ವೊಂದನ್ನು ನಿರ್ಮಿಸುವ ಮೂಲಕ ಸಹೋದರರಿಬ್ಬರು ಗಮನ ಸೆಳೆದಿದ್ದಾರೆ. “ಒಂದು ಮತದ ಸುತ್ತ’ ಕಿರುಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ಕೃಷ್ಣ ಪಂತ ಹಾಗೂ ರಾಘವೇಂದ್ರ ಪಂತ ಎಂಬ ಸಹೋದರರು ರವಿರತ್ನ ಕ್ರಿಯೇಶನ್ಸ್ ಅಡಿಯಲ್ಲಿ 14 ನಿಮಿಷಗಳ ಈ ಕಿರುಚಿತ್ರ ನಿರ್ಮಿಸಿದ್ದು, ಇದು ಮತದಾನ ಹಕ್ಕಿನ ಮಹತ್ವವನ್ನು ಸಾರಿ ಹೇಳುತ್ತಿದೆ.
Advertisement
ಕಿರುಚಿತ್ರದಲ್ಲಿ ರಂಗಾಯಣ ಮಾಜಿ ನಿರ್ದೇಶಕ, ರಂಗಕರ್ಮಿ ಸುಭಾಸ ನರೇಂದ್ರ, ಯುವಕರಿಗೆ ಮತದಾನ ಮಹತ್ವದ ಮನನ ಮಾಡುವ ಉಪನ್ಯಾಸಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಪ್ರಕಾಶ ಧುಳೆ, ಕೇಶವ ಕರ್ಜಗಿ ಸೇರಿ ಸುಮಾರು 15 ಕಲಾವಿದರು ನಟಿಸಿದ್ದಾರೆ. ಶಿವಾನಿ ಅಕ್ಕಿ ಅವರ ಹಿನ್ನೆಲೆ ಗಾಯನವಿದೆ. ನಾಲ್ಕೈದು ದಿನಗಳಲ್ಲಿ ಒಟ್ಟಾರೆಯಾಗಿ ಕಿರುಚಿತ್ರದ ನಿರ್ಮಾಣಕಾರ್ಯ ಮುಗಿಸಲಾಗಿತ್ತು.
ಮಾಡುವುದಾದರೂ ಏನು. ಎಲ್ಲರೂ ಅವರೇ ಎಂಬ ಮನೋಭಾವ ಯುವಕರಲ್ಲಿ ಹೆಚ್ಚುತ್ತಿದ್ದು, ಮತದಾನಕ್ಕೆ ನಿರಾಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿರುಚಿತ್ರದ ಮೂಲಕ ಜಾಗೃತಿ ಮೂಡಿಸಲು, ಯುವಕರು ಹಾಗೂ ವಿಶೇಷವಾಗಿ ಮತದಾನ ದಿನ ರಜೆ ಮಜಾ ಸವಿಯಲು ತೆರಳುವವರನ್ನು ಮತದಾನಕ್ಕೆ ಆಕರ್ಷಿಸಲು ಯತ್ನಿಸಲಾಗಿದೆ. ನಾವು ಯಾವುದೇ ಪಕ್ಷ-ವ್ಯಕ್ತಿ ಪರ ಪ್ರಚಾರ ಸಂದೇಶ ನೀಡಿಲ್ಲ.
ಬದಲಾಗಿ ಯಾವುದೇ ಪಕ್ಷ ಅಥವಾ ಯಾವುದೇ ವ್ಯಕ್ತಿಯಾಗಲಿ ಒಟ್ಟಾರೆ ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹುದೊಡ್ಡ ಮೌಲ್ಯ ಹಾಗೂ ಮಹತ್ವ ಇದೆ ಎಂಬ ಸಂದೇಶವನ್ನು ಒಂದು ಮತದ ಸುತ್ತ ಕಿರುಚಿತ್ರ ನೀಡುತ್ತಿದೆ ಎಂಬುದು ಕಿರುಚಿತ್ರದ ನಿರ್ದೇಶಕ ರಾಘವೇಂದ್ರ ಪಂತ ಅವರ ಅನಿಸಿಕೆ.