ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಕ್ಷೇತ್ರದ ವ್ಯಾಪ್ತಿಗೆ ಬರುವ ಹೋಸಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು ದಾಖಲೆ ಬರೆದಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿ ಕೂಡ ಲೋಕ ಸಮರದಲ್ಲಿ ಹೊಸಕೋಟೆಯಲ್ಲಿ ಗರಿಷ್ಠ ಮತದಾನ ದಾಖಲಾದರೆ ಯಲಹಂಕದಲ್ಲಿ ಕನಿಷ್ಠ ಮತದಾನ ದಾಖಲಾಗಿರುವುದು ನಾನಾ ರೀತಿಯ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಇಡೀ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಳೆದ ಬಾರಿಗಿಂತ ಶೇಕಡವಾರು ಮತದಾನ ಪ್ರಮಾಣದಲ್ಲಿ ಸರಾಸರಿ ಕ್ಷೇತ್ರದ್ಯಾಂತ ಶೇ.76.98 ರಷ್ಟು ಮತದಾನ ದಾಖಲಾಗಿದ್ದು, ಒಟ್ಟು 19.81 ಲಕ್ಷ ಮತದಾರರ ಪೈಕಿ ಒಟ್ಟು 15,25,199 ಮತದಾರರು ಮಾತ್ರ ತಮ್ಮ ಹಕ್ಕುಚಲಾವಣೆ ಮಾಡಿದ್ದಾರೆ.ಈ ಬಾರಿ ಕ್ಷೇತ್ರದ ಚುನಾವಣೆ ಜಾತಿ ಪ್ರಧಾನವಾಗಿ ಎರಡು ರಾಜಕೀಯ ಪಕ್ಷಗಳು ಪ್ರಬಲ ಸಮುದಾಯ ಗಳಿಗೆ ಟಿಕೆಟ್ ನೀಡಿ ದ್ದರಿಂದ ಚುನಾ ವಣಾ ಅಖಾಡ ಸಾಕಷ್ಟು ರಂಗೇರಿತ್ತು.
ಆದರೆ ಮತದಾ ನ ಪ್ರಮಾಣ ಅವಲೋಕಿ ಸಿದರೆ ಕಳೆದ ಬಾರಿಯಷ್ಟೇ ಈ ಬಾರಿ ಕೂಡ ದಾಖ ಲಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕೂತೂಹಲ ಮೂಡಿಸಿದೆ. ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಹೋಸಕೋಟೆ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.91 ರಷ್ಟು ಮತದಾನ ದಾಖಲಾದರೂ ಲೋಕಸಭಾ ಚುನಾವಣೆ ಯಲ್ಲಿ ಶೇ.86 .45 ರಷ್ಟು ದಾಖಲಾಗಿದೆ.
ಕಳೆದ ಲೋಕ ಸಭಾ ಚುನಾವಣೆಗೆ ಹೋಲಿಸಿದರೆ ಶೇ.4 ರಷ್ಟು ಮತದಾನ ಕಡಿಮೆ ಆದರೂ ಇಡೀ ಲೋಕಸಬಾ ಕ್ಷೇತ್ರ ದಲ್ಲಿ ಹೋಸಕೋಟೆ ಕ್ಷೇತ್ರ ಮತದಾನ ಪ್ರಮಾಣ ದಲ್ಲಿ ಈ ಬಾರಿ ಕೂಡ ತನ್ನ ದಾಖಲೆ ಉಳಿಸಿಕೊಳ್ಳುವ ಮೂಲ ಕ ಗಮನ ಸೆಳೆದಿದೆ.
ಯಲಹಂಕದಲ್ಲಿ ಕಳೆದ ಬಾರಿ ಶೇ. 61 ರಷ್ಟು ಆಗಿದ್ದು ಈ ಬಾರಿ ಶೇ.60 ರಷ್ಟು ಶೇ.1ರಷ್ಟು ಮತದಾನ ಪ್ರಮಾಣ ಕುಸಿದಿದೆ. ಉಳಿದಂತೆ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿ ದನೂರು ಹಾಗೂ ಬಾಗೇಪಲ್ಲಿ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗಿಂತ ಮತದಾನ ಪ್ರಮಾಣದಲ್ಲಿ ತುಸು ಹೆಚ್ಚಳ ಕಂಡಿದೆ.
ಕಳೆದ ಬಾರಿ ಕ್ಷೇತ್ರದಲ್ಲಿ ಒಟ್ಟಾರೆ ಶೇ. 76.78 ಮತದಾನ: ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಇಡೀ ಕ್ಷೇತ್ರದಲ್ಲಿ ಬರೋಬರಿ ಶೇ.76.78 ರಷ್ಟು ಮತದಾನ ದಾಖಲಾಗಿತ್ತು. ಒಟ್ಟು 18,08,391 ಮಂದಿ ಮತದಾರರ ಪೈಕಿ 13,88,474 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದರು. ಅತ್ಯಧಿಕ ಮತದಾನ ಹೊಸಕೋಟೆ ಕ್ಷೇತ್ರದಲ್ಲಿ ದಾಖಲಾದರೆ ಕಡಿಮೆ ಮತದಾನ ಯಲಹಂಕ ಕ್ಷೇತ್ರದಲ್ಲಿ ದಾಖಲಾಗಿತ್ತು.
– ಕಾಗತಿ ನಾಗರಾಜಪ್ಪ