Advertisement

ಮಂಗಳೂರು ವಿವಿ ವಿದ್ಯಾರ್ಥಿಗಳು, ಉಪನ್ಯಾಸಕರಿಂದ ಮತದಾನ ಜಾಗೃತಿ

08:03 PM Apr 10, 2019 | Sriram |

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು,ಸಂಶೋಧನ ವಿದ್ಯಾರ್ಥಿಗಳು ಮತ್ತು ಭೋದಕ ಸಿಬಂದಿ ನೇತೃತ್ವದಲ್ಲಿ ಕೊಣಾಜೆ, ಪಜೀರು ಮತ್ತು ನರಿಂಗಾನ ಗ್ರಾಮಗಳಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.

Advertisement

ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಎ.ಎಂ. ಖಾನ್‌ ಅಭಿಯಾನಕ್ಕೆ ಚಾಲನೆ ನೀಡಿದರು.

ಜಾಗೃತಿ ಮೂಡಿಸುವಲ್ಲಿ ಯಶಸ್ವಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತ ದಾನ ಎಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ ಎಂಬ ಉದ್ದೇಶದಿಂದ ದ.ಕ. ಜಿಲ್ಲಾ ಪಂಚಾಯತ್‌ ಮತ್ತು ವಿಶ್ವವಿ ದ್ಯಾನಿಲಯದ ಬೆಂಬಲದೊಂದಿಗೆ ನಡೆದ ಮನೆ ಮನೆ ಅಭಿಯಾನದಲ್ಲಿ ಮೂರು ಗ್ರಾಮದ ಮತದಾರರನ್ನು ಸಂಪ ರ್ಕಿಸಿ ಮತದಾನದ ಮಹತ್ವ ಮತ್ತು ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಅಭಿಯಾನಕ್ಕೆ ಗ್ರಾಮ ಪಂಚಾಯತ್‌ ಪಿಡಿಒ, ಬೂತ್‌ ಮಟ್ಟದ ಅಧಿಕಾರಿಗಳು ಮತ್ತು ಸಿಬಂದಿ ಸಹ ಕಾರ ಮತ್ತು ಮಾರ್ಗದರ್ಶನ ನೀಡಿದರು.

ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರಾದ ಪ್ರೊ| ಜಯರಾಜ್‌ ಅಮೀನ್‌, ಪ್ರೊ|ಪಿ.ಎಲ್‌.ಧರ್ಮ,ಡಾ|ದಯಾ ನಂದ್‌ ನಾಯ್ಕ ಮತ್ತು ಡಾ| ರಾಜ್‌ ಪ್ರವೀಣ್‌ ಮೊದಲಾದ ವರು ಈ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next