ ಹೇಳದ ಪ್ರಧಾನಿ ಸಾಹೇಬ್ರು ಸಂದರ್ಶನದಾಗಾದ್ರೂ ತಮ್ಮ ಸಾಧನೆ ಬಗ್ಗೆ ಮಾತಾಡ ಬೌದು ಅಂದೊRಂಡಾರಿಗೆ ನಿರಾಸೆ ಆದಂಗ ಆತು ಕಾಣತೈತಿ.

ರಾಜಕೀ ಬಿಟ್ಟು ಫ್ಯಾಮಿಲಿ ವಿಷಯನಾದ್ರೂ ಫ‌ುಲ್‌ ಡಿಟೇಲ್‌ ಆಗಿ ಮಾತ್ಯಾಡ್ತಾರು ಅಂತ ಭಾಳ ಮಂದಿ ಬಾಯಿ ತಕ್ಕೊಂಡು ಕುಂತಿದ್ರು ಅಂತ ಕಾಣತೈತಿ. ನಮ್ಮ ದೇಶದ ಜನರಿಗೆ ಬ್ಯಾರೆ ಯಾವ್‌ ವಿಷಯದಾಗ ಎಷ್ಟು ಆಸಕ್ತಿ ಇರತೈತೊ ಗೊತ್ತಿಲ್ಲ. ಬ್ಯಾರೇದಾರ ಗಂಡಾ ಹೆಂಡ್ತಿ ವಿಷಯ ಕೇಳೂದು ಅಂದ್ರ ಎಲ್ಲಾರ್‌ ಕಿ ನೆಟ್ಟಗ ಅಕ್ಕಾವು. ಪ್ರಧಾನಿ ಮೋದಿ ಸಾಹೇಬ್ರು ಅವರ ಫ್ಯಾಮಿಲಿ ಬಗ್ಗೆಯಾದ್ರೂ ಫ‌ುಲ್‌ ಡಿಟೇಲ್‌ ಹೇಳ್ತಾರು ಅಂದೊRಂಡು ಕಾಕೋಂತ ಕುಂತಾರಿಗೆ, ತೊಳಿಲಾರ್ದ ಮಾವಿನ ಹಣ್ಣು ತಿನ್ನುದೆಂಗ್‌ ಅಂತ ಹೇಳಿ ಇಪ್ಪತ್ತೂಂದನೇ ಶತಮಾನದಾಗ ಜಗತ್ತಿಗೆ ತಮ್ಮ ಬಾಲ್ಯದ ಅದ್ಭುತ ಸಂಶೋಧನೆಯನ್ನ ಹೇಳಿ ಜಗತ್ತ ನಿಬ್ಬೆರಗಾಗುವಂಗ ಮಾಡಿದ್ರು. ಇದರಕ್ಕಿಂತ ದೊಡ್ಡ ಸಂಶೋಧನೆ ಮಾಡಾಕ ಸಾಧ್ಯ ಇಲ್ಲಂತೇಳಿ ನಾಸಾದಾರು ಮಂಗಳ ಗ್ರಹಕ್ಕ ಹೋಗು ಬದ್ಲು ಭಾರತಕ್ಕ ಬರಾಕತ್ತಾರಂತ ಮಂದಿ ಆಡುಕೊಳ್ಳು ವಂಗಾಗೇತಿ.

ಪ್ರಧಾನಿ ಸಾಹೇಬ್ರಿಗೆ ಈಗ್ಲೂ ಅವರವ್ವಾನ ಖರ್ಚಿಗೆ ರೊಕ್ಕಾ ಕೊಟ್ಟು ಕಳಸ್ತಾರು ಅಂತ ಎಲೆಕ್ಷನ್‌ ಮೂಮೆಂಟ್‌ನ್ಯಾಗ ತಾಯಿ ಸೆಂಟಿಮೆಂಟ್ನ ಪ್ರಯೋಗ ಮಾಡಿದಂಗ ಕಾಣತೈತಿ. ಆದ್ರ, ಆ ತಾಯಿ ಮಗನಿಗೆ ಖರ್ಚಿಗಿ ಕೊಡು ರೊಕ್ಕಾ ಕಾಂಗ್ರೆಸ್‌ ಸರ್ಕಾರದಾರು ಮಾಡಿರೋ ಪಿಂಚಣಿ ಯಿಂದ ಬಂದಿದ್ದಾಗಿದ್ರ, ಸತ್ತರ್‌ ಸಾಲ್‌ ಮೇ ಕಾಂಗ್ರೆಸ್‌ ನೇ ಕುಚ್‌ ನಹಿ ಕಿಯಾ ಅಂತ ಭಾಷಣ ಮಾಡಿದ್ರ, ಕಾಂಗ್ರೆಸ್‌ ನಿಮ್ಮವ್ವಾಗ ಪಿಂಚಣಿ ಕೊಟ್ಟೇತಿ, ಅದ ಪಿಂಚಣಿ ದುಡ್ಡಿನ್ಯಾಗ ನಿಮ್ಮ ಖರ್ಚು ನಡದೈತಿ ಅಂತ ಯಾರರು ಮಣಿಶಂಕರ್‌ ಅಯ್ಯರ್‌ನಂಥಾ ಬುದ್ಧಿವಂತ ಕಾಂಗ್ರೆಸ್‌ನ್ಯಾರು ಕೇಳಿದ್ರ ಏನ್‌ ಕತಿ ಅಂತ?

