Advertisement

ಕಸ ಸಂಗ್ರಹ ವಾಹನ ಮೂಲಕ ಮತದಾನ ಜಾಗೃತಿ

02:58 PM Apr 30, 2018 | |

ಕಲಬುರಗಿ: ಚುನಾವಣೆ ಆಯೋಗ ಸಿದ್ಧಪಡಿಸಿರುವ ಮತದಾರರ ಜಾಗೃತಿ ಕುರಿತ ಧ್ವನಿ ಮುದ್ರಿಕೆಗಳನ್ನು ಹಾಗೂ ಜಿಂಗಲ್ಸ್‌ಗಳನ್ನು ಪಾಲಿಕೆ ವ್ಯಾಪ್ತಿಯ ಹಾಗೂ ಜಿಲ್ಲೆಯ ಗ್ರಾಪಂಗಳಲ್ಲಿರುವ ಕಸ ಸಂಗ್ರಹ ವಾಹನಗಳ ಮೂಲಕ ಬಿತ್ತರಿಸಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

Advertisement

ಜಿಲ್ಲಾ ಸ್ವೀಪ್‌ ಸಮಿತಿಯಿಂದ ನಗರದ ಜಗತ್‌ ವೃತ್ತದಲ್ಲಿ ಕಸ ಸಂಗ್ರಹಣೆ ಮಾಡುವ ವಾಹನಗಳಿಗೆ ಜಿಂಗಲ್ಸ್‌ ಮತ್ತು ಪೋಸ್ಟರ್‌ಗಳನ್ನು ಅಳವಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ ಚಾಲನೆ ನೀಡಿದರು.

ನಗರದಲ್ಲಿ ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ 29 ಬೊಲೇರೊ ಟಿಪ್ಪರ್‌ ಮತ್ತು 57 ಆಟೋ ಟಿಪ್ಪರ್‌ಗಳಿವೆ. ಇವುಗಳಿಗೆ ಈಗಾಗಲೇ ಸೌಂಡ್‌ ಸಿಸ್ಟಮ್‌ ಅಳವಡಿಸಲಾಗಿದೆ. ಒಳ್ಳೆಯ ಕರ ಸಂಗ್ರಹವಿರುವ ಗ್ರಾಪಂಗಳಲ್ಲಿ ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್‌ ನೀಡಲಾಗಿದೆ. ಜಿಲ್ಲೆಯಲ್ಲಿ ಇಂಥಹ 40 ಆಟೋ ಟಿಪ್ಪರಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ವಿವರಿಸಿದರು.

ನಗರದ ಎಲ್ಲ 55 ವಾರ್ಡುಗಳಲ್ಲಿ ಮಹಾನಗರ ಪಾಲಿಕೆ ಕಸ ಸಂಗ್ರಹಣೆ ಮಾಡುವ ವಾಹನಗಳು ಬೆಳಗಿನ 6 ಗಂಟೆಯಿಂದ
ಪ್ರಾರಂಭಿಸಿ ಎಲ್ಲ ಮನೆಗಳಿಗೆ ತಲುಪುತ್ತವೆ.ಈ ವಾಹನಗಳು ಎಲ್ಲ ಮನೆಗಳಿಂದ ಕಸ ಸಂಗ್ರಹಿಸುವ ಸಮಯದಲ್ಲಿ ಚುನಾವಣೆ ಹಾಗೂ ಮತದಾನ ಜಾಗೃತಿ ಗೀತೆಗಳನ್ನು ಬಿತ್ತರಿಸುವ ಮೂಲಕ ಎಲ್ಲ ಮತದಾರರಿಗೆ ಚುನಾವಣೆ, ಮತದಾನದ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಕಸ ಸಂಗ್ರಹಣೆ ವಾಹನಗಳ ಮೇಲೆ ವಿವಿ ಪ್ಯಾಟ್‌, ಎಲೆಕ್ಟ್ರಾನಿಕ್‌ ಮತಯಂತ್ರ, ಮತದಾನದ ದಿನಾಂಕ, ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವ ಬಗ್ಗೆ ಹಾಗೂ ಒಂದು ಮತದ ಮಹತ್ವದ ಬಗ್ಗೆ ಮಾಹಿತಿ ನೀಡುವ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

Advertisement

ಜಿಪಂ ಉಪ ಕಾರ್ಯದರ್ಶಿ ಮಹ್ಮದ್‌ ಯುಸೂಫ್‌, ಸ್ವೀಪ್‌ ನೋಡಲ್‌ ಅಧಿಕಾರಿ ಮೈಸೂರು ಗಿರೀಶ, ಜಿಪಂ ಸಹ ಕಾರ್ಯದರ್ಶಿ ಸಂಪತ್‌ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೊಡ, ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾ ಧಿಕಾರಿ ಚನ್ನಬಸಪ್ಪ ಮುಧೋಳ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next