Advertisement

ಮತದಾನ ಜಾಗೃತಿ ಕರಪತ್ರ ಅಭಿಯಾನ

03:36 PM May 03, 2018 | |

ಬೆಳ್ತಂಗಡಿ : ಮತದಾನದ ಅಗತ್ಯತೆ ಕುರಿತು ಜನರಿಗೆ ತಿಳಿವಳಿಕೆ ನೀಡಬೇಕಾಗಿದೆ. ಸಂಘ-ಸಂಸ್ಥೆಗಳು ಮನೆ ಮನೆಗೆ ತೆರಳಿ ಮತದಾನ ಜಾಗೃತಿ ಮೂಡಿಸಿದಾಗ ಹೆಚ್ಚು ಮತದಾನ ಆಗುವುದರಲ್ಲಿ ಅನುಮಾನವಿಲ್ಲ ಎಂದು ಪತ್ರಕರ್ತ ಭುವನೇಶ್‌ ಗೇರುಕಟ್ಟೆ ಅವರು ಹೇಳಿದರು. ಅವರು ಜೇಸಿ ಭವನದಲ್ಲಿ ಬೆಳ್ತಂಗಡಿ ಮಂಜುಶ್ರೀ ಜೇಸಿಐಯಿಂದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಮತದಾನಕ್ಕಾಗಿ ಮತದಾನ ಜಾಗೃತಿ ಕರಪತ್ರ ಅಭಿಯಾನ ಕಾರ್ಯಕ್ರಮ ಅಂಗವಾಗಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಜೇಸಿ ಅಧ್ಯಕ್ಷ ಕಿರಣ್‌ಕುಮಾರ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಶಾಲ್‌ ಅಗಸ್ಟಿನ್‌, ವಲಯಾಧಿಕಾರಿಗಳಾದ ಚಿದಾನಂದ ಇಡ್ಯಾ, ವಸಂತ ಶೆಟ್ಟಿ ಶ್ರದ್ಧಾ, ಪೂರ್ವಾಧ್ಯಕ್ಷ ನಾರಾಯಣ ಶೆಟ್ಟಿ, ಕೋಶಾಧಿಕಾರಿ
ಗುರುರಾಜ್‌, ಉಪಾಧ್ಯಕ್ಷರಾದ ಪ್ರಸಾದ್‌ ಕಕ್ಕಿಂಜೆ, ಸತೀಶ್‌ ಸುವರ್ಣ, ಪ್ರಶಾಂತ್‌ ಲ್ಯಾಲ, ಜತೆ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಮೊದಲಾದವರು ಉಪಸ್ಥಿತದ್ದರು.

Advertisement

Udayavani is now on Telegram. Click here to join our channel and stay updated with the latest news.

Next