Advertisement

ಮತದಾರರೇ ಬಿಜೆಪಿಗೆ ಗೇಟ್‌ಪಾಸ್‌ ನೀಡ್ತಾರೆ: ಸತೀಶ

03:25 PM Apr 11, 2019 | pallavi |
ಗೋಕಾಕ: ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರಕಾರಕ್ಕೆ ಈ ಬಾರಿ ಮತದಾರರು ಗೇಟ್‌ಪಾಸ್‌ ನೀಡಲಿದ್ದಾರೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದ ಸಂಗನಕೇರಿ, ಹುಣಶ್ಯಾಳ ಪಿ.ಜಿ. ಸೇರಿದಂತೆ ವಿವಿಧ ಗ್ರಾಮಗಳಲ್ಲಿ
ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅಭ್ಯರ್ಥಿ ಡಾ|ವಿ.ಎಸ್‌. ಸಾಧುನವರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿ, ಕಾಂಗ್ರೆಸ್‌ ಪಕ್ಷ ಬಡವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷವಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಮತದಾರ ನಿಶ್ಚಯಿಸಿದ್ದು ಮೈತ್ರಿ ಅಭ್ಯರ್ಥಿ ಡಾ| ವಿ.ಎಸ್‌. ಸಾಧುನವರ ಈ ಬಾರಿ ಭರ್ಜರಿ ಜಯಗಳಿಸಲಿದ್ದಾರೆ ಎಂದರು.
ಕಳೆದ ಮೂರು ಅವಧಿಯಲ್ಲಿ ಸಂಸದರಾಗಿರುವ ಸುರೇಶ ಅಂಗಡಿ ಗ್ರಾಮೀಣ ಪ್ರದೇಶಗಳತ್ತ ಗಮನವೇ ನೀಡಿಲ್ಲ. ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಈ ಬಾರಿ 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್‌ ಅಭ್ಯರ್ಥಿಗೆ ಜಯ ನಿಶ್ಚಿತ ಎಂದರು. ಈ ಸಂದರ್ಭದಲ್ಲಿ ಹುಣಶ್ಯಾಳ ಪಿ.ಜಿ. ಗ್ರಾಪಂ ಅಧ್ಯಕ್ಷ ರಾಮ ನಾಯಕ, ನಿಜಗುಣಿ ಅಥಣಿ, ಶಿವು ಪಾಟೀಲ, ಪಾಂಡು ಮನ್ನಿಕೇರಿ, ನಿಜಾಮಸಾಬ ಜಮಾದಾರ, ಆರೀಫ್‌ ಪೀರಜಾದೆ, ಇಮ್ರಾನ ಮುಲ್ಲಾ, ದಸ್ತಗೀರ ಮುಲ್ಲಾ, ಬಾಬು ಶಿರಹಟ್ಟಿ, ರಮೇಶ ಸಂಪಗಾವಿ, ಮೆಹಬೂಬ ಮುಲ್ಲಾ, ದಸ್ತಗೀರ ಮುಜಾವರ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.
ಎರಡೂ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಜಯ ಖಚಿತ
ಗೋಕಾಕ: ಜಿಲ್ಲೆಯ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಜಯಗಳಿಸುವುದು ಖಚಿತ ಎಂದು ಅರಣ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬುಧವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಕರೆದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿ, ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಮಹಾ ಸುಳ್ಳಗಾರ ನರೇಂದ್ರ ಮೋದಿ ಸರಕಾರವನ್ನು ಸೋಲಿಸುವುದು ಮುಖ್ಯವಾಗಿದ್ದು, ಕಾರ್ಯಕರ್ತರ ಕಾಂಗ್ರೆಸ್‌ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next