Advertisement
ನಗರದ ಕೊಂಡನಾಯಕನಹಳ್ಳಿಯಲ್ಲಿ ಶುಕ್ರವಾರ ನಡೆದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ತಮ್ಮ ವ್ಯಾಪ್ತಿಯೊಳಗಿನ ಮತದಾನದ ಬೂತ್‌ಗಳಿಗೆ ತಪ್ಪದೇ ತೆರಳಿ ಮತದಾನ ಮಾಡಬೇಕು. ಚುನಾವಣೆಯಲ್ಲಿ ಮತ ಹಾಕುವುದು ಮತದಾರರ ಹಕ್ಕಾಗಿದೆ ಎಂದರು.
ಬಳಸಿಕೊಳ್ಳುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಮತದಾನಕ್ಕೆ ತಾತ್ಸಾರ ತೋರದೆ ತಾವು ಹಾಗೂ ತಮ್ಮೊಂದಿಗೆ ಇರುವ ಮತದಾರರನ್ನು ಬೂತ್‌ಗಳಿಗೆ ಕರೆದೊಯ್ದು ಮತ ಚಲಾಯಿಸಲು ಮನವೊಲಿಸಬೇಕು. ಪ್ರತಿಯೊಬ್ಬರ ಮತದಾನವು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಲಿದೆ. ಪ್ರತಿಯೊಬ್ಬರು ವಿವೇಚನೆಯಿಂದ ಹಾಕಿದ ಮತ, ದೇಶ, ಜನರಿಗೆ ಎಂದೆಂದಿಗೂ ಹಿತವಾಗಿರುತ್ತದೆ. ಮತದಾನದ ದಿನದಂದು ತಮ್ಮೆಲ್ಲಾ ಕೆಲಸಗಳನ್ನು ಬದಿಗಿಟ್ಟು ತಪ್ಪದೇ ಮತದಾನ ಮಾಡಿ. ಮತದಾನ ಮಾಡುವುದು ಕರ್ತವ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
Related Articles
Advertisement
ಮತದಾನದ ಜಾಗೃತಿಯ ಜೊತೆಗೆ ಚುನಾವಣಾ ಆಯೋಗದ ಘೋಷಣೆಗಳನ್ನು ಪ್ರಚಾರ ಮಾಡುವ ಮೂಲಕ ಮತ್ತು ಕಲಾವಿದ ಯಲ್ಲಪ್ಪ ಭಂಡಾರದಾರ್ ಅವರಿಂದ ಮತದಾರರ ಜಾಗೃತಿ ಹಾಡುಗಳ ಮೂಲಕ ಮತದಾರರಿಗೆ ಮತದಾನದ ಬಗ್ಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲಾಯಿತು. ಭೂ ಸೇನೆ ಇಲಾಖೆಯ ಅಧಿಕಾರಿ ವೈಕುಂಠಪತಿ, ನಗರಸಭೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಇತರೆ ಸಿಬ್ಬಂದಿಗಳು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಣಕು ಪ್ರದರ್ಶನನಗರದ ಪಾಂಡುರಂಗ ಕಾಲೋನಿಯಲ್ಲಿ ಅಣಕು ಮತದಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಮತದಾರರು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತ ಚಲಾಯಿಸುವುದು ಹೇಗೆ, ಮತ ಚಲಾಯಿಸಿರುವುದು ಖಾತ್ರಿ ಪಡಿಸಿಕೊಳ್ಳುವುದನ್ನು ಮತದಾನ ಖಾತ್ರಿ ಯಂತ್ರದಲ್ಲಿ (ವಿವಿ ಪ್ಯಾಟ್) ನೋಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಡಲಾಯಿತು. ಪಾಂಡುರಂಗ ಕಾಲೋನಿಯ ಜನ ಕುತೂಹಲದಿಂದ ಆಲಿಸಿದರು. ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಮತದಾನದ ಮಹತ್ವ ಸಾರುವ ಬೀದಿ ನಾಟಕ ಪ್ರಸ್ತುತಪಡಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಸೆಕ್ಟರ್ ಅಧಿಕಾರಿ ಕಿಶೋರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಸ್. ಸಿ.ಬಂಕಾಪುರಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಯರ್ರಿಸ್ವಾಮಿ, ಭೂಸೇನೆ ಇಲಾಖೆಯ ಅಧಿಕಾರಿ ವೈಕುಂಠಪತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಕಾಂತ, ಬೂತ್‌ಮಟ್ಟದ ಅಧಿಕಾರಿಗಳು ಇದ್ದರು.