Advertisement

ಮತದಾರರು ಮಿಲಿಯನ್‌ ಸನಿಹ

05:39 PM Mar 01, 2018 | |

ಚಿಕ್ಕಬಳ್ಳಾಪುರ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರರ ಆಂತಿಮ ಪಟ್ಟಿ ಸಿದ್ಧ ಗೊಂಡಿದ್ದು, ಜಿಲ್ಲಾದ್ಯಂತ ಬರೋಬ್ಬರಿ 9,97,677 ಮತದಾರರು ನೋಂದಣಿ ಯಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ಸೇರಿ ಒಟ್ಟು 5 ವಿಧಾನ ಸಭಾ ಕ್ಷೇತ್ರಗಳಿದ್ದು, ಹಲವು ತಿಂಗಳಿಂದ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಂಡಿದ್ದ ಜಿಲ್ಲಾಡಳಿತ
ಇದೀಗ ಮತದಾರರ ಪಟ್ಟಿ ಆಂತಿಮ ಗೊಳಿಸಿ 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಅರ್ಹರಾಗಿರುವ ಮತದಾರರನ್ನು ಬುಧವಾರ ಪ್ರಕಟಿಸಿದೆ. 

10 ಲಕ್ಷಕ್ಕೆ ಸಮೀಪಿಸಿದ ಮತದಾರರು: ಜಿಲ್ಲೆಯಲ್ಲಿ 4,99,572 ಪುರುಷ ಮತದಾರರು ಹಾಗೂ 4,98,105 ಮಹಿಳಾ ಮತದಾರರು ಸೇರಿ ಒಟ್ಟು 9,97,677 ಮತದಾರರ ಇದ್ದು 10 ಲಕ್ಷ ಮತದಾರರ ಸಂಖ್ಯೆಗೆ 2,323 ಮತದಾರರು ಮಾತ್ರ ಕಡಿಮೆ ಇದ್ದಾರೆ.

ಈ ಪೈಕಿ ಜಿಲ್ಲೆಯ ಅತಿ ದೊಡ್ಡ ವಿಧಾನ ಸಭಾ ಕ್ಷೇತ್ರಗಳಾಗಿರುವ ಗೌರಿಬಿದ ನೂರು ಹಾಗೂ ಚಿಂತಾಮಣಿ ಕ್ಷೇತ್ರ ಗಳಲ್ಲಿ ಮತದಾರರ ಸಂಖ್ಯೆ ತಲಾ ಎರಡು ಲಕ್ಷ ದಾಟಿದೆ. ಗೌರಿಬಿದನೂರಿ ಗಿಂತ ಚಿಂತಾಮಣಿ ತಾಲೂಕಿನಲ್ಲಿ ಹೆಚ್ಚಿನ ಮತದಾರರು ಇದ್ದಾರೆ.

ತಾಲೂಕುವಾರು ಮಾಹಿತಿ: ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1,00,315 ಪುರುಷ ಮತದಾರರು ಹಾಗೂ 1,00,609 ಮಹಿಳಾ ಮತದಾರರು ಸೇರಿ ಒಟ್ಟು 2,00,924 ಮತದಾರರು ಇದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ
97,085 ಪುರುಷರು ಹಾಗೂ 97,679 ಮಹಿಳಾ ಮತದಾರರು ಸೇರಿ 1,94,764 ಮಂದಿ ಇದ್ದಾರೆ. ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದಲ್ಲಿ 98,056 ಪುರುಷರು ಹಾಗೂ 97,752 ಮಹಿಳೆಯರು ಸೇರಿ 1,95,808 ಮತದಾರರು ನೋಂದಣಿ ಆಗಿದ್ದಾರೆ. ಶಿಡ್ಲಘಟ್ಟ
ವಿಧಾನಸಭಾ ಕ್ಷೇತ್ರದಲ್ಲಿ 98,634 ಪುರುಷರು ಹಾಗೂ 96,912 ಮಹಿಳಾ ಮತದಾರರು ಸೇರಿ 1,95,546 ಮತದಾರರು ನೊಂದಣಿಗೊಂಡಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 1,05,482 ಪುರುಷರು ಹಾಗೂ 1,05,153 ಮಹಿಳೆಯರು ಸೇರಿ
2,10,635 ಮಂದಿ ನೋಂದಣಿಯಾಗಿದ್ದಾರೆಂದು ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

1,219ರ ಜೊತೆಗೆ 36 ಹೊಸ ಮತಗಟ್ಟೆ: ಜಿಲ್ಲೆಯ ಮತದಾರರ ಪಟ್ಟಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸದಾಗಿ ಜಿಲ್ಲೇಯಲ್ಲಿ 36 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,255 ಮತದಾನ ಕೇಂದ್ರಗಳಾಗಿವೆ.

ಗೌರಿಬಿದನೂರಲ್ಲಿದ್ದ 253 ಮತಗಟ್ಟೆ ಕೇಂದ್ರಗಳ ಜೊತೆಗೆ 8 ಕೇಂದ್ರಗಳನ್ನು ತೆರೆಯಲಾಗಿದೆ. ಚಿಕ್ಕಬಳ್ಳಾಪುರದಲ್ಲಿರುವ 237 ಮತಗಟ್ಟೆ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 9 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 251
ಮತಗಟ್ಟೆ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 9, ಶಿಡ್ಲಘಟ್ಟದಲ್ಲಿ ಹಾಲಿ ಇರುವ 230 ಮತಗಟ್ಟೆ ಕೇಂದ್ರಗಳ ಜೊತೆಗೆ 2 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಿಂತಾಮಣಿ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಇರುವ 248 ಮತಗಟ್ಟೆಗಳ ಜೊತೆಗೆ 8 ಮತಗಟ್ಟೆ
ಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next