ಪ್ರಧಾನಿ ಸಾಹೇಬ್ರು ಅಕ್ಷಯ ಕುಮಾರ್‌ ಯಜಮಾನಿಗೆ ತಮ್ಮ ಮ್ಯಾಲ್‌ ಸಿಟ್ಟೈತಿ ಅಂತ ಹೇಳಿದಾಗ, ಇಡೀ ದೇಶದ ನೂರಾ ಮೂವತ್ತು ಕೋಟಿ ಜನ ಬಿಡ್ರಿ, ಅದರ ಅರ್ಧಾ ದಷ್ಟಿರೋ ಹೆಣ್ಮಕ್ಕಳು ಮೋದಿ ಸಾಹೇಬ್ರ ಶ್ರೀಮತಿ ಬಗ್ಗೆ ಮಾತ್ಯಾಡ್ತಾರು ಅಂತ ಅಂದ್ಕೊಂಡಿದ್ರು ಕಾಣತೈತಿ. ಮದು ವ್ಯಾದ ಮ್ಯಾಲ ಮನ್ಯಾನ ಹೆಂಡ್ತಿ ಬಗ್ಗೆ ಮಾತಾಡಾಕೂ ಧೈರ್ಯ ಬೇಕು. ಅದ್ಕ ನಾಮದಾರ್‌ ಕುಟುಂಬದ ಯುವರಾಜರು ಮದುವಿನ ಬ್ಯಾಡ ಅಂದೊRಂಡಾರೋ ಯಾರಿಗೊತ್ತು ? ಅಧಿಕಾರ ಮಾಡಾರ ಮನ್ಯಾಗ ಹೆಂಡ್ತಿ ಇದ್ರ ಅಡಗಿ ಮನಿ ಕಷ್ಟಾ ಸುಖಾ ಎಲ್ಲಾ ಗೊತ್ತಕ್ಕಾವಂತ. ಅವಾಗ ಗ್ಯಾಸ್‌ ಸಿಲೆಂಡರ್‌ ರೇಟು, ಅಕ್ಕಿ, ಬ್ಯಾಳಿ ರೇಟು ಹೆಚ್ಚಾಗಿದ್ದು ಗೊತ್ತಾಗಿ, ದಿನಸಿ ಸಾಮಾನು ರೇಟ್‌ನ ಹತೋಟಿಗಿ ತರಾಕ್‌ ಅನುಕೂಲ್‌ ಅಕ್ಕೇತಿ. ದೇವರು ಇಲ್ಲದ ಗುಡಿ, ಹೆಣ್ಮಕ್ಕಳಿಲ್ಲದ ಮನಿ ಯಾಡೂ ಒಂದ ಅಂತ. ಎಷ್ಟು ಗಂಟಿ ಬಾರಿಸಿದ್ರೂ ಏನೂ ಪ್ರಯೋಜನ ಆಗುದಿಲ್ಲ. ನಮ್ಮದು ಟೂರ್‌ ಕನ್ಫರ್ಮ್ ಆಗದ ಬ್ಯಾರೇದಾರ ಮನ್ಯಾವರ ಬಗ್ಗೆ ಮಾತಾಡಿ ನಮ್ಮ ಅಡಿಗಿ ಮನ್ಯಾನ ಭಾಂಡೆ ಯಾಕ್‌ ನೆಗ್ಗಸೂದು.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next