Advertisement

“ಲೋಕಾ’ಚುನಾವಣೆಗೆ ಮತದಾರರ ಶಾಂತ “ಉತ್ತರ’

09:36 AM Apr 24, 2019 | Team Udayavani |

ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎರಡನೇ ಹಂತದಲ್ಲಿ ಮಂಗಳವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಶೇ.–ರಷ್ಟು ಮತದಾನವಾಗಿದೆ. ಕೆಲವೊಂದು ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಮತದಾನ ಬಹುತೇಕ ಶಾಂತಿಯುವಾಗಿತ್ತು.

Advertisement

ಹಲವು ಗಣ್ಯರು, ವಯೋವೃದ್ಧರು, ದಿವ್ಯಾಂಗರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರುಗು ನೀಡಿದರು. ಇದೇ ವೇಳೆ, ಮತಯಂತ್ರಗಳಲ್ಲಿ ಕಾಣಿಸಿದ ತಾಂತ್ರಿಕ ತೊಂದರೆಯಿಂದಾಗಿ ಕೆಲವೆಡೆ ಮತದಾನ ಆರಂಭವಾಗುವುದು ವಿಳಂಬವಾದರೆ, ಮೂಲಭೂತ ಸೌಕರ್ಯಗಳ ಕೊರತೆಯ ನೆಪವೊಡ್ಡಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆಗಳೂ ವರದಿಯಾಗಿವೆ.

ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ, ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಮತಗಟ್ಟೆ ಸಂಖ್ಯೆ 118ರಲ್ಲಿ ಕಾಲಲ್ಲಿಯೇ ಮತದಾನ ಮಾಡಿದರು. ಪದವೀಧರೆಯಾಗಿರುವ ಇವರು, ಊರಲ್ಲಿಯೇ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ರಾಯಭಾರಿಯಾಗಿದ್ದರು. ಸತತ 9 ಬಾರಿಗೆ ಇವರು ಕಾಲಲ್ಲಿಯೇ ಮತದಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next