Advertisement
ಜಿಲ್ಲೆಗೆ ಸಂಬಂಧಿಸಿ ಯಾವುದೇ ಚಟುವಟಿಕೆ ಮಂಗಳೂರು ದಕ್ಷಿಣದಲ್ಲೇ ನಡೆಯುವುದರಿಂದ ರಾಜಕೀಯ ಹಾರ್ಟ್‌ಸಿಟಿ ಇದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಸಿದ ರೋಡ್ ಶೋ “ದಕ್ಷಿಣ’ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಂತಿದೆ. ಜತೆಗೆ ಮೊನ್ನೆ ಮೊನ್ನೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಹವಾ ಸೃಷ್ಟಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯೂ ರಾಜಕೀಯವಾಗಿ ಹೊಸ ಅಧ್ಯಾಯ ರೂಪಿಸಿದೆ.ಇಷ್ಟಿದ್ದರೂ ಇಲ್ಲಿ ಮತದಾರರು ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಂಡಂತೆ ಕಾಣುವುದಿಲ್ಲ. ಉದಯವಾಣಿ ಸಂಗ್ರಹಿಸಿದ ಕೆಲವರ ಅಭಿಪ್ರಾಯ ಇದನ್ನು ಪ್ರತಿಧ್ವನಿಸುತ್ತಿತ್ತು.
Related Articles
Advertisement
ಕಾವೂರು ಸಮೀಪ ಪೌರ ಕಾರ್ಮಿಕ ರೊಬ್ಬರು ಹೇಳುವ ಪ್ರಕಾರ “ಜನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆ ಬಳಿಕ ಮರೆತು ಬಿಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಇನ್ಯಾರಿಗೋ ಮತ ಹಾಕುತ್ತಾರೆ’ ಎಂದರು.“ಯಾರೇ ಗೆದ್ದರೂ ನಮಗೆ ಪ್ರಯೋ ಜನಕ್ಕೆ ಬರುವುದಿಲ್ಲ. ಗೆಲ್ಲುವ ತನಕ ನಮ್ಮವರು. ಗೆದ್ದ ಬಳಿಕ ನಾಯಕರು ನಮ್ಮತ್ತ ಮುಖ ಮಾಡುವುದಿಲ್ಲ ಎಂದು ಬಂದರು ಸಮೀಪದಲ್ಲಿ ಎದು ರಾದ ಮೀನು ವ್ಯಾಪಾರಿ ಹಸನಬ್ಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಧಿಕಾರಿಗಳು ಮನೆಗೆ ಬಂದು ಚುನಾವಣೆ ಹಬ್ಬದಲ್ಲಿ ಭಾಗವಹಿಸು ವಂತೆ ಮನವಿ ಮಾಡಿದ್ದಾರೆ. ಯಾರಿಗೆ ಓಟು ಹಾಕೋದು ಎಂದು ಹೇಳಲ್ಲ. ಮತದಾನ ಮಾಡಬೇಕು ಎಂದು ಉರ್ವ ನಿವಾಸಿ ಜಸಿಂತಾ ತಿಳಿಸಿದರು. - ಸಂತೋಷ್ ಮೊಂತೇರೊ