Advertisement
ವಾರ್ತಾಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿಯೊಂದು ಮತಕ್ಕೆ ತನ್ನದೇ ಆದ ಮೌಲ್ಯವಿದೆ. ಆದ್ದರಿಂದಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎಂದರು.
ಸೇವಾ ಮತದಾರರು ಮತದಾನ ಮಾಡಲು ಸಿ-ಡಾಕ್ ನೆರವಿನೊಂದಿಗೆ ಕೇಂದ್ರ ಚುನಾವಣಾ ಆಯೋಗವು “ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್’ (ಇಟಿಪಿಬಿಎಸ್) ವ್ಯವಸ್ಥೆ ರೂಪಿಸಿದೆ. ಸೇವಾ ಮತದಾರರಾಗಿ ನೋಂದಾಯಿಸಿಕೊಂಡವರಿಗೆ ತಮ್ಮ ಕ್ಷೇತ್ರದ ಹೊರ ಭಾಗದಿಂದಲೂ ಮತದಾನ ಮಾಡಲು ಇದರಿಂದ ಅವಕಾಶ ವಾಗಲಿದೆ. ನೋಂದಣಿ ಮಾಡಿಕೊಂಡ ಸೇವಾ ಮತದಾರರ ಇಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್‌ನ್ನು ಸಂಬಂಧಪಟ್ಟ ರೆಕಾರ್ಡ್ ಆμಸರ್ ಮತ್ತು ಯೂನಿಟ್ ಆμàಸರ್‌ಗೆ ಕಳಿಸಲಾಗುತ್ತದೆ. ಅವರು ಒಟಿಪಿ ಹಾಕಿ ಅದನ್ನು ಡೌನ್‌ಲೋಡ್ ಮಾಡಿ ಸಂಬಂಧಪಟ್ಟ ಸೇವಾ ಮತದಾರನಿಗೆ ಕೊಡಬೇಕು. ಬಳಿಕ ಲಕೋಟೆ ಮೂಲಕ ಚುನಾವಣಾಧಿಕಾರಿಗೆ ಕಳುಹಿಸಬೇಕು.
Related Articles
ಸೇವಾ ಮತದಾರರು ಇಟಿಪಿಬಿಎಸ್ ಮೂಲಕ ಮತದಾನ ಮಾಡಬಹುದು. ಇದಲ್ಲದೇ ಅವರು “ಪ್ರಾಕ್ಸಿ’ಯನ್ನು ನೇಮಿಸಬಹುದು. ಅಂದರೆ, ತಮ್ಮ ಬದಲಿಗೆ ಸೇವಾ ಮತದಾರರು ತಮ್ಮ ಆಪ್ತರು, ಹೆಂಡತಿ, ತಂದೆ- ತಾಯಿಯನ್ನು ಬದಲಿ ಪ್ರತಿನಿಧಿ (ಪ್ರಾಕ್ಸಿ) ಎಂದು ಗುರುತಿಸಬೇಕು. ಆ ಬದಲಿ ಪ್ರತಿನಿಧಿ ವಕೀಲರಿಂದ ನೋಟರಿ ಮಾಡಿಸಿ ಕೊಂಡು ಮತಗಟ್ಟೆಗೆ ಹೋಗಿ ಸೇವಾ ಮತದಾರರ ಪರ ಮತ ಹಾಕಬಹುದು.
Advertisement
ಯಾರು ಸೇವಾ ಮತದಾರರು?ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20ರ ಉಪ ಸೆಕ್ಷನ್ (8)ರ ಅನ್ವಯ ಕೇಂದ್ರ ಶಸಸ್ತ್ರ ಪಡೆಗಳ ಸಿಬ್ಬಂದಿ, ಅಧಿಕಾರಿಗಳು. ಸೇನಾ ಕಾಯ್ದೆ 1950ರ ಸೆಕ್ಷನ್ 46 ಅನ್ವಯವಾಗುವ ಸೇನಾ ಸಿಬ್ಬಂದಿ. ರಾಜ್ಯದ ಹೊರ ಭಾಗಗಳಲ್ಲಿ ಪೊಲೀಸ್ ಶಸಸ್ತ್ರಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದವರು ಹಾಗೂ ಕೇಂದ್ರ ಸರ್ಕಾರದ ಸೇವೆ ಮೇರೆಗೆ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸೇವಾ ಮತದಾರರು ಎಂದು ಹೇಳಲಾಗುತ್ತದೆ. ನೋಂದಣಿ ಹೇಗೆ: ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫಾರಂ-2ರಲ್ಲಿ ಸಶಸ್ತ್ರ ಪಡೆಗಳಲ್ಲಿ ಬೇರೆ ರಾಜ್ಯಗಳಲ್ಲಿ ಸೇವೆಯಲ್ಲಿರುವವರು ಫಾರಂ- 2ಎರಲ್ಲಿ, ವಿದೇಶಗಳಲ್ಲಿ ಕೇಂದ್ರದ ಸೇವೆಯಲ್ಲಿರುವವರು ಫಾರಂ-3 ಭರ್ತಿ ಮಾಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಓಟ್ ಹಾಕಿಲ್ಲ
32 ವರ್ಷದ ಸೇವಾವಧಿಯಲ್ಲಿ ಯಾವತ್ತೂ ಮತದಾನ ಮಾಡಿಲ್ಲ. ಚುನಾವಣೆಗಳ ಸಂದರ್ಭದಲ್ಲಿ ನಾವು ಚುನಾವಣಾ ಕರ್ತವ್ಯದ ಮೇಲೆ ಇರುತ್ತೇವೆ ಅಥವಾ ಬೇರೆ ಕರ್ತವ್ಯದಲ್ಲಿ ನಿಯೋಜಿತರಾಗಿರುತ್ತೇವೆ. ಸೇವಾ ಮತದಾರರ ವ್ಯವಸ್ಥೆ ಜಾರಿಗೆ ತಂದು ಚುನಾವಣಾ ಆಯೋಗ ನಮಗೂ ಅವಕಾಶಮಾಡಿ ಕೊಟ್ಟಿರುವುದು ಸಂತಸದ ಸಂಗತಿ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸಿಆರ್‌ಪಿಎಫ್ಐ ಜಿ ಗಿರಿಪ್ರಸಾದ್ ಹೇಳಿದರು.