Advertisement

ಬಿಹಾರ: ಅ.28ಕ್ಕೆ ಪ್ರಥಮ ಹಂತದ ಚುನಾವಣೆ, 71 ಕ್ಷೇತ್ರ-1066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

06:46 PM Oct 27, 2020 | Nagendra Trasi |

ಪಾಟ್ನಾ:ಬಿಹಾರ ವಿಧಾನಸಭೆ ಚುನಾವಣೆಯ ಪ್ರಥಮ ಹಂತದ ಮತದಾನ ಬುಧವಾರ (ಅಕ್ಟೋಬರ್ 28 , 2020) ನಡೆಯಲಿದ್ದು, 71 ಕ್ಷೇತ್ರಗಳಲ್ಲಿ 2 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸುವ ಮೂಲಕ 1,066 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

Advertisement

ಈಗಾಗಲೇ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನಿಯಮಾವಳಿ ಪ್ರಕಟಿಸಿದ್ದು, ಅದರಂತೆ ಕೋವಿಡ್ 19 ಮುಂಜಾಗ್ರತಾ ಕ್ರಮದಂತೆ ಮತದಾನ ನಡೆಯಲಿದೆ ಎಂದು ವರದಿ ತಿಳಿಸಿದೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆ, ಮತದಾನ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮತದಾನ ಕೇಂದ್ರಗಳನ್ನು ಹೆಚ್ಚಿಸಲಾಗಿದೆ ಎಂದು ವರದಿ ಹೇಳಿದೆ.

ವಿದ್ಯುನ್ಮಾನ ಯಂತ್ರಗಳಿಗೆ ಸ್ಯಾನಿಸೈಟೇಶನ್ ಮಾಡಲಾಗುತ್ತಿದೆ. ಅಲ್ಲದೇ ಮತದಾನ ಮಾಡಲು ಮತಗಟ್ಟೆಗೆ ಬರುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮವನ್ನು ಚುನಾವಣಾ ಆಯೋಗ ತಿಳಿಸಿದೆ.

ಮತದಾನಕ್ಕೆ ಆಗಮಿಸುವ ವೇಳೆ ಧರ್ಮಲ್ ಪರೀಕ್ಷೆ ನಡೆಸಿ ಒಳಗೆ ಬಿಡಲಾಗುವುದು. 2.14 ಕೋಟಿ ಮತದಾರರು ಮತ ಚಲಾಯಿಸಲಿದ್ದು, 1.01 ಕೋಟಿ ಮಹಿಳಾ ಮತದಾರರಿದ್ದಾರೆ. ಇದರಲ್ಲಿ 599 ಮಂದಿ ತೃತೀಯ ಲಿಂಗಿ ಮತದಾರರು ಇದ್ದಿರುವುದಾಗಿ ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next