ಬೆಂಗಳೂರು: ಮತದಾನಕ್ಕೆ ಪೂರಕವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ಯಾಚರಣೆ ಮಾಡಿದ ಬಿಎಂಟಿಸಿ ಬಸ್‌ಗಳು, ಒಂದೇ ದಿನ ದಾಖಲೆಯ ಆದಾಯ ಸಂಗ್ರಹಿಸಿವೆ.
ಸಾಮಾನ್ಯವಾಗಿ ದಿನಕ್ಕೆ ಬಿಎಂಟಿಸಿ ಬಸ್‌ಗಳು ತರುವ ಆದಾಯ 3ರಿಂದ 4 ಕೋಟಿ ರೂ. ಆದರೆ, ಗುರುವಾರ ಒಂದೇ ದಿನ ಹೆಚ್ಚು-ಕಡಿಮೆ ದುಪ್ಪಟ್ಟು ಅಂದರೆ 8 ಕೋಟಿ ರೂ. ಗಳಿಸುವ ಮೂಲಕ ದಾಖಲೆ ನಿರ್ಮಿಸಿವೆ. ಮತದಾನದ ಹಿಂದಿನ ದಿನ ಮತ್ತು ಮರುದಿನ ಹೊರ ಜಿಲ್ಲೆಗಳಲ್ಲೂ ಕಾರ್ಯಾಚರಣೆ ಮಾಡಿದ್ದರ ಫಲವಾಗಿ ಈ ದಾಖಲೆ
ಆದಾಯ ಹರಿದುಬಂದಿದೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲಿ 8,100 ಬಸ್‌ಗಳಿದ್ದು, ಚುನಾವಣಾ ಸಿಬ್ಬಂದಿ ಕರೆದೊಯ್ಯಲು ಮತ್ತಿತರ ಚುನಾವಣಾ ಕಾರ್ಯಕ್ಕೆ 4 ಸಾವಿರಕ್ಕೂ ಅಧಿಕ ಬಸ್ ಬಳಸಿಕೊಳ್ಳಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಆಗಲಿರುವ ಅನಾನುಕೂಲ ತಪ್ಪಿಸಲು ಹೊರಜಿಲ್ಲೆಗಳಿಗೆ ಬಸ್‌ಗಳ ಕಾರ್ಯಾಚರಣೆಗೂ ಅವಕಾಶ ನೀಡಿತ್ತು. ಅದರಂತೆ ಮತದಾನದ ಹಿಂದಿನ ದಿನ ಬಿಎಂಟಿಸಿಯ 550, ಮರುದಿನ 300 ಬಸ್‌ಗಳು ಹೊರ ಜಿಲ್ಲೆಗಳಿಗೆ ಸಂಚರಿಸಿವೆ. ಇದರಲ್ಲಿ ವೋಲ್ವೋ ಮತ್ತು ಸಾಮಾನ್ಯ ಬಸ್‌ಗಳೂ ಸೇರಿವೆ.