Advertisement

ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲಾಗದು

01:04 PM Apr 17, 2019 | Team Udayavani |

ಬ್ಯಾಡಗಿ: ಆಣೂರ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿರುವ ಗ್ರಾಮಸ್ಥರ ಮನವೊಲಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ನಡೆ ಖಂಡನೀಯ. ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ರೈತ ಮುಖಂಡ ಗಂಗಣ್ಣ ಎಲಿ ಹೇಳಿದರು.

Advertisement

ಮಂಗಳವಾರ ವಿಎಸ್‌ಎಸ್‌ ಬ್ಯಾಂಕ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಎರಡೂ ಪಕ್ಷದ ನಾಯಕರು ಬಂದು ಚುನಾವಣೆ ಪ್ರಚಾರ ನಡೆಸಿದ್ದಾರೆ. ಯಾರಿಗೂ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಅವರಿಗೆ ಪ್ರಚಾರಕ್ಕೆ ಅವಕಾಶ ನೀಡಿದ್ದೇವೆ. ಆದರೆ, ಇದನ್ನೆ ಜಿಲ್ಲಾಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಂತಿದೆ. ಸ್ವತಃ ಅವರೇ ಭೇಟಿ ನೀಡಿದ್ದಾಗ ಗ್ರಾಮಸ್ಥರೆಲ್ಲರೂ ಒಕ್ಕೋರಲಿನಿಂದ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇವು. ಆದರೆ, ಇದೀಗ ಈ ರೀತಿಯ ಅರ್ಥವಿಲ್ಲದ ಹೇಳಿಕೆಯನ್ನು ಯಾರ ಮನವೋಲಿಸಿ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಪ್ರವೀಣ ಹೊಸಗೌಡ್ರ ಮಾತನಾಡಿ, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಕೇಂದ್ರ ಚುನಾವಣಾ ವೀಕ್ಷಕರು ಮತದಾನ ಮಾಡುವಂತೆ ಜನತೆಗೆ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಜನರು ಕೆರೆಗೆ ನೀರು ಬರುವವರೆಗೆ ಮತದಾನದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಇದಕ್ಕೆ ಅಧಿಕಾರಿಗಳು ಮತದಾನ ಮಾಡದಿದ್ದಲ್ಲಿ ಗ್ರಾಮಕ್ಕೆ ದೊರೆಯಲಿರುವ ಸರಕಾರಿ ಸೌಲಭ್ಯ ಕಡಿತಗೊಳಿಸುವುದಾಗಿ ಜನರಲ್ಲಿ ಭಯ ಮೂಡಿಸಿದ್ದಾರೆ. ನಿಮ್ಮ ಈ ಹೆದರಿಕೆ ಮಾತುಗಳಿಗೆ ನಾವು ಜಗ್ಗಲ್ಲ ಮತ್ತು ನಿರ್ಧಾರಿಂದ ಹಿಂದೇ ಸರಿಯಲ್ಲ ಎಂದರು.

ಪಿ.ಬಿ.ಬಣಕಾರ ಮಾತನಾಡಿ, ಸಮನ್ವಯ ಸಮಿತಿಯಲ್ಲಿ ಈಗಾಗಲೇ ಗ್ರಾಮಸ್ಥರು ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲು ಮಾಡಿದ ಮನವಿಗೆ ಸ್ಪಂದಿಸಿದ್ದಾರೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳು, ಯಾವಾಗ ಗ್ರಾಮಕ್ಕೆ ಭೇಟಿ ನೀಡಿ ಯಾರ ಮನವೋಲಿಸಿದರು ಗೊತ್ತಾಗುತ್ತಿಲ್ಲ, 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸದ ಸರಕಾರ ಹಾಗೂ ಅಧಿಕಾರಿಗಳು ಮೊದಲು ನಮ್ಮ ಸಮಸ್ಯೆಗೆ ಸ್ಪಂದಿಸಲಿ. ಆನಂತರ ಅವರ ಮಾತಿಗೆ ನಾವು ಸ್ಪಂದಿಸುತ್ತೇವೆ ಎಂದರು.

ಸುರೇಶ ಚಲವಾದಿ, ಜಿ.ಆರ್‌.ಬಡ್ಡಿಯವರ, ಸಿ.ಕೆ.ಬಡ್ಡಿವರ, ಮುರಿಗೆಪ್ಪಗಾಣಿಗೇರ, ಎಸ್‌. ಎಸ್‌.ಹಲಗೇ ರಿ, ಎನ್‌.ಎನ್‌.ಬಡ್ಡಿಯವರ ಸೇರಿದಂತೆ ಇನ್ನಿತರರಿದ್ದರು.

Advertisement

ಮತದಾನ ಮಾಡದಿದ್ದಲ್ಲಿ ಗ್ರಾಮಕ್ಕೆ ದೊರೆಯಲಿರುವ ಸರಕಾರಿ ಸೌಲಭ್ಯ ಕಡಿತಗೊಳಿಸುವುದಾಗಿ ಜನರಲ್ಲಿ ಭಯ ಮೂಡಿಸಿದ್ದಾರೆ. ನಿಮ್ಮ ಈ ಹೆದರಿಕೆ ಮಾತುಗಳಿಗೆ ನಾವು ಜಗ್ಗಲ್ಲ, ನಿರ್ಧಾರಿಂದ ಹಿಂದೇ ಸರಿಯಲ್ಲ.
ಗಂಗಣ್ಣ ಎಲಿ, ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next