Advertisement

ಮೊಬೈಲ್‌ನಲ್ಲೇ ಮತದಾರರ ನೋಂದಣಿ ಮಾಡಿಕೊಳ್ಳಿ

02:52 PM Oct 13, 2019 | Team Udayavani |

ಶ್ರೀನಿವಾಸ ಪುರ: 18 ವರ್ಷ ತುಂಬಿದ ಪ್ರತಿ ವ್ಯಕ್ತಿ ತಮ್ಮ ಮೊಬೈಲ್‌ ಮೂಲಕವೇತ ಮದಾನ ಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಆನಂದ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್‌ ಮೂಲಕ ಮತದಾನ ಪಟ್ಟಿ ಸೇರ್ಪಡೆ ಮಾಡುವ ಬಗ್ಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆ ಕಡ್ಡಾಯ ಮತದಾನ ಮಾಡಿ ದೇಶಕ್ಕೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಅದು ತಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ನಗರ ಪ್ರದೇಶಗಳಿಗೆ ಉದ್ಯೋಗ ಅರಿಸಿಕೊಂಡು ವಲಸೆ ಹೋಗುತ್ತಿದ್ದು, ಅವರು ತಮ್ಮ ಗ್ರಾಮಗಳಿಗೆ ಚುನಾವಣಾ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಬಾರದ ಕಾರಣ ಮತದಾನ ಚಲಾಯಿಸಲು ಆಗುತ್ತಿಲ್ಲ ಮತ್ತು ನೋಂದಣಿ ಕಾರ್ಯದಲ್ಲಿ ಸರಿಯಾಗಿ ಭಾಗಿಯಾಗುತ್ತಿಲ್ಲ. ಆದ ಕಾರಣ ಶೇ.100 ಮತದಾನ ನಡೆಯುತ್ತಿಲ್ಲ ಎಂದು ಹೇಳಿದರು.

ಶೇಕಡವಾರು ಸೇರ್ಪಡೆಗಳಿಗೆ ತೊಂದರೆಯಾಗುತ್ತಿರುವುದಕ್ಕೆ ಚುನಾವಣೆ ಆಯೋಗ ತಾವು ವಾಸವಿರುವ ಕಡೆಯೇ ತಮ್ಮ ಮೊಬೈಲ್‌ ಗಳಲ್ಲಿ ವೆಬ್‌ಸೈಟ್‌ಅನ್ನು ಬಳಸಿಕೊಂಡು ತಮ್ಮ ಆಧಾರ ಸಂಖ್ಯೆ ಬಳಸಿ ಮತದಾನದ ಪಟ್ಟಿಗೆ ಸೇರ್ಪಡೆಯಾಗುವುದರಲ್ಲಿ ಆಶಾ ಕಾರ್ಯಕರ್ತರು ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಈ ಮಾಹಿತಿ ಬಳಸುವ ಬಗ್ಗೆ ತಿಳಿಸುತ್ತಾರೆ ಎಂದು ಹೇಳಿದರು. ತಾಲೂಕು ಕಚೇರಿ ಸಿಬ್ಬಂದಿ ಸುರೇಶ್‌, ತಿಪ್ಪಣ್ಣ, ರಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next