Advertisement

ಚುನಾವಣೆ ಸಿಬ್ಬಂದಿಯಿಂದ ಮತಯಂತ್ರ ಜಾಗೃತಿ

04:38 PM Apr 03, 2019 | Naveen |

ಆಳಂದ: ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ 2019ರ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಾಲೂಕಿನ ಭಾರತ ಚುನಾವಣೆ ಆಯೋಗದ ಸಿಬ್ಬಂದಿ 2ನೇ ಹಂತದ ಅಣುಕು ಮತದಾನ ಮೂಲಕ ಮತಯಂತ್ರ ಜಾಗೃತಿ ಅಭಿಯಾನ ಕೈಗೊಂಡು ಮತದಾನಕುರಿತು ಮತದಾರರಿಗೆ ಮಾಹಿತಿ ಒದಗಿಸಿದರು.

Advertisement

ಅಭಿಯಾನದಲ್ಲಿ ಇವಿಎಂ ಪ್ಯಾಡ್‌ ಮತ್ತು ವಿವಿಪಿಎಟಿ ಮತಯಂತ್ರಗಳ ಜಾಗೃತಿಯನ್ನು ಶಕಾಪುರ, ಸಂಗೋಳಗಿ ಜಿ. ಮೋರಿಸಾಬ ತಾಂಡಾ, ಗೊಲ್ಲಹಳ್ಳಿ, ಜಮಗಾ ಜೆ. ಜಿಡಗಾ, ರಾಜೋಳ ಸೇರಿದಂತೆ 15 ಗ್ರಾಮಗಳನ್ನು ಸೆಕ್ಟಟರ್‌ ಅಧಿಕಾರಿ ಗೌರಿಶಂಕರ, ಕಂ.ನೀ. ಶರಣಬಸಪ್ಪ ಹಕ್ಕಿ, ವಿ.ಎ. ರಮೇಶ ಮಾಳಿ ಪಿಯು ಕಾಲೇಜಿನ ಉಪನ್ಯಾಸಕ ಗಿರೀಶ ರೋಗಿ ನೇತೃತ್ವದ ತಂಡದಿಂದ ಅಭಿಯಾನ ಕೈಗೊಳ್ಳಲಾಗಿದೆ.

ಅಲ್ಲದೆ, ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಆಯಾ ತಂಡದ ಸಿಬ್ಬಂದಿ ಮತಯಂತ್ರದ ಮೂಲಕ ಸಾರ್ವಜನಿಕರಿಂದ ಅಣಕು ಮತದಾನ ನಡೆಸಿ ಜಾಗೃತಿ ಮೂಡಿಸಿದರು.

ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಗಿರೀಶ ಪಾಟೀಲ, ಸಹಾಯಕ ಚುನಾವಣಾಧಿ ಕಾರಿ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ನೇತೃತ್ವದಲ್ಲಿ ತಾಲೂಕಿನ ಒಟ್ಟು 104 ಹಳ್ಳಿ 36 ತಾಂಡಾಗಳಲ್ಲಿ 10 ತಂಡಗಳನ್ನು ರಚಿಸುವ ಮೂಲಕ, ತಲಾ ತಂಡಗಳಿಗೆ 10 ಗ್ರಾಮಗಳನ್ನು ವಹಿಸಲಾಗಿದೆ. ಈ ಮೂಲಕ ಮಂಗಳವಾರದಿಂದ ಎರದು ದಿನಗಳವರೆಗೆ ನಡೆಯುವ ಮತದಾನ ಜಾಗೃತಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next