ಎಚ್.ಡಿ.ಕೋಟೆ: ಚುನಾವಣಾ ಆಯೋಗದಿಂದ ವಿತರಿಸಿರುವ ಗುರುತಿನ ಚೀಟಿ ಕೇವಲ ಸಿಮ್ ಕಾರ್ಡ್ ಖರೀದಿಗೆ ಸೀಮಿತವಾಗಬಾರದು. ಮತದಾನದ ಮಹತ್ವ, ಆಡಳಿತ ವ್ಯವಸ್ಥೆ, ಸರ್ಕಾರದ ಯೋಜನೆಗಳು ಮತ್ತಿತರ ಸಂಗತಿ ಗಳನ್ನು ತಿಳಿದುಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಶಾಯಿದ್ ಚೌತಾಯಿ ಸಲಹೆ ನೀಡಿದರು. ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ಹಕ್ಕು ದಿನ ಹಾಗೂ ಸcತ್ಛತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯ ಪಾತ್ರಗಳೇನು?, ಯಾವ ಸಮಸ್ಯೆ ಯಾರ ಬಳಿ ಚರ್ಚಿಸಿಬೇಕು, ಯಾರ ಬಳಿ ಯಾವ ಪ್ರಶ್ನೆ ಗಳನ್ನು ಕೇಳಬೇಕು ಎಂಬ ಜ್ಞಾನ ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಂಜೂ ರಾಗುವ ಅನುದಾನ, ಸದ್ಬಳಕೆ ಕುರಿತು ಪ್ರಶ್ನಿಸಬೇಕು. ಹಣ ಆಮಿಷಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶುದ್ಧವಾದ ಮತದಾನ ಚಲಾಯಿಸಿದಾಗ ಮಾತ್ರ ವ್ಯವಸ್ಥೆ ಸುಧಾರಿಸಲಿದೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ:ರಾಜಕೀಯ ಲಾಭಕ್ಕೆ ಗೋಹತ್ಯೆ ನಿಷೇಧ
ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಆರ್. ಮಹೇಶ್ ಮಾತನಾಡಿ, ಸ್ವತ್ಛತೆಯಲ್ಲಿ ತಾಲೂಕಿಗೆ ಪ್ರಶಸ್ತಿ ಲಭಿಸಲು ಪೌರಕಾರ್ಮಿಕರ ಪರಿಶ್ರಮ ಅವಿಸ್ಮರಣೀಯ. ಈ ಕೀರ್ತಿ ಕಾರ್ಮಿರಿಗೆ ಸಲ್ಲ ಬೇಕು. ವಿದ್ಯಾರ್ಥಿಗಳು, ನೆರೆಹೊರೆಯವರು ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಹಕ್ಕು ಮತ್ತು ಕರ್ತವ್ಯದ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳ ಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನಕ್ಕೆ ಅರ್ಜಿ ಸಲ್ಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ವಕೀಲ ನಾರಾಯಣೇಗೌಡ ಮಾತನಾಡಿ, ಚುನಾವಣಾ ಆಯೋಗ ಪ್ರಸ್ತುತ ಪಡಿಸಿದ ವೇಳೆಯಲ್ಲಿ ಆನ್‌ಲೈನ್ ಮೂಲಕ ಮತದಾನದ ಹಕ್ಕು ಪಡೆಯಲು ನೋಂದಾ ಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಚಾರ್ಯ ಜಯದೇವರಾಜೇ ಅರಸ್, ಉಪನ್ಯಾಸಕರಾದ ಕಾಳಿಂಗೇಗೌಡ, ಚಿಕ್ಕಣ್ಣ, ವಕೀಲರಾದ ದೊರೆಸ್ವಾಮಿ, ರಾಮ ನಾಯ್ಕ, ಎಸ್.ಉಮೇಶ್, ಮಹದೇವಸ್ವಾಮಿ, ಮಹದೇವಪ್ಪ ಸೇರಿದಂತೆ ಮತ್ತಿತರಿದ್ದರು.